Home ಜಿಲ್ಲೆ ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿಗೆ ಕೆ.ಪಿ ನಂಜುಂಡಿ ಆಗ್ರಹ

ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿಗೆ ಕೆ.ಪಿ ನಂಜುಂಡಿ ಆಗ್ರಹ

ಬೀದರ್:ಮಾ.23: ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿ ನೀಡುವಂತೆ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ವಿಶ್ವಕರ್ಮ ಮಹಾಸಭಾದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ಪಿ ನಂಜುಂಡಿ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ರವಿವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಕಳೆದ 25 ವರ್ಷಗಳಿಂದ ಈ ರಾಜ್ಯದ ಮೂಲೆ ಮೂಲೆಗಳಿಗೆ ತೆರಳಿ ನಮ್ಮ ಸಮಾಜ ಬಾಂಧವರಿಗೆ ಎಚ್ಚರಿಸುವ ಕಾರ್ಯ ಮಾಡುತ್ತಲಿದ್ದೇವೆ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ನಮ್ಮ ಸಮಾಜವನ್ನು ಈ ರಾಜ್ಯ ಆಳಿದ ಎಲ್ಲ ಸರ್ಕಾರಗಳು ನಮ್ಮನ್ನು ಕಡೆಗಣಿಸಿವೆ. ಈ ಹಿಂದೆ ತಾನು ಎಮ್.ಎಲ್.ಸಿ ಇದ್ದಾಗ ಮೇಲ್ಮನೆಯಲ್ಲಿ ನಡೆಸಿದ ಹೋರಾಟದ ಪ್ರತಿಫಲವಾಗಿ ವಿಶ್ವಕರ್ಮ ಸಮಾಜ ಅಭಿವೃದ್ಧಿ ನಿಗಮ, ಜಕಣಾಚಾರಿ ಜಯಂತಿ ಹಾಗೂ ವಿಶ್ವಕರ್ಮ ಜಯಂತಿಗಳನ್ನು ಆಚರಿಸಲು ಸರ್ಕಾರ ಮುಂದೆ ಬಂತು. ದುರಂತವೆಂದರೆ ಇತ್ತಿಚೀಗೆ ತಿಂಥಣಿಯಲ್ಲಿ ಜರುಗಿದ ಮೌನೇಶ್ವರ ಜಾತ್ರೆಯಲ್ಲಿ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿತ್ತು. ಅಲ್ಲಿ ಮಹಿಳೆಯರು ಸ್ನಾನ ಮಾಡಿ ಬಟ್ಟೆ ಬದಲಿಸಲೂ ಸಹ ವ್ಯವಸ್ಥೆ ಇರದೆ ಇರುವುದು ವಿಪರ್ಯಾಸ. ಪ್ರತಿ ವರ್ಷ ಜರುಗುವ ಹಂಪಿ ಉತ್ಸವದಲ್ಲಿ ನಮ್ಮ ಸಮಾಜದ ಯಾವೊಬ್ಬ ಸ್ವಾಮಿಜಿಗಳಿಗೆ ವೇದಿಕೆಗೆ ಅವ್ಹಾನಿಸುವುದಿಲ್ಲ. ಹಂಪಿಯಲ್ಲಿನ ಕಲ್ಲಿನ ರಥದ ಆದಿಯಾಗಿ ಅಲ್ಲಿನ ಶಿಲಾ ಶಾಸನಗಳು, ಮಂದಿರಗಳನ್ನು ನಾವು ಬೇವರು ಹಾಗೂ ರಸ್ತ ಹರಿಸಿ ಕಟ್ಟಿದ್ದೇವೆ. ಆದರೂ ನಮಗೆ ಅಲ್ಲಿ ಜಾಗವಿಲ್ಲ. ಈ ದೇಶದಲ್ಲಿ ಬಡಿಗತನ, ಕಮ್ಮಾರಿಕೆ, ಸೇರಿದಂತೆ ನಮ್ಮ ಐದು ಕಸಬುಗಳು ಜೀವಂತವಾಗಿರಬೇಕೆಂದರೆ ನಮಗೆ ನ್ಯಾಯ ದೊರಕಬೇಕೆಂದು ಕರೆ ಕೊಟ್ಟರು.
ಚಾಮರಾಜನಗರ ಹಾಗೂ ಮಂಗಳೂರಿನಲ್ಲಿ ನಮ್ಮ ಸಮಾಜವನ್ನು ಎಸ್.ಟಿಗೆ ಸೇರಿಸಲಾಗಿದೆ. ಉಳಿದ ಕಡೆ 2ಎ ಪಟ್ಟಿಯಲ್ಲಿದೆ. ಹಿಂದೆ ದೇವರಾಜ ಅರಸರು ಮುಖ್ಯಮಂತ್ರಿಗಳಾಗಿದ್ದಾಗ ಹಾವನೂರ ವರದಿ ಜಾರಿ ಮಾಡಿ ನಮ್ಮ ಸಮಾಜವನ್ನು ಎಸ್.ಟಿ ಜಾತಿ ಪಟ್ಟಿಗೆ ಸೇರಿಸದೆ ಒಬಿಸಿ ಪಟ್ಟಿಯಲ್ಲಿಯೆ ಉಳಿಸಿದರು. ಆವಾಗಿಂದ ಇಲ್ಲಿಯ ವರೆಗೆ ನಮ್ಮ ಸಮಾಜದ ಒಬ್ಬರು ಸಹ ಐಎಎಸ್, ಐಪಿಎಸ್ ಅಧಿಕಾರಿ ಆಗಲಿಲ್ಲ. ಶಿಕ್ಷಣಕ್ಕೆ ಮಹತ್ವ ನೀಡದೇ ನಮ್ಮ ಸಮಾಜ ಇಂದು ಬಹಳಷ್ಟು ಹಿಂದುಳಿಯಲು ಕಾರಣವಾಗಿದೆ. ನಾಗಮೋಹನದಾಸ ವರದಿಯಲ್ಲಿ ಸಹ ನಮ್ಮ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಒಟ್ಟಾರೆ ಎಲ್ಲ ಕಡೆಯಿಂದ ನಮಗೆ ಮೋಸವಾಗುತ್ತಲ್ಲೆ ಬರುತ್ತಿದ್ದು, ಸಿದ್ಧರಾಮಯ್ಯ ಸರ್ಕಾರ ನಮ್ಮ ಸಮಾಜದ ಬೇಡಿಕೆಗಳನ್ನು ಮನ್ನಿಸಿ ನಮಗೆ ಮೀಸಲಾತಿ ಜೊತೆಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವಂತೆ ನಂಜುಂಡಿ ಒತ್ತಾಯಿಸಿದರು.
ಬೀದರ್ ಹಾಗೂ ಸುಲೇಪೇಟ್ ಏಕದಂಡಗಿ ಮಠದ ಪೂಜ್ಯ ದೊಡ್ಡೆಂದ್ರ ಸ್ವಾಮಿಜಿ, ವಿಶ್ವಕರ್ಮ ಮಹಾಸಭಾದ ಗೌರವಧ್ಯಕ್ಷ ಜೈ ಪ್ರಕಾಶ ಪೆÇದ್ದಾರ, ಜಿಲ್ಲಾಧ್ಯಕ್ಷ ದತ್ತಾತ್ರೇಯ ವಿಶ್ವಕರ್ಮ ಹಿಪ್ಪಳಗಾಂವ, ಯುವ ಅಧ್ಯಕ್ಷ ಪ್ರಶಾಂತ ವಿಶ್ವಕರ್ಮಾ, ಮಹಿಳಾ ಗೌರವಧ್ಯಕ್ಷೆ ಆಂಬುಜಾ ಕೆ ಎಂ ವಿಶ್ವಕರ್ಮ, ಮಹಿಳಾ ಜಿಲ್ಲಾಧ್ಯಕ್ಷೆ ಸುಲೊಚನಾ ಜಿ ವಿಶ್ವಕರ್ಮ, ಜಕಣಾಚಾರಿ ಪತ್ತಿನ ಸಹಾಕಾರ ಸಂಘದ ಅಧ್ಯಕ್ಷ ಸಂಜಿವಕುಮಾರ ಸೊನಾರ, ವಿಶ್ವಕರ್ಮ ಧರ್ಮ ವರ್ಧಿನಿ ಸಂಘದ ಶ್ರೀನಿವಾರ ವಿಶ್ವಕರ್ಮ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.