
ಕಲಬುರಗಿ :ಫೆ.11: ಐಡಿಯಾ ಜಮಾನದಲ್ಲಿ ನಾವೆಲ್ಲರು ಬದುಕುತ್ತಿದ್ದು, ಹೊಸ ವಿಚಾರಧಾರೆಗಳನ್ನು ಮೈಗೂಡಿಸುವ ಮೂಲಕ ಜೀವನ ಕಟ್ಟಿಕೊಳ್ಳುವ ಕಲೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸ್ಪೂರ್ತಿದಾಯಿ ಸಂಪನ್ಮೂಲ ವ್ಯಕ್ತಿ ಮುನಾವರ ಝಮಾ ಹೇಳಿದರು.
ನಗರದ ಕೋರ್ಟ್ ರಸ್ತೆಯಲ್ಲಿರುವ ಯುನೈಟೆಡ್ ಪಿಜಿಯೋಥೆರಪಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಹೆಚ್ಚಿನ ಸಮಯ ಹಿಡಿಯುವ ಚಿತ್ರಗಳಿಗಿಂತಲೂ ಕಿರುಚಿತ್ರ ಹೆಚ್ಚು ಜನರನ್ನು ಹಿಡಿದಿರಿಸುತ್ತದೆ. ಹೀಗಾಗಿ ಸದಾ ಹೊಸತನಕ್ಕಾಗಿ ತುಡಿಯಬೇಕು. ಅದರಂತೆ ನಡೆದುಕೊಳ್ಳುವ ಸಾಧಕರಾಗಬೇಕು ಎಂದರು.
ಎಐ ಕಾಲದಲ್ಲಿ ಉದ್ಯೋಗ ಕಳೆದು ಹೋಗುತ್ತಿವೆ ಎನ್ನುವ ಭಾವನೆ ಜನರಲ್ಲಿ ಮೂಡಿದೆ. ಆದರೆ, ವಾಸ್ತವ ಅಲ್ಲ. ಸ್ಪರ್ಧಾತ್ಮಕತೆ ಹೆಚ್ಚಿದೆ, ಅದಕ್ಕೆ ತಕ್ಕಂತ ಕೌಶಲ ಬೆಳೆಸಿಕೊಳ್ಳುವ ಮೂಲಕ ಸಮುದ್ರದ ಅಲೆ ನಿರಂತರವಾಗಿ ಅಬ್ಬರಿಸುವಂತೆ ನಾವು ಹಿಡಿದ ಕೆಲಸ ಪೂರ್ಣಗೊಳಿಸಲು ಪ್ರಯತ್ನಿಸುತ್ತಲೇ ಇರಬೇಕು ಎಂದು ತಿಳಿಸಿದರು.
ಪರೀಕ್ಷೆ ಪಾಸಾಗಲು ಓದಬಾರದು. ಬದಲಿಗೆ ಆಳವಾದ ಜ್ಞಾನ ಸಂಗ್ರಹಿಸಿಕೊಂಡು ನಿರಂತರ ಪ್ರಯತ್ನಿಸುವ ಮೂಲಕ ಸಾಧಕರಾಗಬೇಕು. ಅಂಕ ಮಾನದಂಡವಲ್ಲ.ಬದಲಿಗೆ ಬೆಳೆಸಿಕೊಳ್ಳುವ ಕೌಶಲ, ಜ್ಞಾನ, ಉತ್ತಮ ಸಂವಹನ ಕಲೆ ಹಾಗೂ ಛಲ, ಪ್ರಯತ್ನಶೀಲತೆ ನಿಮ್ಮನ್ನು ಪ್ರಗತಿಪಥದತ್ತ ಕರೆದುಕೊಂಡು ಹೋಗುತ್ತವೆ ಎಂದು ಮುನಾವರ ನುಡಿದರು.
ಕೆಲವೊಂದು ಸಮಸ್ಯೆಗಳಿಗೆ ಮೌನವೇ ಉತ್ತಮ ಪರಿಹಾರ. ಹೀಗಾಗಿ ಅಂತಹ ಸಂದರ್ಭಗಳಲ್ಲಿ ಶಾಂತವಾಗಿರಬೇಕು. ಕೆಲಸ ಆಗದೆ ಇದ್ದಾಗ ಎದುರಾಳಿಗೆ ನಮ್ಮ ಮುಖಚರ್ಯೆ ಗೊತ್ತಾಗದಂತೆ ನಗುತ್ತಲೇ ಇರಬೇಕು. ಮುಖ ನೋಡಿದಾಗ ನೀವು ತೊಂದರೆಯಲ್ಲಿರಿ ಎಂಬುದು ಇನ್ನೊಬ್ಬರಿಗೆ ಅಳತೆಗೆ ಸಿಗಬಾರದು. ಸಾಧನೆಗೆ ಸರಳ ಮಾರ್ಗವಿಲ್ಲ, ಬದಲಿಗೆ ಪರಿಶ್ರಮದಿಂದಲೇ ಗುರಿ ತಲುಪಲು ಸಾಧ್ಯ ಎಂದರು.
ನಮ್ಮ ಸುತ್ತಲು ಇರುವ ಸ್ನೇಹಿತರು ಉತ್ತಮವಾಗಿದ್ದರೆ ಒಳ್ಳೆಯ ದಾರಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಹೆತ್ತವರನ್ನು ಹಾಗೂ ಕಲಿಸಿದ ಗುರುಗಳನ್ನು ಗೌರವಿಸುವುದು ಕಲಿತುಕೊಳ್ಳಿರಿ. ಕಠಿಣ ಸವಾಲುಗಳನ್ನು ಎದುರಿಸುವುದು ಮೈಗೂಡಿಸಿಕೊಳ್ಳುವುದರಿಂದ ಸಾಧನೆಯತ್ತ ಹೋಗುತ್ತೇವೆ ಎಂದು ಮುನಾವರ ತಿಳಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಸಂಸ್ಥಾಪಕರು ಆಗಿರುವ ಯುನೈಟೆಡ್ ಆಸ್ಪತ್ರೆ ಮುಖ್ಯಸ್ಥ ಡಾ.ವಿಕ್ರಮ ಸಿದ್ದಾರಡ್ಡಿ ವಹಿಸಿದ್ದರು. ವ್ಯವಸ್ಥಾಪಕ ನಿರ್ದೇಶಕಿ ಡಾ.ವೀಣಾ ಸಿದ್ದಾರಡ್ಡಿ, ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಇತರರಿದ್ದರು. ಕಾಲೇಜಿನ ಪ್ರಾಚಾರ್ಯ ಡಾ.ಅಬ್ದುಲ್ ಹಮೀಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರು,ವಿದ್ಯಾರ್ಥಿಗಳು ಹಾಗೂ ಪೆÇೀಷಕರು ಪಾಲ್ಗೊಂಡಿದ್ದರು. ನಂತರ ಅವರು ವಿದ್ಯಾರ್ಥಿಗಳು ಹಾಗೂ ಪೆÇೀಷಕರೊಂದಿಗೆ ಸಂವಾದ ನಡೆಸಿ, ಪ್ರಶ್ನೆಗಳಿಗೆ ಉತ್ತರಿಸಿದರು.
ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮಥ್ರ್ಯ ಹೆಚ್ಚಿಸುವುದರ ಜತೆಗೆ ಅವರು ಸಾಧಕರಾಗಲು ಸ್ಪೂರ್ತಿ ನೀಡುವ ಉz್ದÉೀಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ನಮ್ಮ ವಿದ್ಯಾರ್ಥಿಗಳಿಗೆ ಹೈಟೆಕ್ ವೈದ್ಯಕೀಯ ಕ್ಷೇತ್ರಕ್ಕೆ ಪೂರಕವಾಗಿರುವ ಶಿಕ್ಷಣ ದೊರೆಯುವಂತೆ ಮಾಡಲು ಸಲಕ ಸೌಕರ್ಯ ಹೊಂದಿರುವ ಯುನೈಟೆಡ್ ಫಿಜಿಯೋಥೆರಪಿ ಕಾಲೇಜು ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೋರ್ಸ್ ಆರಂಭಿಸಲಾಗುವುದು.
| ಡಾ.ವಿಕ್ರಮ ಸಿದ್ದಾರಡ್ಡಿ
ಯುನೈಟೆಡ್ ಆಸ್ಪತ್ರೆ ಮುಖ್ಯಸ್ಥ
ಸಾಧನೆ ಮಾಡಿದಾಗ ಇಲ್ಲವೇ ನಿಗದಿತ ಗುರಿ ತಲುಪಿದಾಗ ತೃಪ್ತಿ ಪಡಬಾರದು. ಬದಲಿಗೆ ಇನ್ನಷ್ಟು ಹಂಬಲದಿಂದ ಹೊಸದನ್ನು ಮಾಡಲು ಮುನ್ನುಗ್ಗಬೇಕು. ಮೊಬೈಲ್ ಬದಲಿಗೆ ಪುಸ್ತಕ ಹಿಡಿದರೆ ಅದು ನಮ್ಮನ್ನು ಸಾಧನೆಯ ಶಿಖರ ಮತ್ತಷ್ಟು ಏರುವಂತೆ ಮಾಡುತ್ತದೆ. ಹೀಗಾಗಿ ಸದಾ ಹೊಸರತ್ತ ಮಿಡಿಯಬೇಕು.
| ಮುನಾವರ ಝಮಾ
ಸ್ಪೂರ್ತಿದಾಯಿ ಸಂಪನ್ಮೂಲ ವ್ಯಕ್ತಿ




























