
ಜೇವರಗಿ,ಫೆ.8:ಕೆಕೆಆರ್‍ಡಿಬಿ ಅಧ್ಯಕ್ಷ ಡಾ ಅಜಯ್ ಧರ್ಮಸಿಂಗ್ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು.
ಸಭೆಯಲ್ಲಿ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಶೌಕತ ಅಲಿ ಆಲೂರ್ ಮಾತನಾಡಿ ಜೆಸ್ಕಾಂ ಕಾರ್ಯವೈಖರಿ ಮತ್ತು ರೈತರಿಗೆ ಮತ್ತು ಜನರಿಗೆ ಆಗುತ್ತಿರುವ ತೊಂದರೆ ಕುರಿತು ಶಾಸಕರ ಗಮನ ಸೆಳೆದರು.
ಜೆಸ್ಕಾಂ ಅಧಿಕಾರಿಗಳಿಗೆ ಶಾಸಕರು ಖಡಕ್ ಸೂಚನೆ ನೀಡಿ ಬಗೆಹರಿಸಲು ಸೂಚನೆ ನೀಡಿದರು ಮತ್ತು 110 ಕೆವಿ ಸ್ಟೇಷನ್ ಮಂಜೂರತಿಗಾಗಿ ಇಂಧನ ಸಚಿವ ಕೆ ಜೆ ಜಾರ್ಜ್‍ರನ್ನು ಭೇಟಿಯಾಗಲು ಅಧಿಕಾರಿಗಳಿಗೆ ಸೂಚನೆ ನೀಡಿದರು .ತಹಸೀಲ್ದಾರ್ ಮಲ್ಲಣ್ಣ ಯಲಗೋಡ ಸೇರಿದಂತೆ ಅನೇಕರು ಇದ್ದರು




























