
ಚಿಂಚೋಳಿ,ಅ.29-ಪಟ್ಟಣದ ಚಂದಾಪುರದ ಹಳೆ ತಹಸಿಲ್ ಕಾರ್ಯಾಲಯ ಆವರಣದಲ್ಲಿರುವ ದೇವರಾಜ್ ಅರಸು ಭವನದಲ್ಲಿ ತಾಲೂಕ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಮೂರನೇ ವರ್ಷದ ಜಯಂತೋತ್ಸವ ಕಾರ್ಯಕ್ರಮವು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರು ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಮೂರನೇ ವರ್ಷದ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಬಹಳಷ್ಟು ಸಂತೋಷವಾಗಿದೆ. ಭಾರತ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೂಡ ಬ್ರಿಟಿಷರ ವಿರುದ್ಧ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ, ಅವರು ಹೋರಾಡಿ ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ಶ್ರಮಿಸಿದ್ದಾರೆ. ಭಾರತ ದೇಶದಲ್ಲಿ ಮೊಟ್ಟಮೊದಲ ಸ್ವತಂತ್ರ ಸೇನೆಯಾಗಿ ಬ್ರಿಟಿಷರದ ಹೋರಾಡಿದ ಏಕೈಕ ಮಹಿಳೆ ಯಾರಂದರೆ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ, ಅವರು ಅವರ ಕುಟುಂಬವನ್ನೇ ಭಾರತ ದೇಶಕ್ಕಾಗಿ ಪಣಕ್ಕಿಟ್ಟು ಭಾರತ ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ತಮ್ಮ ಪ್ರಾಣ ಲಕ್ಕಿಸದೆ ಒಬ್ಬ ಮಹಿಳೆ ಎಂದು ಲೆಕ್ಕಿಸದೆ ದೇಶದ ಸ್ವತಂತ್ರಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ ಆದರೆ ನಾವೆಲ್ಲರೂ ವೀರ ರಾಣಿ ಕಿತ್ತೂರಾಣಿ ಚೆನ್ನಮ್ಮನವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿಡಗುಂದ ನಂದೀಶ್ವರ ಮಠದ ಕರುಣೆಶ್ವರ್ ಶಿವಾಚಾರ್ಯರು, ಪ್ರಜಾಪಿತ ಬ್ರಹ್ಮಕುಮಾರಿ ಕೇಂದ್ರದ ಬಿ.ಕೆ. ವಿಜಯಲಕ್ಷ್ಮಿ, ಪುರಸಭೆ ಅಧಿಕಾರಿಗಳಾದ ನಿಂಗಮ್ಮ ಬಿರಾದರ್, ತಾಲೂಕ ಆರೋಗ್ಯ ಇಲಾಖೆ ಅಧಿಕಾರಿ ಡಾ.ಮಹಮದ್ ಗಫರ, ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳಾದ ಅಂಬರಾಯ ಪಾಟೀಲ್, ಗಿರಿರಾಜ್ ಸರ್ಜನ್, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ರಮೇಶ್ ಪಡೆಶೆಟ್ಟಿ, ಶರಣು ಪಾಟೀಲ್ ಮೋತಕಪಳಿ, ರವೀಂದ್ರ ಎಸ್ ಪಾಟೀಲ್, ಪ್ರದೀಪ್ ದೇಶಮುಖ್, ಜಗದೀಶ ಸಜ್ಜನ್, ಸಂಜೀವ ಕುಮಾರ್ ಪಾಟೀಲ್, ಕಾಶಿನಾಥ್ ಮಡಿವಾಳ, ಮಲ್ಲಿನಾಥ್ ಮಲ್ಲಿನಾಥ ಮೇಲಗಿರಿ, ವೀರೇಶ ದೇಸಾಯಿ, ಶಿವಶರಣಪ್ಪ ಡೆಂಗಿ, ಮತ್ತು ಅನೇಕ ವೀರಶೈವ ಲಿಂಗಾಯತ್ ಸಮಾಜದ ಬಾಂಧವರು ಹಾಗೂ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮನ ಅವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.






























