Home ಜಿಲ್ಲೆ ಕಲಬುರಗಿ ಕಾರಾಗೃಹದ ಬಂದಿಗಳಿಗೆ ಸಾಕ್ಷರತಾ ಜಾಗೃತಿ ಕಾರ್ಯಾಗಾರ

ಕಾರಾಗೃಹದ ಬಂದಿಗಳಿಗೆ ಸಾಕ್ಷರತಾ ಜಾಗೃತಿ ಕಾರ್ಯಾಗಾರ

ಕಲಬುರಗಿ,ಮಾ.27: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಡಯಟ್ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಹಾಗೂ ಕೇಂದ್ರ ಕಾರಾಗೃಹ ಸಹಯೋಗದೊಂದಿಗೆ ಬಂದಿಗಳಿಗೆ ಸಾಕ್ಷರತಾ ಜಾಗೃತಿ ಅರಿವಿನ ಕಾರ್ಯಗಾರ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹನುಮಂತರಾಯ ಹರನಾಳ ಮಾತನಾಡುತ್ತಾ ಕಾರಾಗೃಹದಲ್ಲಿ ಅನಕ್ಷರಸ್ಥರು ಓದಿನ ಕಡೆಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿ ಸರಿ ತಪ್ಪುಗಳ ಪರಿಕಲ್ಪನೆಗಳನ್ನು ಸಾಕ್ಷರತೆಯ ಮೂಲಕ ಕಂಡುಕೊಂಡು ಉತ್ತಮ ಬದುಕಿಗೆ ಅಣಿಯಾಗಿ ಬೇರೊಬ್ಬರಿಗೆ ದಾರಿದೀಪವಾಗುವ ನಿಟ್ಟಿನಲ್ಲಿ ತಾವುಗಳು ಬಾಳ ಬೇಕೆಂದು ಹೇಳಿದರು ಈ ಕಾರ್ಯಕ್ರಮದಲ್ಲಿ 20 ಕಲಿಕಾರ್ಥಿಗಳಿಗೆ ಒಬ್ಬ ಬೋಧಕರನ್ನು ನೇಮಕ ಮಾಡಿ ಅವರಿಗೆ ಅಗತ್ಯ ಕಲಿಕಾ ಪರಿಕರಗಳನ್ನು ಮತ್ತು ಬೋಧಕರಿಗೆ ತರಬೇತಿಗಳು ನೀಡಲಾಗುವುದೆಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ ಕಾರ್ಯಕ್ರಮ ಪ್ರಾಯೋಜಕ ಗಿರೀಶ್ ಜಕಾಪೂರ ಮಾತನಾಡುತ್ತಾ ಅಕ್ಷರವನ್ನು ಕಲಿತು ಸುಂದರ ಬದುಕನ ಕಟ್ಟಿಕೊಳ್ಳಬೇಕು ಈ ಕಾರ್ಯಕ್ರಮ ಅನುಷ್ಠಾನದಲ್ಲಿ ಅಕ್ಷರ ಕಲಿಕೆಗೆ ಬೇಕಾದ ಪೂರಕ ದಾಖಲೆಗಳನ್ನು ಒದಗಿಸಿಕೊಡ ಲಾಗುವುದು ಎಂದು ಹೇಳಿದರು.
ಇನ್ನೋರ್ವ ಅತಿಥಿಗಳಾಗಿ ಭಾಗವಹಿಸಿದ ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಬಿ ಸುರೇಶ್‍ಮಾತನಾಡುತ್ತ ಬಂದಿ ನಿವಾಸಿಗಳು ಕ್ರಿಯಾತ್ಮಕ ಸಾಕ್ಷರತಾ ಕಾರ್ಯಕ್ರಮ ಅಚ್ಚುಕಟ್ಟಾಗಿ ಜಾರಿಗೆ ತರಬೇಕೆಂದು ಕರೆ ನೀಡಿದರು ಅಲ್ಲದೆ ಸಾಕ್ಷರದ ಶಿಕ್ಷಾ ವಿಶೇಷ ಮಾಫಿ ಯನ್ನು ನೀಡಲಾಗುವುದು ಹಾಗೂ ವಿಚಾರಣಾ ಬಂದಿಗಳಿಗೆ ಅವರ ಉತ್ತಮ ನಡತೆ ಹಾಗೂ ಸಾಕ್ಷರತೆ ಪಡೆದಿರುವ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೆ ಸುರೇಶ್ ಮಾತನಾಡುತ್ತಾ ಅಕ್ಷರದ ಬೀಜ ಬಿತ್ತೋಣ ಬೆಳೆ ಬೆಳೆಯೋಣ ಎಂಬಂತೆ ಜ್ಞಾನಾಮೃತ ತುಂಬುವ ಕಾಯಕಕ್ಕೆ ಅಕ್ಷರದ ಕ್ರಾಂತಿಯನ್ನು ಸಾಕ್ಷರತೆಯಲ್ಲಿ ಹೊಂದಬೇಕಾದರೆ ಬುದ್ಧಿಯನ್ನು ವಿವೇಕದ ಕಡೆಗೆ ಕೊಡಬೇಕು ಹೊರತು ಅವಿವೇಕದ ಕಡೆಯಲ್ಲ ಬುದ್ಧಿಯನ್ನು ಪರಿಶುದ್ಧತೆಯ ಮನಸ್ಸಿನೊಳಗೆ ತೆಗೆದುಕೊಂಡು ಹೋದರೆ ಅಪರಾಧ ಕಡಿಮೆಯಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಹಾಯಕ ಅಧೀಕ್ಷಕ ಚನ್ನಪ್ಪ ಯಟಗಲ್, ಜೈಲರ್‍ಗಳಾದ ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್,ಪುಂಡಲೀಕ ಟಿ ಕೆ ಹಾಗೂ ಸಂಸ್ಥೆಯಲ್ಲಿ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದರು. ಭೀಮಾಶಂಕರ್ ಡಾಂಗೆ ಸ್ವಾಗತಿಸಿದರು ಹಾಗೂ ಸಂಸ್ಥೆಯ ಶಿಕ್ಷಕ ನಾಗರಾಜ್ ಮುಲಗೆ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.