
ಸೇಡಂ, ಫೆ,15: ತಾಲೂಕಿನ ಬಿಜನಳ್ಳಿ ಗ್ರಾಮದಲ್ಲಿಂದು ಕಲ್ಯಾಣ ನಡಿಗೆ ಹರಳಯ್ಯ ಜ್ಯೋತಿಯಾತ್ರೆ ಪ್ರಯುಕ್ತ ಶರಣ ಹರಳಯ್ಯ ಕಲ್ಯಾಣಮ್ಮನವರ ಚಮ್ಮಾವಿಗೆಗಳ ದೇವಸ್ಥಾನದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಜರುಗಿತ್ತು.ಪೂಜ್ಯ ಶ್ರೀ ಬಸವಪ್ರಭು ಸ್ವಾಮಿಜಿ ಗುಣತೀರ್ಥವಾಡಿ ಬಸವಕಲ್ಯಾಣ ಅವರಿಂದ ನೇರವೇರಿಸಿದರು.ಈ ವೇಳೆಯಲ್ಲಿ ಪೂಜ್ಯ ಶ್ರೀ ಶಾಂತವೀರ ಗುರುಮಠಕಲ್ ಪೂಜ್ಯ ಶ್ರೀ ಶಂಕರಲಿಂಗ ಸ್ವಾಮಿಜಿ, ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಬಸವಕುಮಾರ ಪಾಟೀಲ,ಸಂಗಮೇಶ ಎನ್ ಜವಾದಿ, ಸೋಮಶೇಖರ್ ಮಾಲಿಪಾಟೀಲ್ ತೇಗಲ ತಿಪ್ಪಿ, ಸೇರಿದಂತೆ ನೂರಾರು ಬಸವಾಭಿಮಾನಿಗಳು ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡಿದ್ದರು.




























