ನೋವುಂಡ ಅನುಭವದ ಕವಿ ಮರಗುತ್ತಿ: ಡಾ.ಕೈಲಾಸ

ಕಲಬುರಗಿ,ಅ.29-ಕನ್ನಡ ಕಾವ್ಯ ಜೀವಂತ ವಾಗಲು ಕವಿಯ ಅನುಭವ ಕಾರಣ, ನೋವುಂಡ ಕವಿ ಅನುಭವದ ಕಾವ್ಯ ರಚಿಸಲು ಸಾಧ್ಯ ಎಂಬುದಕ್ಕೆ ಮನೋಹರ ಮರಗುತ್ತಿ ಉದಾಹರಣೆ ಎಂದು ಯುವ ವಿಮರ್ಶಕ, ಡಾ.ಕೈಲಾಸ ಡೋಣಿ ಅಭಿಪ್ರಾಯಪಟ್ಟರು.
ಆಜಾದಪುರ ನಗರದಲ್ಲಿ ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನ ಏರ್ಪಡಿಸಿದ ಸಾಹಿತ್ಯ ಸಮಾಗಮ-4 ಉಪನ್ಯಾಸ ಮಾಲಿಕೆಯಲ್ಲಿ ಮನೋಹರ ಮರಗುತ್ತಿ ಕಾವ್ಯ ಕುರಿತು ಮಾತನಾಡಿ, ಸಹಜವಾದ ಕವಿ, ಇವರ ಸಮಸ್ಯೆ- ಸವಾಲುಗಳು ಕಾವ್ಯ ರೂಪಪಡೆದಿವೆ ಎಂದರು
ಮನೋಹರ ಮರಗುತ್ತಿ ಅವರ ಕಥೆ ಪರಿವರ್ತನೆ ಕಥಾ ಸಂಕಲನದಲ್ಲಿ ಐದು ಕಥೆಗಳಿವೆ. ಆ ಐದು ಕತೆಗಳು ಪರಿವರ್ತನೆ ನೆಲೆಯಲ್ಲಿ ಮೂಡಿವೆ. ವಿವಾಹ ವಿಚ್ಛೇಧನ, ಸ್ತ್ರೀ, ಸಾಮಾಜಿಕ ಚಿಂತನೆ, ಕೌಟುಂಬಿಕ, ಧರ್ಮದ, ಅಸಮಾನತೆ, ಮೂಢ ಮೂಢನಂಬಿಕೆ ಮೊದಲಾದ ಕಥೆಗಳು ಮಾನವೀಯ ಗುಣ ಹೊಂದಿವೆ ಎಂದರು.
ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಮಾತನಾಡಿ, ಮರಗುತ್ತಿ ಅವರು ಸೌಜನ್ಯಶೀಲ ಲೇಖಕರು. ತನ್ನ ಸುತ್ತ ಮುತ್ತ ಇರುವ ಘಟನೆಗಳನ್ನು ಸಾಹಿತ್ಯದಲ್ಲಿ ತಂದಿದ್ದಾರೆಂದರು.
ಹಿರಿಯ ಸಾಹಿತಿ ಡಾಕೆ.ಎಸ್.ಬಂಧು ಅವರು ಮರಗುತ್ತಿ ಸಾಹಿತ್ಯ ಏನೋ ಗೊತ್ತಿಲ್ಲ ಆದರೆ ಅತನ ಹಿಂದಿನ ನೋವು, ಸಂಕಟಗಳು ಆತನಿಗೆ ಬರಹಗಾರರನ್ನಾಗಿಸಿದೆ ಎಂದರು.
ಸಾಹಿತಿ ಮನೋಹರ ಮರಗುತ್ತಿ ಮಾತನಾಡಿ, ನಾನು ಕಾಮರ್ಸ್ ವಿದ್ಯಾರ್ಥಿ. ಸಿಮೆಂಟ್ ಕಾರ್ಖಾನೆ, ಮುತ್ತೂಟ ಕಂಪನಿಯಲ್ಲಿ ಕೆಲಸ ಮಾಡಿ, ಸಂಸಾರ ತೂಗಿಸುವಲ್ಲಿ ಸಾಕಾಗಿತ್ತು. ಗೀತಾ ನಾಗಭೂಷಣ ಅವರ ಹಸಿ ಮಾಂಸ ಮತ್ತು ಹದ್ದುಗಳು ಕಾದಂಬರಿ ಓದಿ ಪ್ರಭಾವಿತನಾಗಿ ಸಾಹಿತ್ಯ ಲೋಕ ಪ್ರವೇಶಿಸಿ ಹತ್ತು ವರ್ಷಗಳಲ್ಲಿ ಆರು ಕೃತಿ ರಚಿಸಿರುವೆ. ನನಗೆ ನನ್ನ ಬದುಕೇ ಸಾಹಿತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಸಾಹಿತಿ, ಸಿರಿಗನ್ನಡ ವೇದಿಕೆ ಅಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿ, ಸಾಹಿತ್ಯ ರಚನೆಗೆ ಇನ್ನೋರ್ವ ಬರಹಗಳ ಎರವಲು ಬೇಕಿಲ್ಲ, ಅವರ ಅನುಭವ ಅಕ್ಷರ ರೂಪಪಡೆದರೆ ಸಾಹಿತ್ಯವಾಗುವದು. ಮರಗುತ್ತಿ ಅಂತಃಕರಣ ಕವಿ,ನಯ,ವಿನಯದ ಜೊತೆಗೆ ಅವರ ಬಡತನ, ಹಸಿವು, ಸಮಾಜದ ನೀತಿ ಅವರನ್ನು ಸಾಹಿತಿಯನ್ನಾಗಿಸಿದೆ ಎಂದರು.
ಸಾಹಿತಿ ಪೆÇ್ರ.ಶೋಭಾದೇವಿ ಚೆಕ್ಕಿ ಪ್ರಾರ್ಥನಾ ಗೀತೆ ಹಾಡಿದರು. ಸಿ.ಎಸ್‍ಮಾಲಿಪಾಟೀಲ ವಚನ, ಅಂಬಾರಾಯ ಮರಗುತ್ತಿ ಜಸನಪದ ಗೀತೆ, ಅಮೃತಪ್ಪ ಅಣೂರ ತತ್ವಪದ ಪ್ರಸ್ತುತ ಪಡಿಸಿದರು. ಡಾ.ರಾಜಕುಮಾರ ಮಾಳಗೆ ಸ್ವಾಗತಿಸಿದರು, ಡಾ.ಶೀಲಾದೇವಿ ಬಿರಾದಾರ ನಿರೂಪಿಸಿದರು, ಡಾ.ಸಿದ್ಧಪ್ಪ ಹೊಸಮನಿ ವಂದಿಸಿದರು.
ಡಾ.ಜಯದೇವಿ ಗಾಯಕವಾಡ, ವಂದಿತನ, ಡಾ.ಮಲ್ಲಿನಾಥ ನಿಂಬರ್ಗೆ, ಢಾಕಪ್ಪ ಮೋತಿಲಾಲ, ಅಣ್ಣಾರಾವ್ ಯಲಮಡಗಿ,ರೇವಣಸಿದ್ಧಪ್ಪ ಮಹಾಸೆ,ಶಾಮರಾವ್ ಮಾಡ್ಯಾಳಕರ್, ಡಾ.ಪೀರಪ್ಪ ಸಜ್ಜನ, ಆಕಾಶ ತೆಗನೂರ,ಸಂಜೀವಕುಮಾರ, ಅನೀಲಕುಮಾರ ಗಾಡಿ, ಸುಭಾಷ ನೂಲಾ ಮುಂತಾದವರು ಇದ್ದರು.