
ಕಲಬುರಗಿ,ಮಾ.22-“ಸಾಹಿತ್ಯ ಸೌರಭ ಕೃತಿಯು ಮಾನವ ಸಂಬಂಧಗಳನ್ನು ಬೆಸೆಯುವ ಸಂವೇದನಶೀಲ ಕೃತಿಯಾಗಿದೆ. ಇಲ್ಲಿಯ ಲೇಖನಗಳು ಸಾಂದರ್ಭಿಕವಾಗಿ ಬರೆದವುಗಳಾಗಿವೆ. ಇಲ್ಲಿಯ ಲೇಖನಗಳು ಈಗಾಗಲೇ ಅನೇಕ ಸಾಹಿತ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ಮತ್ತು ಅನೇಕ ಸಾಹಿತ್ಯ ಸಮ್ಮೇಳನಲ್ಲಿ ಪ್ರಬಂಧವಾಗಿ ಮಂಡಿಸಲಾಗಿವೆ ಎಂದು ಸಾಹಿತಿ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ದೇವದುರ್ಗ ವಿಸ್ತರಣಾ ಕೇಂದ್ರದ ನಿರ್ದೇಶಕ ಹಾಗೂ ಸರ್ಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಶಾಂತಪ್ಪ ಡಂಬಳ ಹೇಳಿದರು.
ಕಲಬುರ್ಗಿಯ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಪುಸ್ತಕ ಪರಿಚಯ ಮಾಲಿಕೆಯ ಕಾರ್ಯಕ್ರಮದಲ್ಲಿ ಸಾಹಿತಿಗಳು ಮತ್ತು ಸರ್ಕಾರಿ (ಸ್ವಾಯತ್ತ )ಕಾಲೇಜಿನ ಪ್ರಾಧ್ಯಾಪಕರಾದ ಡಾ.ಸುರೇಂದ್ರಕುಮಾರ ಕೆರಮಗಿಯವರು ರಚಿಸಿದ “ಸಾಹಿತ್ಯ ಸೌರಭ” ಕೃತಿಯ ಕುರಿತು ಮಾತನಾಡುತ್ತ, ಇಲ್ಲಿಯ ಲೇಖನಗಳು ವರ್ತಮಾನದ ತಲ್ಲಣಗಳು, ಮಹಿಳಾ ಸಂವೇದನೆಗಳು, ದಲಿತಪರ ಚಳುವಳಿ, ಕನ್ನಡಪರ ಹೋರಾಟಗಳಿಂದ ಕೂಡಿದ್ದಾಗಿವೆ. ಈ ಕೃತಿಯು ಸಂಶೋಧನ ವಿಧ್ಯಾರ್ಥಿಗಳಿಗೆ ಮತ್ತು ಸಾಹಿತ್ಯದ ಓದುಗರಿಗೆ ಪೂರಕವಾದ ಹೊತ್ತಿಗೆ ಆಗಿದೆ” ಎಂದರು.
ಕೃತಿಯ ಲೇಖಕರಾದ ಡಾ.ಸರೇಂದ್ರ ಕೆರಮಗಿಯವರು ತಮ್ಮ ಸಾಹಿತ್ಯದ ಅನುಭವಗಳನ್ನು ಹಂಚಿಕೊಂಡರು. ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀಶೈಲ ಮದಾನೆ ಮತ್ತು ಸಾಹಿತಿಗಳಾದ ರೇವಣಸಿದ್ಧಪ್ಪ ದುಕಾನ ಈ ಕೃತಿಯ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯ ಸಂಚಾಲಕರಾದ ಡಾ.ವಿಜಯಕುಮಾರ ಪರುತೆಯವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಡಾ.ಗವಿಸಿದ್ಧಪ್ಪ ಪಾಟೀಲ್ ಅವರು ಸ್ವಾಗತಿಸಿದರು. ಡಾ.ಮಲ್ಲಿನಾಥ ತಳವಾರ ಅವರು ವಂದಿಸಿದರು. ಪೆÇ್ರೀ.ರವೀಂದ್ರ ಪಾಟೀಲ್, ಡಾ.ಎಸ್.ಶಿವಪುತ್ರ, ಡಾ.ರಾಜಕುಮಾರ ಮಾಳಗೆ,ವಿಶ್ವನಾಥ ಭಕರೆ, ಎಸ್.ಎಸ್.ಪಾಟೀಲ್, ರಾಜೇಂದ್ರ ಝಳಕಿ, ಪೆÇ್ರೀ.ಎಸ್.ಎಲ್.ಪಾಟೀಲ್, ಸಿದ್ಧರಾಮ ಸರಸಂಬಿ ಹಾಗೂ ಎಸ್.ಎಸ್.ಹೂಗಾರ ಉಪಸ್ಥಿತರಿದ್ದರು.




























