
ಸೇಡಂ,ಮಾ,12:ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಎಲ್‍ಕೆಜಿ ಮತ್ತು ಯುಕೆಜಿ ಹಂತಗಳು ಕೇವಲ ಅಕ್ಷರ ಕಲಿಯುವ ಸಮಯವಲ್ಲ, ಬದಲಿಗೆ ಅವು ಮಗುವಿನ ಉಜ್ವಲ ಭವಿಷ್ಯಕ್ಕೆ ಪ್ರೇರಣೆಯ ತಾಣಗಳಾಗಿವೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಶ್ರೀಮತಿ ಅನುರಾಧ ಪಾಟೀಲ್ ಅವರು ಅಭಿಪ್ರಾಯಪಟ್ಟರು.ಪಟ್ಟಣದಲ್ಲಿರುವ ಆಶ್ರಯ ಕಾಲೋನಿ ಅಂಗನವಾಡಿ ಕೇಂದ್ರ-02 ರಲ್ಲಿ ನೂತನ ಎಲ್‍ಕೆಜಿ &ಚಿmಠಿ; ಯುಕೆಜಿ ಗೆ ದೀಪ ಬೆಳಗಿಸುವ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದರು. ಈ ವೇಳೆಯಲ್ಲಿ ಹಿರಿಯ ಮೇಲ್ವಿಚಾರಕರಾದ ಸರಿತಾ ಕುಲಕರ್ಣಿ ಮೀನಾಕ್ಷಿ ಪಾಟೀಲ್ ಮಹಾನಂದ ಶಾಲೆಯ ಮುಖ್ಯ ಗುರುಗಳಾದ ಕೇಶವ್ ರೆಡ್ಡಿ,ಬಸವರಾಜ್ ನಾಚವಾರ,ಆಫೀಯ ಬೇಗಂ, ಹಾಗೂ ಮಕ್ಕಳ ತಾಯಂದಿರು ಮಕ್ಕಳು ಇದ್ದರು.

























