
ಬಸವಕಲ್ಯಾಣ,ಜೂ.12-ತಾಲೂಕಿನ ರಾಜೇಶ್ವರ ಗ್ರಾಮಪಂಚಾಯಿತಿಯ ಮಲ್ಲಿಕಾರ್ಜುನ ವಾಡಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ “ಕಾರ ಹುಣ್ಣಿಮೆ “ಯ ಪ್ರಯುಕ್ತ ಎತ್ತಿನ ಗಾಡಿ ಓಟ ಸ್ಪರ್ಧೆ ಹಮ್ಮಿಕೊಳ್ಳಲಾಯಿತು.
ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಲಕ್ಷ್ಮಣ ವಿಶ್ವನಾಥ ಪುಣೆ ಪ್ರಥಮ, ಶರಣಪ್ಪ ಕುರುಮೆ ದ್ವಿತೀಯ, ನಾಗಪ್ಪ ಆ.ಪುಣೆ ತೃತೀಯ ಬಹುಮಾನ ಪಡೆದರು. ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಗೊರಖ ಹೆಗಡೆ ಬಹುಮಾನ ಪಡೆದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಗಾಡಿಯ ಯಜಮಾನರಿಗೆ “ಸತೀಶ ಪೋಸ್ತರ್ ಅವರು ಛತ್ರಿಗಳನ್ನು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಗ್ರಾಮೀಣ ಪೆÇಲೀಸ್ ಠಾಣೆಯ ಪಿಎಸ್‍ಐ ನಾಗೇಂದ್ರ ಎಸ್, ಗ್ರಾಮಪಂಚಾಯತ ಅಧ್ಯಕ್ಷರಾದ ನಂದಾಬಾಯಿ ಪ್ರಭು, ಉಪಾಧ್ಯಕ್ಷರಾದ ಅನಿತಾ ಮಲ್ಲಿಕಾರ್ಜುನ, ಗ್ರಾಮ ಪಂಚಾಯತ್ ಸದಸ್ಯರಾದ ವಿಷ್ಣುವರ್ಧನ್ ಪುಣೆ, ಗೋದಾವರಿ ಎಸ್. ಪುಣೆ, ಸುಭಾಶ ಅಂತಪಳ್ಳಿ, ಸಂತೋಷ ಸೀಗಿ, ಸತೀಶ ಪೆÇೀಸ್ತಾರ್, ಅಕ್ರಮ, ಅಜಿಮೋದ್ದಿನ್, ಪ್ರಭು ಜಮಾದಾರ ಮತ್ತು ರಾಜು ಸೀಗಿ, ನಾಗರೆಡ್ಡಿ ಪುಣೆ, ವಿಠ್ಠಲ್ ಹೆಗಡೆ, ಶಂಕರ ಚಿಂತಾಲೆ, ಪ್ರಭು ಬಾರಾಬಾಯಿ, ಶಂಕರ ಹೆಗಡೆ, ಶ್ರೀಕಾಂತ. ವಿ. ಪುಣೆ, ಪ್ರವೀಣ ಪುಣೆ, ತುಲಸಿರಾಮ ಇಟಕಲೆ, ರಾಘವೇಂದ್ರ ಪುಣೆ, ಹರಿ ಇರವಟ್ಟೆ, ಕಾಶಣ್ಣ ಇಟಕಲೆ, ಮಾಣಿಕ ಬಾರಾಬಾಯಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಮಚ್ಚಿಂದ್ರ ಪುಣೆ ನೆರವೇರಿಸಿದರು.