Home ಜಿಲ್ಲೆ ಕಲಬುರಗಿ ಬೈಕ್‍ಗೆ ಲಾರಿ ಡಿಕ್ಕಿ; ತಂದೆ, ಮಗಳು ಸಾವು, ತಾಯಿಗೆ ಗಾಯ

ಬೈಕ್‍ಗೆ ಲಾರಿ ಡಿಕ್ಕಿ; ತಂದೆ, ಮಗಳು ಸಾವು, ತಾಯಿಗೆ ಗಾಯ

ಕಲಬುರಗಿ,ಏ.8-ಬೈಕ್‍ಗೆ ಲಾರಿ ಡಿಕ್ಕಿ ಹೊಡೆದು ತಂದೆ ಮತ್ತು ಮಗಳು ಸ್ಥಳದಲ್ಲಿಯೇ ಮೃತಪಟು,್ಟ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿರುವ ದಾರುಣ ಘಟನೆ ಸೈಯದ್ ಚಿಂಚೋಳಿ ಕ್ರಾಸ್ ಹತ್ತಿರ ನಿನ್ನೆ ಸಾಯಂಕಾಲ ನಡೆದಿದೆ.
ಮೃತರನ್ನು ರಾಜಕುಮಾರ (45) ಮತ್ತು ಅವರ ಮಗಳು ಸುಮಾ (15) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ರಾಜಕುಮಾರ ಅವರ ಪತ್ನಿ ನಿರ್ಮಲಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಾಜಕುಮಾರ ಅವರು ಪತ್ನಿ ನಿರ್ಮಲಾ, ಮಗಳು ಸುಮಾ ಜೊತೆಗೆ ಬೈಕ್ ಮೇಲೆ ಕಲಬುರಗಿಯ ಶಿವಲಿಂಗೇಶ್ವರ ಕಾಲೋನಿಯಿಂದ ಬಿಲಗುಂದಿ ಗ್ರಾಮಕ್ಕೆ ಹೋಗುತ್ತಿದ್ದಾಗ ಸೈಯದ್ ಚಿಂಚೋಳಿ ಕ್ರಾಸ್ ಹತ್ತಿರ ಲಾರಿ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಇವರು ಮೂಲತ: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಚಿತ್ತಕೋಟಾ ಗ್ರಾಮದವರಾಗಿದ್ದು, ಕಲಬುರಗಿಯ ಶಿವಲಿಂಗೇಶ್ವರ ಕಾಲೋನಿಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಸಂಚಾರಿ-2 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.