
ಜೇವರ್ಗಿ,ಮಾ.೨೬-ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಯನ್ನು ತಿರಸ್ಕರಿಸುವಂತೆ ಆಗ್ರಹಿಸಿ ಬುಧವಾರ ಬೆಂಗಳೂರಿನಲ್ಲಿ ನಡೆದ ಐತಿಹಾಸಿಕ ಹೋರಾಟದಲ್ಲಿ ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕಿನ ಬಲಗೈ ಸಮುದಾಯದ ಮುಖಂಡರು ಸೇರಿ ಲಕ್ಷಾಂತರ ಜನರು ಭಾಗಿಯಾಗಿದ್ದರು.
ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಬಲಗೈ ಸಮುದಾಯದ ಮುಖಂಡರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಾಂತಪ್ಪ ಕೂಡ್ಲಿಗಿ ಹಾಗೂ ರಾಜಶೇಖರ್ ಎಸ್ ಶಿಲ್ಪಿ ವಕೀಲರು. ಗುರಣ್ಣ ಇನಾಪುರ್ ರಾಯಪ್ಪ ಬಾರಿ ಗಿಡ ಮಲ್ಲಣ್ಣ ಕೊಡಚಿ ಮರಿಯಪ್ಪ ಬೇಗಾರ್. ಶರಣು ಸೇರಿದಂತೆ ಭಾಗವಹಿಸಿದ್ದರು.































