
ಕಲಬುರಗಿ,ಮಾ.6-ಗೆಳೆಯರೊಂದಿಗೆ ಸೇರಿ ಹೋಳಿ ಹಬ್ಬದ ಪಾರ್ಟಿ ಮಾಡಲು ಹೋದ ವ್ಯಕ್ತಿಯೊಬ್ಬರು ಮದ್ಯದ ಅಮಲಿನಲ್ಲಿ ಬಾವಿಯಲ್ಲಿ ಹಾರಿ ಮುಳುಗಿ ಮೃತಪಟ್ಟಿರುವ ಘಟನೆ ಸಬ್-ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವೆಂಕಟೇಶ ನಗರದ ಶ್ರೀಕಾಂತ ಎಂಬುವವರೆ ಮೃತಪಟ್ಟವರು.
ಹೋಳಿ ಹಬ್ಬದ ನಿಮಿತ್ಯ ಗೆಳೆಯರೊಂದಿಗೆ ಸೇರಿ ಶೇಖಯ್ಯ ಗುತ್ತೇದಾರ ಎಂಬುವವರ ಹೊಲಕ್ಕೆ ಹೋದ ಶ್ರೀಕಾಂತ ಅವರು ಮದ್ಯದ ಅಮಲಿನಲ್ಲಿ ಬಾವಿಯ ಮೇಲಿಂದ ಬಾವಿಯೊಳಗೆ ಜಿಗಿದು ಈಜು ಬಾರದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಶ್ರೀಕಾಂತ ಅವರ ಪತ್ನಿ ಮಾಲತಿ ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

























