ಸಾಮೂಹಿಕ ವಚನ ಪಾರಾಯಣ 1008 ಮಕ್ಕಳಿಂದ

ಬೀದರ:ಜ.31: ಬಸವಗಿರಿಯಲ್ಲಿ ನಡೆಯುತ್ತಿರುವ ವಚನ ವಿಜಯೋತ್ಸವದ ಎರಡನೇ ದಿನ ಮುಂಜಾನೆ ವಿವಿಧ ಶಾಲೆಯ 1008 ಮಕ್ಕಳಿಂದ ಹಾಗೂ ಶರಣ ಶರಣೆಯರಿಂದ ನಡೆದ ಸಾಮೂಹಿಕ ವಚನ ಪಾರಾಯಣಯವು ಪೂಜ್ಯ ಡಾ. ಗಂಗಾಂಬಿಕಾ ಅಕ್ಕನವರ ದಿವ್ಯ ನೇತೃತ್ವದಲ್ಲ್ಲಿ ಭಕ್ತಿ, ಭಾವ ಶೃದ್ದೆಯಿಂದ ನಡೆಯಿತು.

ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಶರಣರು ವಿಶ್ವಕ್ಕೆ ನೀಡಿದ ಎಂದು ಸವೆಯದ ಸಂಪತ್ತು ವಚನ ಸಾಹಿತ್ಯವಾಗಿದೆ. ವಚನಗಳು ಸತ್ಯದ ಗ್ಯಾರಂಟಿಗಳಾಗಿದ್ದು, ಸುಖ, ಶಾಂತಿ, ನೆಮ್ಮದಿಯ ಬದುಕಿನ ಸೂತ್ರಗಳಾಗಿವೆ ಎಮ್ಮ ವಚನದೊಂದು ಪಾರಾಯಣಕ್ಕೆ ವ್ಯಾಸನದೊಂದು ಪುರಾಣ ಸಮಬಾರದಯ್ಯ ಎಂಬ ಸಿದ್ಧರಾಮೆಶ್ವರರ ವಚನವು ವಚನ ಸಾಹಿತ್ಯದ ಶ್ರೇಷ್ಠತೆ ಮತ್ತು ಮಹತ್ವವನ್ನು ಸಾರುತ್ತದೆ ಎಂದರು.
ದಿವ್ಯಸಾನಿಧ್ಯ ವಹಿಸಿದ ಗುಣತೀರ್ಥವಾಡಿ ಬಸವ ಮಹಾಮನೆಯ ಪೂಜ್ಯ ಬಸವಪ್ರಭು ಸ್ವಾಮಿ ಮಾತನಾಡಿ ವಚನಗಳಲ್ಲಿ ಬಸವಾದಿ ಶರಣರ ಪ್ರಾಣವಿದೆ ವಚನ ಮಕ್ಕಳ ಅಂತರಂಗಕ್ಕೆ ಇಳಿದಾಗ ಉತ್ತಮ ಪ್ರಜೆಯನ್ನಾಗಿ ರೂಪುಗೊಳ್ಳಲು ಸಾಧ್ಯ ವಚನಗಳಲ್ಲಿ ಭಾಷೆ, ಪ್ರತಿಜ್ಞೆ, ತರಂಗ ಇದೆ ಅವು ನಮ್ಮ ಮನೆ-ಮನ ಬೆಳಗಬೇಕು. ವಚನಗಳಲ್ಲಿ ಸಾಹಿತ್ಯ, ತತ್ವಜ್ಞಾನ, ಅನುಭಾವ ಇದೆ. ಕನ್ನಡ ಸಾಹಿತ್ಯಕ್ಕೆ ಆತ್ಮದಂತೆ ಕೆಲಸ ಮಾಡುವುದು ವಚನ ಸಾಹಿತ್ಯ. ಮಾನವನನ್ನು ದೇವಮಾನವನ್ನಾಗಿ ಮಾಡುವ ಶಕ್ತಿ ವಚನ ಸಾಹಿತ್ಯ. ಪ್ರತಿಯೊಬ್ಬರ ಧರ್ಮ ಗ್ರಂಥ ವಚನ ಸಾಹಿತ್ಯ. ಇದರಲ್ಲಿ ನಂಬಿಕೆ ಇಟ್ಟರೆ ತಲೆಯೆತ್ತಿ ಬದುಕಬಹುದು ಎಂದರು.
ಸಮ್ಮುಖ ವಹಿಸಿದ ಸವದತ್ತಿಯ ಬಸವದೇವರು ಮಾತನಾಡಿ, ಬಸವಾದಿ ಶರಣರ ವಚನಗಳಲ್ಲಿ ಮಾನವೀಯ ಮೌಲ್ಯಗಳಿವೆ. ವಚನಗಳು ಸಾಮಾಜಿಕ ಸಮಾನತೆಯಿಂದ ಕೂಡಿವೆ. ವಚನಗಳ ಅಧ್ಯಯನದಲ್ಲಿ ತಮ್ಮನ್ನು ತಾವು ಮಾತ್ರ ತೊಡಗಿಸಿಕೊಂಡಾಗ ಮಾತ್ರ ವಸಚನಗಳ ಸಾರ ಅರ್ಥವಾಗಲಿಕ್ಕೆ ಸಾಧ್ಯವಾಗುತ್ತದೆ ಎಂದರು.
ಮುಖ್ಯಅತಿಥಿಗಳಾಗಿ ಡಾ. ಎಸ್.ಎಂ.ಮಾಲಿಪಾಟೀಲ, ಡಾ. ಸಿ.ಎಸ್.ಪಾಟೀಲ ಆಗಮಿಸಿದರು. ಅಧ್ಯಕ್ಷತೆ ವಹಿಸಿದ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರಾಜೇಂದ್ರಕುಮಾರ ಮಣಿಗೇರಿ ಮಾತನಾಡಿ, ಇಂದಿನ ಡಿಜಿಟಲ್ ಯುಗದ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಳ್ಳುವ ಮಕ್ಕಳನ್ನು ಇಂತಹ ವಚನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳನ್ನು ಕರೆ ತಂದು ಅವರ ಎಳೆಮನಸ್ಸಿನಲ್ಲಿ ವಚನಗಳನ್ನು ಬಿತ್ತುವ ಕಾರ್ಯ ಅತ್ಯಂತ ಶ್ಲಾಘನೀಯ ವಚನಗಳು ಸರಳ ಮತ್ತು ಸುಲಭವಾಗಿದ್ದು ಉತ್ತಮ ವ್ಯಕ್ತಿತ್ವ ರೂಪಿಸುತ್ತವೆ ಎಂದರು. ಜಾಯಕಿಡ್ಸ್ ಪಬ್ಲಿಕ್ ಶಾಲೆ ಅಧ್ಯಕ್ಷರಾದ ಸಂಧ್ಯಾರಾಣಿ ಪಾಟೀಲ ವಚನ ಪಠಣ ಮಾಡುವುದರ ಮೂಲಕ ಚಾಲನೆ ನೀಡಿದರು.
ಜಯಶ್ರೀ ಸಿದ್ದು ಮಣಿಗೆ ಗುರುಪೂಜೆ ನೇರವೇರಿಸಿದರು. ಗಣಪತಿ ಸೋಲಪುರೆ, ಗುಂಡಯ್ಯ ತೀರ್ಥಾ, ಸಂದೀಪಕುಮಾರ ಶೆಟಕಾರ, ಮಲ್ಲಿಕಾರ್ಜುನ ವಡ್ಡನಕೇರೆ ದಿಲೀಪಕುಮಾರ ಕಮಠಾಣೆ, ರಾಮಜಿ ರಾಠೋಡ, ಮಾಧವರಾವ ಪ್ರವೀಣ, ರಾಜಕುಮಾರ, ಜಗನ್ನಾಥ ಇದಲಾಯಿ, ಹಣಮಂತಪ್ಪ ಉಪ್ಪೆ, ಯೋಗೇಂದ್ರ ಯದಲಾಪೂರೆ, ಪ್ರಶಾಂತ ಪಾಟೀಲ, ರವಿಕುಮಾರ ಕಾಮಣಿ, ಸುಲೋಚನಾ ಗುದಗೆ, ಶರಣಪ್ಪಾ ಬಿರಾದಾರ, ಆಶಾ ಜೀರ್ಗೆ, ಮಲ್ಲಮ್ಮ ಮುಗುಟೆ, ಕಮಲಮ್ಮ ನೀಲಾ ಸೇರಿದಂತೆ ಇತರರಿದ್ದರು.
ಶರಣ ಸೇವಾ ಪುರಸ್ಕಾರ: ಇದೇ ಸಂದರ್ಭದಲ್ಲಿ ಡಾ. ಸುಭಾಷ ಕರ್ಪೂರ, ಸಂಗಪ್ಪ ನಾವದಗೇರೆ, ಬಸವರಾಜ ಚಾಂಗ್ಲೇರಾ, ಮಲ್ಲಿಕಾರ್ಜುನ ಸಂಗಮಕರ, ಶಿವಶರಣಪ್ಪ ವಲ್ಲೆಪೂರೆ, ಮಹಾದೇವ ಖಳ್ಳೂರೆ ಇವರಿಗೆ ಶರಣ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಟಲ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿಪೂರ್ವ ಕಾಲೇಜು ಘೋಡಂಪಳ್ಳಿ ಮಕ್ಕಳಿಂದ ವಚನ ಸಂಗೀತ ನಡೆಯಿತು. ತನ್ವಿ ಮಣಿಗೇರಿ ತಂಡದವರಿಂದ ಹಾಗೂ ಶ್ರೀ ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆಕ ಮಕ್ಕಳಿಂದ ನಡೆದ ವಚ ನೃತ್ಯ ಗಮನ ಸೆಳೆದವು. ಮಲ್ಲಮ್ಮಾ ಪಾಟೀಲ ಸ್ವಾಗತಿಸಿದರೆ ಶ್ರೀದೇವಿ ಪಾಟೀಲ ನಿರೂಪಿಸಿದರು.