
ಬೀದರ:ಫೆ.೨೮: ನಗರದ ಗುರು ನಗರದಲ್ಲಿರುವ ಗುರುನಾನಕ್ ದೇವ್ ಪಬ್ಲಿಕ್ ಶಾಲೆಯ ೧೧ನೇ ತರಗತಿಯ ಹೆಮ್ಮೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಕುಮಾರಿ ಕಿರಾತ್ ಕೌರ್ ಅವರು ರಾಜ್ಯ ಹಾಗೂ ರಾಷ್ಟಿçÃಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಿ ಕಿರಿಯ ವಯಸ್ಸಿನಲ್ಲಿಯೇ ಸಂಶೋಧಕಿಯಾಗಿ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಅತ್ಯುತ್ತಮ ಶೈಕ್ಷಣಿಕ ಶ್ರೇಷ್ಠತೆ ಮತ್ತು ವೈಜ್ಞಾನಿಕ ಅರ್ಹತೆಯ ಮೂಲಕ ಸಂಸ್ಥೆಗÉ ದೊಡ್ಡ ಗೌರವವನ್ನು ತಂದಿದ್ದಾರÉ.
ಅನ್ವೇಷಣ ೨೦೨೪ ರ ಅಡಿಯಲ್ಲಿ ಸಲ್ಲಿಸಲಾದ “ನೇಚರ್ ಟು ನ್ಯಾನೋಟೆಕ್: ಸಪೋನಿನ್-ಕ್ಯಾಪ್ಡಿಗ್ರೀನ್ ನ್ಯಾನೋ ಪಾರ್ಟಿಕಲ್ಸ್ ಫಾರ್ ಎನ್ವಿರಾನ್ಮೇಂಟಲ್ ಆ್ಯಂಡ್ ಬಯೋಮೆಡಿಕಲ್ ಅಪ್ಲಿಕೇಷನ್ಸ್” ಎಂಬ ನವೀನ ಸಂಶೋಧನಾ ಯೋಜನೆಗೆ ರಾಜ್ಯ ಹಾಗೂ ರಾಷ್ಟಿçÃಯ ಮಟ್ಟದಲ್ಲಿ ಮನ್ನಣೆ ದೊರೆತಿದೆ. ವೈಜ್ಞಾನಿಕ ಸಂಶೋಧನೆ ಕ್ಷೇತ್ರದಲ್ಲಿ ಅವರ ಮಹತ್ವದ ಕೊಡುಗÉಯನ್ನು ಶ್ಲಾಘಿಸಿ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಈ ಯೋಜನೆಯನ್ನು ರಾಜ್ಯಮಟ್ಟದ ಸನ್ಮಾನಕ್ಕÉ ಆಯ್ಕೆ ಮಾಡಿತು.
ರಾಷ್ಟಿçÃಯ ವಿಜ್ಞಾನ ದಿನಾಚರಣೆ ನಿಮಿತ್ಯ ಹಮ್ಮಿಕೊಂಡ ಬೆಂಗಳೂರು ನಗರದ ಜವಾಹರಲಾಲ್ ನೆಹರು ಸಭಾಂಗಣದಲ್ಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಕಿರಾತ್ ಕೌರ್ ಅವರು ಈ ಪ್ರತಿಷ್ಠಿತ ಗೌರವನ್ನು ಸ್ವೀಕರಿಸಿದರು. ಈ ಸಾಧನೆ ಶಾಲೆ ಹಾಗೂ ಇಡೀ ಶೈಕ್ಷಣಿಕ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗಿದೆ.
ಸಮಾರಂಭದಲ್ಲಿ ಕರ್ನಾಟಕ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪ, ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಶ್ರೀ ಬೋಸರಾಜು ಮತ್ತು ಡಾ. ಕೆ. ಸುಧಾಕರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್‌ರೋ) ಗಣ್ಯ ಅಧಿಕಾರಿಗಳಾದ ಶ್ರೀ ಗುರುಪ್ರಸಾದ್, ಶ್ರೀ ಕಿರಣ್ ಕುಮಾರ್ ಮತ್ತು ಶ್ರೀ ಸದಾಶಿವ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ವೈಜ್ಞಾನಿಕ ಮನೋಭಾವವನ್ನು ಶ್ಲಾಘಿಸಿದರು.
ಶಾಲೆಯ ಅಧ್ಯಕ್ಷೆಯಾದ ಡಾ. ರೇಷ್ಮಾ ಕೌರ್ ಅವರು ಸಂತೋಷ ವ್ಯಕ್ತಪಡಿಸಿ ಸಂಸ್ಥೆಗೆ ಗೌರವ ತಂದುಕೊಟ್ಟ ಕಿರಾತ್ ಕೌರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಪ್ರಾಂಶುಪಾಲರಾದ ಶ್ರೀಮತಿ ಶರ್ಲಿ ಶೀಬಾ ಕೂಡಾ ಅವರ ಪರಿಶ್ರಮ, ಸಮರ್ಪಣೆ ಮತ್ತು ಶ್ರೇಷ್ಠತೆಯ ಬದ್ಧತೆಯನ್ನು ಕೊಂಡಾಡಿದರು. ಯುವ ವೈಜ್ಞಾನಿಕ ಪ್ರತಿಭೆಗಳನ್ನು ಪೋಷಿಸುವಲ್ಲಿ ನಿತರಂತರ ಮಾರ್ಗದರ್ಶನ ಹಾಗೂ ಬೆಂಬಲ ನೀಡುತ್ತಿರುವ ಡಾ. ರೇಷ್ಮಾ ಕೌರ್ ಹಾಗೂ ಎಲ್ಲಾ ಸಿಬ್ಬಂದಿ ಸದಸ್ಯರಿಗೂ ಶಾಲಾ ಸಮೂದಾಯದ ವತಿಯಿಂದ ಅಭಿನಂದನೆಗಳು ಸಲ್ಲಿಸಲಾಯಿತು.




























