ಕರ್ನಾಟಕದಲ್ಲಿ ಕನ್ನಡಿಗನೆ ಸಾರ್ವಭೌಮ:ವೇಂಕಟೇಶ ಭೈರಮಡ್ಡಿ

ಕೆಂಭಾವಿ:ಸಗರನಾಡಿನ ಐತಿಹಾಸಿಕ ಪರಂಪರೆ, ಹಿನ್ನೆಲೆ ಹೊಂದಿರುವ ಈ ಪಟ್ಟಣದಲ್ಲಿ 21 ರ ಕನ್ನಡ ಸಂಭ್ರಮ ಕಾರ್ಯಕ್ರಮ ಮಾಡುತ್ತಿರುವದು ಹೆಮ್ಮೆ ತಂದಿದೆ. ಕರ್ನಾಟಕದಲ್ಲಿ ಕನ್ನಡಿಗನೆ ಸಾರ್ವಭೌಮ ಎಂದು ಕರವೇ ತಾಲೂಕಾಧ್ಯಕ್ಷ ವೆಂಕಟೇಶ ನಾಯಕ ಭೈರಿಮಡ್ಡಿ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಜರುಗಿದ ಕರವೇ 21 ರ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿ ಕನ್ನಡವೇ ಜಾತಿ, ಕನ್ನಡವೆ ಧರ್ಮ. ಸುರಪುರ ತಾಲೂಕು ಘಟಕಕ್ಕೆ ಇದು 21 ರ ಸಂಭ್ರಮ. ಕನ್ನಡ ಹೋರಾಟಕ್ಕೆ ನಾವು ಸದಾ ಸಿದ್ಧವಾಗಿದ್ದೆವೆ. ಕನ್ನಡ ರಕ್ಷಣೆಗೆ ಅನೇಕ ಹೋರಾಟಗಳನ್ನು ಮಾಡಲಾಗಿದೆ. ಹೋರಾಟ ಮಾಡಿ ಅನೇಕ ಸಲ ಜೈಲು ವಾಸವನ್ನು ಸಹ ಕಂಡಿದ್ದವೆ, ಅದಕ್ಕೆ ನಮಗೆ ಹೆಮ್ಮೆಯಿದೆ. ಇದಲ್ಲದೆ ಸಮಾಜ ಸೇವೆಗೂ ಕರವೇ ಯಾವಾಗಲೂ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಪ್ರತಿವರ್ಷವೂ ಅನೇಕ ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಮಾತನಾಡಿ, ನೆಲ, ಜಲ, ಭಾಷೆಯ ರಕ್ಷಣೆಗೆ ರಕ್ಷಣಾ ವೇದಿಕೆ ಸದಾ ಸಿದ್ಧವಾಗಿರುತ್ತದೆ. ಕರ್ನಾಟಕದ ಪ್ರತಿ ಗ್ರಾಮಗಳಲ್ಲಿಯೂ ಕನ್ನಡ ನಾಮಫಲಕ ಕಂಗೊಳಿಸುತ್ತಿದೆ ಎಂದರೆ ಅದಕ್ಕೆ ಕರವೆಯ ಹೋರಾಟವೆ ಕಾರಣ. ನಮ್ಮ ನಿರಂತರ ಹೋರಾಟದ ಫಲವಾಗಿ ಇಂದು ದೊಡ್ಡ ಮಹಾನಗರಗಳಲ್ಲಿ ಕನ್ನಡ ನಾಮಫಲಕಗಳು ರಾರಾಜಿಸುತ್ತಿವೆ. ಓ.ನಾರಾಯಣಗೌಡ ಅವರ ನೇತೃತ್ವದಲ್ಲಿ ಅನೇಕ ಜನಪರ ಹೋರಾಟಗಳನ್ನು ಮಾಡಲಾಗಿದೆ. ತಾಲೂಕು ಹಾಗೂ ಕೆಂಭಾವಿ ಅಭಿವೃದ್ಧಿಗೆ ಕರವೇ ನಿರಂತರ ಹೋರಾಟ ಮಾಡುತ್ತದೆ ಎಂದು ತಿಳಿಸಿದರು.
ಮುದನೂರಿನ ಷ.ಬ್ರ.ಸಿದ್ದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಕನ್ನಡ ಗೀತೆಯನ್ನು ಹಾಡುವದರ ಮೂಲಕ ಜನರನ್ನು ಮಂತ್ರ ಮುಗ್ಧರನ್ನಾಗಿಸಿದರು. ಪಟ್ಟಣದ ಹಿರೇಮಠದ ಷ.ಬ್ರ.ಚನ್ನಬಸವ ಶಿವಾಚಾರ್ಯರು, ಕರಡಕಲ್ ಗ್ರಾಮದ ಪೂಜ್ಯ ಶಾಂತರುದ್ರಮುನಿ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಪ್ರಿಯಾ ರಾಮನಗೌಡ ಪೆÇಲೀಸಪಾಟೀಲ, ಪ್ರಮುಖರಾದ ಬಾಬುಗೌಡ ಮಾಲಿಪಾಟೀಲ, ಆದಿತ್ಯಗೌಡ ಪೆÇಲೀಸಪಾಟೀಲ, ಮಹಿಪಾಲರೆಡ್ಡಿ ಡಿಗ್ಗಾವಿ, ರಾಘವೇಂದ್ರ ದೇಶಪಾಂಡೆ, ಕೃಷ್ಣರೆಡ್ಡಿ ಮುದನೂರ, ಡಾ.ಗೀರೀಶ ಕುಲಕರ್ಣಿ, ಖಾಜಾಪಟೇಲ ಕಾಚೂರ, ಭೀಮನಗೌಡ ಕಾಚಾಪುರ, ಪಿಎಸ್‍ಐ ಹಣಮಂತ ಮ್ಯಾಗೇರಿ, ಸಿಆರ್‍ಪಿ ಬಂದೇನವಾಜ ನಾಲತವಾಡ, ಶೇಖರಗೌಡ ಯಡಿಯಾಪುರ, ಹೋಬಳಿ ಅಧ್ಯಕ್ಷ ಕುಮಾರ ಮೋಪಗಾರ, ಶಿವು ಮಲ್ಲಿಬಾವಿ, ದೇವು ಹಡಪದ ಸೇರಿದಂತೆ ಪುರಸಭೆಯ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು, ಆಶ್ರಯ ಕಮೀಟಿ ಸದಸ್ಯರು, ಜಿಲ್ಲೆಯ ವಿವಿಧ ತಾಲೂಕಗಳ ತಾಲೂಕಾಧ್ಯಕ್ಷರು, ಹೋಬಳಿ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.
ಡಾ.ಯಂಕನಗೌಡ ಪಾಟೀಲ ನಿರೂಪಿಸಿದರು. ಶ್ರೀಶೈಲ ಕಾಚಾಪುರ ಸ್ವಾಗತಿಸಿದರು. ಮಲ್ಲಿಕಾರ್ಜುನ ಪರಸನಹಳ್ಳಿ ವಂದಿಸಿದರು. ನಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನೆರದಿದ್ದ ಜನರನ್ನು ಮನರಂಜಿಸಿದವು.