Home ಜಿಲ್ಲೆ ಕಲಬುರಗಿ ಖರ್ಗೆ ಪ್ರಚೋದನಕಾರಿ ಮಾತಾಡಿಲ್ಲ: ಜಗದೇವ ಗುತ್ತೇದಾರ

ಖರ್ಗೆ ಪ್ರಚೋದನಕಾರಿ ಮಾತಾಡಿಲ್ಲ: ಜಗದೇವ ಗುತ್ತೇದಾರ

ಕಲಬುರಗಿ,ಏ.9: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಸುಮಾರು 7 ದಶಕಗಳ ರಾಜಕೀಯದಲ್ಲಿ ಎಂದೂ ಪ್ರಚೋದನಕಾರಿ ಭಾಷಣ ಮಾಡಿ ಕೋಮುವಾದಿ ವಿಷಬೀಜ ಬಿತ್ತಿದವರಲ್ಲ. ಇಂತಹ ಅನುಭವಿ ಹಿರಿಯ ರಾಜಕಾರಣಿಯ ವಿರುದ್ಧ ಬಿಜೆಪಿ ನಾಯಕರಾದ ಚಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ, ಪ್ರತಾಪಸಿಂಹ, ಆರ್. ಅಶೋಕ, ಪ್ರಲ್ಹಾದ ಜೋಷಿ ಇನ್ನಿತರರು ನಾಲಿಗೆಗೆ ಹತೋಟಿ ಇಲ್ಲದೆ ಬಾಯಿಗೆ ಬಂದಂತೆ ಶಬ್ದಗಳನ್ನು ಉಪಯೋಗಿಸಿ ಮಾತನಾಡಿರುವದು ಖಂಡನೀಯ. ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಕಾಳಗಿ ಹೇಳಿದ್ದಾರೆ.
ಪ್ರಚೋದನಕಾರಿ ಮಾತನಾಡುವದು ಭಾಷಣ ಮಾಡುವದು ಮತ್ತು ಕೋಮುವಾದಿ ವಿಷಬೀಜ ಬಿತ್ತುವದು ಬಿಜೆಪಿ ನಾಯಕರ ಲಕ್ಷಣವಾಗಿದೆ, ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚುವದು ಹೊಡೆಬಡೆ, ಕೊಲ್ಲು ಎನ್ನುವದು ಬಿಜೆಪಿಯ ನಾಯಕರ ಮೂಲ ಮಂತ್ರವಾಗಿದೆ ಎಂದಿದ್ದಾರೆ.