Home ಜಿಲ್ಲೆ ಕಲಬುರಗಿ ಇಫ್ತಾರ್ ಕೂಟದಲ್ಲಿ ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಭಾಗಿ

ಇಫ್ತಾರ್ ಕೂಟದಲ್ಲಿ ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಭಾಗಿ

ಜೇವರಗಿ,ಮಾ.17: ಪಟ್ಟಣದ ಜೋಪಡ ಪಟ್ಟಿ ಮುಸ್ಲಿಂ ಬಸ್ತಿಯ ಸಮಸ್ತ ಮುಸ್ಲಿಂ ಬಾಂಧವರು ಆಯೋಜಿಸಿದ್ದ ರಂಜಾನ್ ಇಫ್ತಾರ್ ಕೂಟದಲ್ಲಿ ಕೆಕೆಆರ್‍ಡಿಬಿ ಅಧ್ಯಕ್ಷ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಭಾಗವಹಿಸಿದ್ದರು.
ಜಾತಿ-ಧರ್ಮದ ಹಂಗಿಲ್ಲದೆ, ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಸಮಾಜದ ಬಾಂಧವರ ಜೊತೆಗೂಡಿ ಫಲಾಹಾರ ಸವಿಯುತ್ತಾ ಕಳೆಯುವ ಇಫ್ತಾರ್ ಕೂಟದ ಕ್ಷಣಗಳು ಅತ್ಯಂತ ಅಮೂಲ್ಯವಾದವು ಎಂದು ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಸೇರಿದಂತೆ ಎಲ್ಲರನ್ನು ಉದ್ದೇಶಿಸಿ ಡಾ. ಅಜಯ್ ಸಿಂಗ್ ಹೇಳಿದರು.
ರಂಜಾನ್ ಕೇವಲ ಉಪವಾಸವಲ್ಲ, ಅದು ಹಸಿದವರ ನೋವಿಗೆ ಮಿಡಿಯುವ ಮತ್ತು ಪರಸ್ಪರ ಪ್ರೀತಿಯನ್ನು ಹಂಚುವ ಪವಿತ್ರ ಸಂದೇಶ. ಬದುಕಲ್ಲಿ ಭಾತೃತ್ವ ಭಾವನೆ ಮುಖ್ಯ, ಎಲ್ಲರೂ ಇದನ್ನು ರೂಢಿಸಿಕೊಂಡಾಗ ಉತ್ತಮ ಬದುಕು ಸಾಧ್ಯವೆಂದು ಡಾ. ಅಜಯ್ ಸಿಂಗ್ ಹೇಳಿದರು.