
ವಿಜಯಪುರ:ಫೆ.೨೪:ಇತ್ತೀಚೆಗೆ ನಡೆದ ೨೦೨೬ ನೇ ಸಾಲಿನ ಬಾಲಕಿಯರ ಕಿತ್ತೂರು ಸೈನಿಕ ಶಾಲೆ ಪ್ರವೇಶ ಪರೀಕ್ಷೆಯಲ್ಲಿ ವಿಜಯಪುರದ ವೇದ ಕೋಚಿಂಗ್ ಅಕಾಡೆಮಿಯ ವಿದ್ಯಾರ್ಥಿನಿಯರು ಉತ್ತಮ ಫಲಿತಾಂಶ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾದ ೧೦೪ ವಿದ್ಯಾರ್ಥಿನಿಯರಲ್ಲಿ ೫೪ ವಿದ್ಯಾರ್ಥಿನಿಯರು ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಂಸ್ಥೆಯು ಬೇರೆ ಯಾವುದೇ ನಗರಗಳಲ್ಲಿ ತನ್ನ ಶಾಖೆಗಳನ್ನು ಹೊಂದದೆ ಕೇವಲ ಆಂಗ್ಲ ಮಾಧ್ಯಮದಲ್ಲಿಯೇ ತರಬೇತಿಯನ್ನು ನೀಡಿ ೫೪ ವಿದ್ಯಾರ್ಥಿನಿಯರನ್ನು ಆಯ್ಕೆಯಾಗುವಂತೆ ಮಾಡುವುದರÀ ಜೊತೆಗೆ ಶೇ ೫೦ ಕ್ಕಿಂತ ಅಧಿಕ ಫಲಿತಾಂಶವನ್ನು ಪಡೆದುಕೊಂಡಿದೆ.
ಪ್ರಾರಂಭವಾದ ಕೆಲವೇ ವರ್ಷಗಳಲ್ಲಿ ನಮ್ಮ ಸಂಸ್ಥೆಯು ವರ್ಷದಿಂದ ವರ್ಷಕ್ಕೆ ತನ್ನ ಫಲಿತಾಂಶವನ್ನು ದ್ವಿಗುಣಗೊಳಿಸುತ್ತ ಸಾಗಿರುವುದು ಎಲ್ಲರ ಸಂತೋಷಕ್ಕೆ ಕಾರಣವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಶಿವಾನಂದ ಕೆಲೂರ ಹಾಗೂ ಉಪಾಧ್ಯಕ್ಷರಾದ ಶ್ರೀ ದಯಾನಂದ ಕೆಲೂರ ಅಭಿಪ್ರಾಯಪಟ್ಟರು. ನಮ್ಮ ಸಂಸ್ಥೆಯಲ್ಲಿ ನೀಡಲಾಗುವ ಸೈನಿಕ ಶಾಲೆÀ, ನವೋದಯ, ಕಿತ್ತೂರು, ರಾಷ್ಟಿçÃಯ ಮಿಲಿಟರಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ನೀಡಲಾಗುವ ವಿಶಿಷ್ಠ ತರಬೇತಿಯೇ ಇಂತಹ ಉತ್ತಮ ಫಲಿತಾವಂಶವನ್ನು ಪಡೆಯುವುದರ ಜೊತೆಗೆ ಪಾಲಕರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.
ನಮ್ಮ ಸಂಸ್ಥೆಯ ವಿದ್ಯಾರ್ಥಿನಿಯರಾದ ಗಾಯತ್ರಿ, ದೃತಿ, ಆರದ್ಯಾ, ಶ್ರೀಕಾ, ಕೃತಿಕಾ, ಶ್ರೀನಿಧಿ, ಖುಷಿ, ಅನುಷಾ, ಪ್ರೀತಿಲತಾ, ಅನಮ್‌ನಾಜ ಹೀಗೆ ಒಟ್ಟು ೫೪ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. ಎಲ್ಲ ಮಕ್ಕಳಿಗೆ ಹಾಗೂ ಶಿಕ್ಷಕವೃಂದಕ್ಕೆ ಸಂಸ್ಥೆಯ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.




























