ಕಿತ್ತೂರು ಉತ್ಸವ : ಪತ್ರಕರ್ತರಿಗೆ ವ್ಯವಸ್ಥೆಗೆ ಕ್ರಮ


ಚನ್ನಮ್ಮನ ಕಿತ್ತೂರು,ಅ.೧೯: ಕಿತ್ತೂರು ಉತ್ಸವ ಹಿನ್ನೆಲೆ ವ್ಯಾಪಕ ಪ್ರಚಾರಕ್ಕೆ ಅನಕೂಲವಾಗುವಂತೆ ಸುಸಜ್ಜಿತ ಮಾಧ್ಯಮದ ಕೊಠಡಿಯನ್ನು ಸ್ಥಾಪಿಸಲಾಗುವುದು ಅದರ ಜೊತೆಯಲ್ಲಿ ಯಾವುದೇ ತೊಂದರೆಯಾಗದAತೆ ನೋಡಿಕೊಳ್ಳಲಾಗುವುದೆಂದು ವಾರ್ತಾ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ ಹೇಳದರು.


ಸ್ಥಳೀಯ ತಾಪಂದಲ್ಲಿ ಮಾಧ್ಯಮದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ ಅ.೨೩,೨೪,೨೫ ಮೂರು ದಿನಗಳ ಕಾಲ ಜರುಗಲಿರುವ ಉತ್ಸವಕ್ಕೆ ಆಗಮಿಸುವ ವರದಿಗಾರರಿಗೆ ಯಾವುದೇ ತೊಂದರೆಯಾಗದAತೆ ನಿಗಾವಹಿಸಲಾಗುವುದು. ವಾರ್ತಾ ಇಲಾಖೆ ಆದೇಶದ ಮೇರೆಗೆ ಪತ್ರಕರ್ತರಿಗೆ ಮಾತ್ರ ಪಾಸ್ ನೀಡಲಾಗುವುದು. ಮಾಧ್ಯಮ ಕೇಂದ್ರದಲ್ಲಿ ಪತ್ರಕರ್ತರನ್ನು ಹೊರತುಪಡಿಸಿ ಬೇರೆ ಯಾರಿಗೂ ಅವಕಾಶವಿರುವುದಿಲ್ಲ. ಉತ್ಸವದ ವರದಿಗಾಗಿ ಆಗಮಿಸಿದ ಪತ್ರಕರ್ತರಿಗೆ ಒಳ್ಳೆಯ ಗಣಕಯಂತ್ರ ಅದರ ಜೊತೆಯಲ್ಲಿ ಹೈಸ್ಪೀಡ್ ಇಂಟರ್‌ನೆಟ್ ವ್ಯವಸ್ಥೆ ಇರುತ್ತದೆ. ಮತ್ತು ಉತ್ಸವಕ್ಕೆ ಆಗಮಿಸುವ ಪತ್ರಕರ್ತರಿಗೆ ಪಾಸ್ ವಿತರಿಸಿ ಎಲ್ಲ ರೀತಿ ವ್ಯವಸ್ಥೆ ಕಲ್ಪಿಸಲಾಗುವುದೆಂದು ಸಭೆಗೆ ತಿಳಿಸಿದರು.


ಹಲವಾರು ಪತ್ರಕರ್ತರಿಂದ ಹತ್ತಾರು ಬೇಡಿಕೆಗಳು ಸೇರಿದಂತೆ ಪೋಲಿಸರಿಂದಾಗುವ ತೊಂದರೆಗಳ ದೂರುಗಳು ಕೇಳಿಬಂದವು. ಅದಕ್ಕೆ ಉತ್ತರಿಸಿದ ಅವರು ಪೋಲಿಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಅವರ ಗಮನಕ್ಕೆ ತಂದು ನಿಮ್ಮ ಸಮಸ್ಯೆ ಬಗೆಹರಿಸಲಾಗುವುದೆಂದರು.


ತಾಪಂ ಇಓ ನಿಂಗಪ್ಪ ಮಸಳಿ ಮಾತನಾಡಿ ಪತ್ರಕರ್ತರಿಗೆ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದAತೆ ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸಿ ನಿಮ್ಮ ವರದಿಗೆ ಅನಕೂಲ ಮಾಡಿಕೊಡಲಾಗುವುದು ಎಂದರು.
ಸಭೆಯಲ್ಲಿ ತಾಪಂ ಎಡಿ ಮಹಮ್ಮದಗೌಸ್ ರಿಷಲ್ದಾರ್, ತಾಲೂಕಾ ಪತ್ರಕರ್ತರು ಸೇರಿದಂತೆ ದೃಶ್ಯ ಮಾಧ್ಯಮದವರು, ತಾಪಂ ಸಿಬ್ಬಂದಿ, ಇನ್ನಿತರರಿದ್ದರು.