ನೂತನ ಪ್ರಜಾ ಸೌಧಗಳಲ್ಲಿ ಭುವನೇಶ್ವರಿ ಮೂರ್ತಿ ಸ್ಥಾಪನೆಗೆ ಕರವೇ ಮನವಿ

ಬೀದರ್, ಅ. 10:ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಬೀದರ್ ಜಿಲ್ಲಾ ಘಟಕದ ವತಿಯಿಂದ ಮುಖ್ಯಮಂತ್ರಿ ಸಿದ್ರಾಮಯ್ಯ ಅವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಲಾಗಿದೆ.

ರಾಜ್ಯಾದ್ಯಂತ ಪ್ರತಿ ತಾಲೂಕು ಕೇಂದ್ರಗಳಲ್ಲಿ ಸರ್ಕಾರ ನೂತನ ಪ್ರಜಾ ಸೌಧಗಳನ್ನು ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ, ಆ ಕಟ್ಟಡಗಳಲ್ಲಿ ಕಡ್ಡಾಯವಾಗಿ ನಾಡದೇವತೆ ಭುವನೇಶ್ವರಿ ದೇವಿಯ ಮೂರ್ತಿ ಸ್ಥಾಪಿಸಲು ವೇದಿಕೆ ಒತ್ತಾಯಿಸಿದೆ.

ಮನವಿ ಪತ್ರದಲ್ಲಿ, “ರಾಜ್ಯದಲ್ಲಿ ಹಲವು ಮಹಾತ್ಮರ ಪ್ರತಿಮೆಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗುತ್ತಿದೆ, ಆದರೆ ನಾಡದೇವತೆ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ಯಾವುದೇ ಗಮನ ನೀಡಿಲ್ಲ. ಇದು ನೋವಿನ ವಿಷಯ. ರಾಜ್ಯದ ಸಾಂಸ್ಕøತಿಕ ಅಸ್ತಿತ್ವವನ್ನು ಬಿಂಬಿಸುವ ಭುವನೇಶ್ವರಿ ಮೂರ್ತಿಯನ್ನು ಪ್ರತಿಯೊಂದು ಹೊಸ ಪ್ರಜಾ ಸೌಧದಲ್ಲಿ ಸ್ಥಾಪಿಸಬೇಕು,” ಎಂದು ಬೇಡಿಕೆ ಇಡಲಾಗಿದೆ.

ಈ ಸಂದರ್ಭದಲ್ಲಿ ಬೀದರ್ ಜಿಲ್ಲಾ ಅಧ್ಯಕ್ಷ ಪೀಟರ್ ಚೀಟಗುಪ್ಪಾ, ಉಪಾಧ್ಯಕ್ಷ ಗುರುರಾಜ ಮೇತ್ರೆ, ಸಂಚಾಲಕ ಬಸವರಾಜ ನಂದಗಾಂವಕರ್, ಖಜಾಂಚಿ ಪ್ರಕಾಶ್ ಬಗ್ದಲ್ಕರ್, ಸಹ ಕಾರ್ಯದರ್ಶಿಗಳು ಶಿವುಗೊಂಡ ಚಿಟ್ಟವಾಡಿ ಮತ್ತು ಅಲೆಕ್ಸಾಂಡರ್ ಕಮಠಾಣಾ, ಯುವಘಟಕ ಅಧ್ಯಕ್ಷ ಚಂದ್ರಕಾಂತ ಪೆÇೀಳ, ತಾಲೂಕಾ ಅಧ್ಯಕ್ಷ ನೀಲೆಶ್ ರಾಠೋಡ, ನಗರ ಅಧ್ಯಕ್ಷ ಯೋಹಾನ್ ಮೀಸೆ, ನಗರ ಉಪಾಧ್ಯಕ್ಷ ಪ್ರಸಾದ್ ಘೋಡಂಪಳ್ಳಿಕರ್ ಮತ್ತು ಯುವ ಮುಖಂಡ ಡೇನಿಯಲ್ ಅಣದುರ್ಕರ್ ಸೇರಿದಂತೆ ಹಲವಾರು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.