ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಕಮಲನಗರ:ಜ.25: ಪಟ್ಟಣದ ರೈಲ್ವೇ ಗೇಟ್ ಹನುಮಾನ ಮಂದಿರ ಸಮೀಪದ ಬಾಡಿಗೆ ಮನೆಯೊಂದರಲ್ಲಿ ಶುಕ್ರವಾರ ನೇಣು ಬಿಗಿದುಕೊಂಡು ವ್ಯಕ್ತಿಯೊರ್ವನು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.

ಔರಾದ್(ಬಿ) ತಾಲ್ಲೂಕಿನ ಸುಂದಾಳ ಗ್ರಾಮದ ನಿವಾಸಿಯಾಗಿದ್ದ ದಿಲೀಪ ಬಸವರಾಜ ಬಿರಾದಾರ(36) ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ ಎನ್ನಲಾಗಿದ್ದು.

ಕಳೆದ ಒಂದೇರಡು ತಿಂಗಳ ಹಿಂದೇಷ್ಟೇ ನೂತನ ಬಾಡಿಗೆ ಹೊಟಲ್ ಒಂದನ್ನು ತೆರೆದು ಪತ್ನಿ, ಇಬ್ಬರು ಹೆಣ್ಣು ಮಕ್ಕಳೊಂದಿಗೆ ಉಪಜೀವನ ನಡೆಸುತ್ತಿದ್ದ ಎನ್ನಲಾಗಿದೆ. ಶುಕ್ರವಾರ ಸರಾಯಿ ಕುಡಿದ ಅಮಲಿನಲ್ಲಿ ತಿರುಗಾಡುತ್ತಿದ್ದ ನೋಡಿದವರು ಹೇಳಿದ್ದಾರೆ.

ಬೆಳಿಗ್ಗೆ 9 ಗಂಟೆಯ ನಂತರವೇ ಬಾಡಿಗೆ ಮನೆಯಲ್ಲಿಯೇ ಒಳಗಿನಿಂದ ಕೋಣೆ ತಟ್ಟಿಚಿಲಕ ಹಾಕಿಕೊಂಡು ನೇಣು ಬಿಗಿದುಕೊಂಡಿರಬಹುದು ಎನ್ನಲಾಗಿದ್ದು, ಶುಕ್ರವಾರ ರಾತ್ರಿ ಕಂಡಾಗ ಬೆಳಕಿಗೆ ಬಂದಿದೆ ಎಂದು ದೂರಿದ್ದಾರೆ.

ಈ ಸುದ್ಧಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕಮಲನಗರ ಪಿಎ???ಐ ಆಶಾ ರಾಠೋಡ್, ರೈಟರ್ ವೈಜಿನಾಥ, ಲೋಕೆಶ ತೆಲಂಗ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಪತ್ನಿ ರೇಖಾ ದಿಲೀಪ ಬಿರಾದಾರ ನೀಡಿದ ದೂರಿನ ಮೇರೆಗೆ ಕಮಲನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.