
ಕಲಬುರಗಿ,ಡಿ 4:ತನ್ನ ಲಿವ್ ಇನ್ ಗೆಳತಿ ಆಸೆ ಪೂರೈಸಲು, ಖರ್ಚು ನಿಭಾಯಿಸಲು ಕಳ್ಳತನಕ್ಕಿಳಿದಿದ್ದ ವ್ಯಕ್ತಿಯೊಬ್ಬನನ್ನ ಕಲಬುರಗಿ ವಿವಿ ಪೆÇಲೀಸರು ಬಂಧಿಸಿದ್ದಾರೆ.
ಕಲ್ಲಪ್ಪ ಅಲಿಯಾಸ್ ಸಂಜು ಸೋಮಣ್ಣ (24) ಬಂಧಿತ ಆರೋಪಿ, ಕಲ್ಲಪ್ಪನಿಗೆ ಸಹಾಯ ಮಾಡ್ತಿದ್ದ ಸಂತೋಷ್ ಎಂಬಾತನನ್ನೂ ಸಹ ಪೆÇಲೀಸರು ಬಂಧಿಸಿದ್ದಾರೆ.
ಆಧುನಿಕತೆ ಬೆಳೆದಂತೆ ಪಾಶ್ಚಾತ್ಯ ಸಂಸ್ಕøತಿಗೆ ಒಗ್ಗಿಕೊಳ್ಳಲು ಬಯಸುತ್ತಿರುವುದು ಕಾಣಿಸುತ್ತಿದೆ. ಭಾರತದ ಸಂಸ್ಕೃತಿಯಂತೆ ಮದುವೆಯಾದ ಬಳಿಕ ಮಾತ್ರ ಮಹಿಳೆ ಹಾಗೂ ಪುರುಷ ಜೊತೆಯಾಗಿ ಜೀವಿಸಬಹುದು. ಆದರೆ ಇಂದಿನ ದಿನಗಳಲ್ಲಿ ಲಿವ್ ಇನ್ ರಿಲೇಷನ್ ಅನ್ನೋದು ಸಾಮಾನ್ಯವಾಗಿಬಿಟ್ಟಿದೆ. ಅದ್ರಲ್ಲೂ ಮೆಟ್ರೋ ಸಿಟಿಗಳಲ್ಲಿ ಈ ಸಂಸ್ಕೃತಿ ಹೆಚ್ಚಾಗಿದೆ. ಇದರಲ್ಲಿ ಪ್ರೇಮದ ಅಮಲೇರಿದಾಗ ಅಪರಾಧಕ್ಕೂ ದಾರಿ ಮಾಡಿಕೊಡುತ್ತದೆ ಅನ್ನೋದಕ್ಕೆ ಕಲಬುರಗಿ ಪ್ರಕರಣ ತಾಜಾ ಉದಾಹರಣೆಯಾಗಿದೆ.
ಬಂಧಿತ ಆರೋಪಿಗಳ ಬಳಿ 7.62 ಲಕ್ಷ ಮೌಲ್ಯದ 61 ಗ್ರಾಂ ಬಂಗಾರ ಹಾಗೂ 680 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ .































