
ಬನಹಟ್ಟಿ :ಏ.9: ಪ್ರೇಮ ಸಂಬಂಧದ ಜಗಳದ ಹಿನ್ನೆಲೆ ಇಬ್ಬರು ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದಲ್ಲಿ ನಡೆದಿದೆ.
ಮೃತರನ್ನು ಬನಹಟ್ಟಿ ನಗರದ ಕೆ.ಎಚ್.ಡಿ.ಸಿ ಕಾಲೋನಿಯ 19 ವರ್ಷದ ಪವಿತ್ರಾ ಒಂಟಿ ಹಾಗೂ ಅಸ್ಕಿ ಗ್ರಾಮದ 20 ವರ್ಷದ ಕಾರ್ತಿಕ ನಾಯಕ ಎಂದು ಗುರುತಿಸಲಾಗಿದೆ.
ಲಭ್ಯವಾದ ಮಾಹಿತಿಯಂತೆ, ಇಬ್ಬರ ಮಧ್ಯೆ ಉಂಟಾದ ಜಗಳದಿಂದ ಮನನೊಂದು ಪವಿತ್ರಾ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿಚಾರ ತಿಳಿದ ಕಾರ್ತಿಕ ಕೂಡ ಅಸ್ಕಿ ಗ್ರಾಮದ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.





















