
ಚನ್ನಮ್ಮನ ಕಿತ್ತೂರು,ಅ.೧೮: ಕಿತ್ತೂರು ಉತ್ಸವದಲ್ಲಿ ಮೂರು ವೇದಿಕೆಗಳನ್ನು ಸಿದ್ಧಪಡಿಸಲಾಗಿರುತ್ತದೆ. ಆ ವೇದಿಕೆಯಲ್ಲಿ ಯಾರಿಗೂ ತೊಂದರೆಯಾಗದAತೆ ನೋಡಿಕೊಳ್ಳ ಬೇಕು ಎಂದು ಸಾಂಸ್ಕೃತಿಕ ಕಾರ್ಯಕ್ರಮದ ಉಪ ಸಮಿತಿಯ ಅಧ್ಯಕ್ಷ ಸರ್ವ ಸದಸ್ಯರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳ ಉಪಸಮಿತಿ ಅಧ್ಯಕ್ಷಿಣಿ ವಿದ್ಯಾವತಿ ಭಜಂತ್ರಿ ತಿಳಿಸಿದರು.
ತಾಲೂಕಿನ ಡೊಂಬರುಕೊಪ್ಪ ಪ್ರವಾಸಿ ಮಂದಿರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಉಪ ಸಮಿತಿ ಸಭೆ ಅಧ್ಯಕ್ಷ ಸ್ಥಾನವಹಿಸಿಕೊಂಡು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕಿತ್ತೂರು ಸುತ್ತ ಮುತ್ತಲಿನ ಕಲಾವಿದರ ಹೆಸರುಗಳನ್ನು ಸೇರಿಸಲಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ಕಲಾವಿದರನ್ನು ಆಹ್ವಾನಿಸಲಾಗಿದೆ. ಅದಲ್ಲದೆ ವಿವಿಧ ಕಲಾವಿದರಿಂದ ರಸಮಂಜರಿ, ಹಾಗೂ ಜನಪದ ಮೇಳ, ಬಾಳು ಬೆಳಗುಂದಿ, ಹನುಮಂತ ಲಮಾಣಿ, ಅದಲ್ಲದೆ ಖ್ಯಾತ ಬಾಲಿವುಡ್ ಗಾಯಕರನ್ನು, ಸಿನಿಮಾ ನಟ ನಟಿಯರನ್ನು ಕರಿಸಲಾಗಿದೆ. ಜರುಗಲಿರುವ ಉತ್ಸವ ಕುರಿತಂತೆ ಕಿತ್ತೂರು ಉತ್ಸವವನ್ನು ಅಚ್ಚು ಕಟ್ಟು ಮತ್ತು ಅರ್ಥಪೂರ್ಣವಾಗಿ ವೈಭವಯುತವಾಗಿ ಆಚರಿಸಬೇಕೆಂದು ತೀರ್ಮಾನಿಸಲಾಯಿತು. ಸಭೆಯಲ್ಲಿ ಉಪಸಮಿತಿ ಸದಸ್ಯರ ಹಲವಾರು ಅಹವಾಲುಗಳು ಕೇಳಿಬಂದವು.
ಈ ವೇಳೆ ಹನಮಂತ ಲಂಗೋಟಿ, ಎನ್,ಎಸ್.ಗಲಗಲಿ, ಸುರೇಶ ಮುರಡಿಮಠ, ಸೂರಜ ಕುಪ್ಪಸಗೌಡ್ರ, ಬುಡ್ಡೇಸಾಬ ಹವಾಲ್ದಾರ, ಮಂಜುನಾಥ ಹಂಚಿನಮನಿ, ಸರಿತಾ ಜಾಗಂಳೆ ಸೇರಿದಂತೆ ಇನ್ನಿತರರಿದ್ದರು..