
ಕಲಬುರಗಿ,ಏ.8-ಸಾಹಿತ್ಯವು ಮನುಷ್ಯನಿಗೆ ಸಂಸ್ಕಾರ ನೀಡುತ್ತದೆ. ಆ ಸಂಸ್ಕಾರವೇ ಸಂಸ್ಕøತಿಯ ಬದುಕಿಗೆ ದಾರಿ ಮಾಡಿಕೊಡುತ್ತದೆ ಎಂದು ಕನ್ನಡ ನಾಡು ಲೇಖಕರ ಓದುಗ ರ ಸಹಕಾರಿ ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಅಭಿಪ್ರಾಯಪಟ್ಟರು.
ನಗರದ ಭಾಗ್ಯನಗರ ಬಡಾವಣೆಯ ಗುರು ಕೃಪಾ ನಿಲಯದಲ್ಲಿ ಹಿರಿಯ ಸಾಹಿತಿ ಡಾ.ವಿಜಯಕುಮಾರ ಪರುತೆ ಅವರ ಬದುಕು- ಬರಹ ಕುರಿತು ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನ ಸಹಯೋಗದಲ್ಲಿ ಆಯೋ ಜಿಸಿದ್ದ ಸಾಹಿತ್ಯ ಸಮಾಗಮ ಉಪನ್ಯಾಸ ಮಾಲಿಕೆ-9 ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯವನ್ನು ಉಳಿಸಿ ಬೆಳೆಸಲು ನಿರಂತರ ಚಟುವಟಿಕೆಗಳು ನಡೆಯಬೇಕು, ಸಾಹಿತಿಗಳನ್ನು ಪೆÇ್ರೀತ್ಸಾಹಿಸಿ, ಅವರ ಕೃತಿಗಳನ್ನು ಖರೀದಿಸಿ ಓದಿದಾಗ ಮಾತ್ರ ಸಾಹಿತ್ಯ ಬೆಳವಣಿಗೆಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಒಲವನರಸಿ ಗಜಲ್ ಸಂಕಲನ ಕುರಿತು ಉಪನ್ಯಾಸ ನೀಡಿದ ಸಾಹಿತಿ ಡಾ.ಸಾರಿಕಾದೇವಿ ಕಾಳಗಿ ಅವರು ಪರುತೆ ಅವರು ಹಿಂದಿಯ ಪ್ರಾಧ್ಯಾಪಕರಾಗಿ ಶೈಕ್ಷಣಿಕ ಸೇವೆ ಸಲ್ಲಿಸಿ ಸಾಹಿತ್ಯದ ವಿವಿಧ ಮೂವತ್ತು ಪ್ರಕಾರದಲ್ಲಿ ಕೃಷಿ ಮಾಡಿದ್ದಾರೆ. ಒಲವನರಸಿ ಗಜಲ್ ದಲ್ಲಿ 69 ಗಜಲ್ಗಳಿವೆ. ಮಾನವ ಜೀವನದಲ್ಲಿ ಪ್ರೀತಿ ಬಹು ಮುಖ್ಯ. ಅವರಲ್ಲಿ ತಾಯ್ತಿತನ,ಪ್ರೀತಿ, ವಿಶ್ವಾಸದ,ಸಾಮಾಜಿಕ ಕಳಕಳಿ ಇಲ್ಲಿ ಎದ್ದು ಕಾಣುತ್ತವೆ.ಕುಟುಂಬಕ್ಕಾಗಿ ದುಡಿಯುವ ಮಹಿಳೆಯ ಚಿತ್ರಣ ತುಂಬಾ ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ ಎಂದರು.
ಬಯಲಲಿ ಬಾನಾಡಿ ಹಾಯಿಕು ಸಂಕಲನ ಕುರಿತು ಉಪನ್ಯಾಸ ನೀಡಿದ ಶರಣಬಸವ ವಿಶ್ವವಿದ್ಯಾಲಯದ ಡಾ.ಶ್ರೀಶೈಲ ಮದಾನೆ ಹಾಯಿಕು ಕಾವ್ಯ ಜಪಾನ ದೇಶದಿಂದ ಹುಟ್ಟಿಕೊಂಡು ಬಂದ ಚಿಕ್ಕ ಕಾವ್ಯ ಪ್ರಕಾರ.17 ಸಿಲೆಬಲ್ ಕಾವ್ಯ. ಪರುತೆಯವರು ಹಾಯಿಕುಗಳಲ್ಲಿ ಪ್ರಕೃತಿ, ಜೀವನಾನುಭವಗಳು, ಪ್ರೀತಿ-ನೋವು ನಲಿವುಗಳು ಆಳವಾದ ಭಾವನೆಗಳು ಇಲ್ಲಿ ತೆರೆದು ತೋರಿಸಿದ ಅನನ್ಯ ಹಾಯಿಕುಗಳು ಎಂದರು.
ನಿವೃತ್ತ ಬ್ಯಾಂಕ್ ಮ್ಯಾನೇಜರ್ ರೇಣುಕಾಚಾರ್ಯ ಚಿಕ್ಕಮಠ ಮಾತನಾಡಿ, ಸರಳ ಸಜ್ಜನಿಕೆಗೆ ಹೆಸರಾದವರು ಪರುತೆಯವರೆಂದರು. ಅಧ್ಯಕ್ಷತೆ ವಹಿಸಿದ ಡಾ.ಗವಿಸಿದ್ಧಪ್ಪ ಪಾಟೀಲರು ಪರುತೆ ಅವರೊಬ್ಬ ಸರಳ ಜೀವನ ಜೊತೆಗೆ ಸರಳ ಬರಹ. ನಡೆ, ನುಡಿಯೊಂದಿಗೆ ಬರಹವು ತಾಜಾತನದಿಂದ ಕೂಡಿವೆ. ಅವರೊಬ್ಬ ಜೀವನೋತ್ಸಾಹದ ಚಿಲುಮೆಯ ಲೇಖಕರೆಂದರು.
ಸಾಹಿತಿ ಡಾ.ವಿಜಯಕುಮಾರ ಪರುತೆಯವರು ಮಾತನಾಡಿ, ನಾನೊಬ್ಬ ಭಾವನಾ ಜೀವಿ. ನನ್ನ ಅಧ್ಯಯನ, ವ್ಯಾಪ್ತಿಯಲ್ಲಿ ನನಗೆ ದಕ್ಕಿದಷ್ಟು ಬರೆದಿದ್ದೇನೆ. ಹಲವರ ಪ್ರೀತಿ ವಿಶ್ವಾಸದಿಂದ ಬೆಳವಣಿಗೆಯಾಗಿರುವೆ ಎಂದರು.
ಡಾ.ಶೋಭಾದೇವಿ ಚೆಕ್ಕಿ ಪ್ರಾರ್ಥನೆ ಹಾಡಿದರು.ಡಾ.ಶೀಲಾ ದೇವಿ ಬಿರಾದಾರ ನಿರೂಪಿಸಿದರು ಡಾ.ಪೀರಪ್ಪ ಸಜ್ಜನ ಸ್ವಾಗತಿಸಿದರು ಸಿದ್ದರಾಮ ಸರಸಂಬಿ ವಂದಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯ ಬಿ.ಎಚ್.ನಿರಗುಡಿ, ಶರಣಗೌಡ ಪಾಟೀಲ ಪಾಳಾ,ಸಾಹಿತಿ ವಿಶ್ವನಾಥ ಭಕರೆ, ಹೇಮನೂರು,ರಾಜೇಂದ್ರ ಝಳಕಿ,ರೇವಣಸಿದ್ಧಪ್ಪ ದುಕಾನ,ಶಿವಾನಂದ ಮಠಪತಿ,ಸಿ.ಎಸ್. ಮಾಲಿಪಾಟೀಲ,
ಡಾ.ಶಿವಶರಣಪ್ಪ ಮೊತಕಪಲ್ಲಿ,ಡಾ.ಶ್ರೀಶೈಲ ನಾಗರಾಳ,ಡಾ.ನಾರಾಯಣ ರೋಳೇಕರ, ಡಾ.ರಾಜಕುಮಾರ ಮಾಳಗೆ,ಆಕಾಶ ತೆಗನೂರು, ಶಾಮರಾವ್ ಮಾಡ್ಯಾಳ,ಮಂಜುಳಾ ಬಳಗಾನೂರು ಗಂಗಾ ಶರಣಮ್ಮ,ಮೊದಲಾದವರು ಉಪಸ್ಥಿತರಿದ್ದರು.




















