ಮಹಾಲಕ್ಷ್ಮಿ ದೇವಿಯ ಜಾತ್ರೆ ಸಂಭ್ರಮ; ಅದ್ಧೂರಿ ರಥೋತ್ಸವ

ಜೇವರಗಿ,ಅ.19: ಪಟ್ಟಣದ ಆರಾಧ್ಯ ದೇವತೆ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಅದ್ಧೂರಿ ರಥೋತ್ಸವ ಜರುಗಿತು.
ಜಾತ್ರೆ ನಿಮಿತ್ತ ಮಹಾಲಕ್ಷ್ಮಿ, ಟ್ರಸ್ಟ್ ಕಮಿಟಿಯಿಂದ ಹಲವಾರು ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.ರಥೋತ್ಸವದÀ ಅಂಗವಾಗಿ – ದೇವಸ್ಥಾನದಲ್ಲಿ ವಿಶೇಷ ಪೂಜೆ ಅಲಂಕಾರ ಸೇರಿದಂತೆ ವಿವಿಧ
ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದವು.
ಬೆಳಿಗ್ಗೆ 10.30 ಗಂಟೆಗೆ ಕೆಕೆಆರ್‍ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯಸಿಂಗ್, -ತಹಶೀಲ್ದಾರ್ ಮಲ್ಲಣ್ಣ ಯಲಗೋಡ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.ದೇವಸ್ಥಾನದಿಂದ ಆರಂಭವಾದ ರಥೋತ್ಸವ ಅಖಂಡೇಶ್ವರ ರಾಜಬೀದಿ ಮೂಲಕ ಬುಟ್ಟಾಳ ರಸ್ತೆಯ ಸಜ್ಜನ ಕಲ್ಯಾಣ ಮಂಟಪದವರೆಗೆ ಸಾಗಿತು. ಈ ವೇಳೆಯಲ್ಲಿ ಭಕ್ತರು ಮಹಾಲಕ್ಷ್ಮಿ ಮಾತಾ ಕೀ ಜೈ, ಕಲ್ಕತ್ತಾಯಿ ಮಾತಾ ಕೀ ಜೈ, ಮರಗಮ್ಮ ಮಾತಾ ಕೀ ಜೈ ಎಂದು ಜಯಘೋಷ ಹಾಕುತ್ತಾ ರಥದ ಮೇಲೆ ಬಾಳೆ ಹಣ್ಣು, ಉತ್ಪತ್ತಿ, ಬದಾಮಿ ಎಸೆದು ಹರಕೆ ತೀರಿಸಿದರು.ಮೆರವಣಿಗೆಯಲ್ಲಿ ಇನ್ನೂರಕ್ಕೂ ಹೆಚ್ಚು ಡೊಳ್ಳು, ಹಲಗೆ, ಕೋಲಾಟ, ಲೇಜಿಮ್, ಡಿಜಿ ಸೌಂಡಿಗೆ ಯುವಕರು, -ಯುವತಿಯರು ನೃತ್ಯ ಮಾಡಿ ಸಂಭ್ರಮಿಸಿದರು.
ಆಯಿ ತಳದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪನೆ:
ನಂತರ ತಳವಾರಪ್ರಮುಖಸಮುದಾಯದ ಭಕ್ತರು ದೇವಿಯ ಮೂರ್ತಿಯನ್ನು ರಥದ ಸಮೇತ ಹೆಗಲ ಮೇಲೆ ಹೊತ್ತುಕೊಂಡು ಸುಮಾರು 3ಕಿ.ಮೀ ಅಂತರದಲ್ಲಿರುವ ಏಳು ಊರಿನ ಸೀಮೆಯ ಮಧ್ಯದಲ್ಲಿ ಬರುವ ಆಯಿ ತಳದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ರಥೋತ್ಸವಕ್ಕೂ ಮುನ್ನ ನಸುಕಿನ ಜಾವದಿಂದ ಭಕ್ತರು ದರ್ಶನಪಡೆದರು. ಮುತ್ತೈದೆಯರು ದೇವಿಗೆ ಉಡಿ ತುಂಬಿದರು.
ಸೊನ್ನದ ಡಾ.ಶಿವಾನಂದ ಸ್ವಾಮೀಜಿ, ಶಕಾಪುರದ ಸಿದ್ದರಾಮ ಶಿವಾಚಾರ್ಯರು, ಶಾಸಕ ಅಲ್ಲಮಪ್ರಭು ಪಾಟೀಲ, ಕೆಕೆಆರ್‍ಟಿಸಿಅಧ್ಯಕ್ಷ ಅರುಣಕುಮಾರ ಎಂ. ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣಕುಮಾರ ಪಾಟೀಲ ಹರವಾಳ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಷಣ್ಮುಖಪ್ಪ ಸಾಹ ರಮೇಶಬಾಬುವಕೀಲ್, ಸೋಮಣ್ಣ ಕಲ್ಲಾ, ಷಣ್ಮುಖಪ್ಪ ಹಿರೇಗೌಡ, ರಾಜಶೇಖರ ಸೀರಿ,
ದಂಡಪ್ಪಗೌಡ ಪೆÇಲೀಸ್ ಪಾಟೀಲ, ಗುರುಗೌಡ ಮಾಲಿಪಾಟೀಲ್, ಜಗದೀಶ್ ವಿಶ್ವಕರ್ಮ, ಗುಂಡು ಬಡಿಗೇರ, ಗಣೇಶ ಮಹೇಂದ್ರಕರ್, ಈರಯ್ಯಸ್ವಾಮಿ ಫಂಟಮಠ, ರವಿ ಕೋಳಕೂರ, ಕರಣ ಗೌಡ ಸರಡಗಿ, ರಾಮಣ್ಣ ಪೂಜಾರಿ, ರಾಜು ತಳವಾರ, ಭೀಮು ತಳವಾರ, ಹರಿಶ್ಚಂದ್ರ ಕೊಡಚಿ,ದೇವಾನಂದ ಡೂಗನಕರ್, ಮರೆಪ್ಪ ಕೋಬಾಳಕರ್, ಭೀಮರಾಯ ಹಳ್ಳಿ, ಶರಣಖ ಗುತ್ತೇದಾರ, ತುಳಜಾರಾಮ ರಾಠೋಡ, ಪ್ರಭು ಜಾಧವ, ಶಿವಪ್ಪ ಮಡಿವಾಳಕರ್, ಭೀಮುಮಡಿವಾಳಕರ್ ಸೇರಿದಂತೆ ಪದಾಧಿಕಾರಿಗಳು, ಸಹಸ್ರಾರು ಭಕ್ತರು ಭಾಗವಹಿಸಿದ್ದರು.
ರಥೋತ್ಸವದ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಡಿವೈಎಸ್‍ಪಿ ಲೋಕೇಶಪ್ಪ, ಸಿಪಿಐ ರಾಜಿಸಾಬ ಸದಾಫ್, ಪಿಎಸ್‍ಐಗಳಾದಗಜಾನಂದ ಬಿರಾದಾರ ಚಿದಾನಂದ ಸದವಿ ಮೊದಲಾದವರನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಜಾತ್ರಾ ಕಮೀತಿಯಿಂದ ಭಕ್ತರಿಗೆ ಪ್ರಸಾದ ಹಾಗೂ ಕುಡಿಯುವನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.ರಥೋತ್ಸವಸಾಗುವ ದಾರಿಯುದ್ದಕ್ಕೂ ಹಲವು ಸಂಘ-ಸಂಸ್ಥೆಗಳು ಅನ್ನಸಂತರ್ಪಣೆ ಮಾಡಿದವು. ಸಂಜೆ ಕುಸ್ತಿ, ಗೀಗೀ ಪದ ಲಾವಣಿ ಪದ. ಬಯಲಾಟ ಜರುಗಿದವು.