
ಕಲಬುರಗಿ,ಮಾ.14-ಕಲ್ಯಾಣ ಕರ್ನಾಟಕ ಭಾಗದ ಜನರ ಅಭಿವೃದ್ಧಿಗಾಗಿ ಮೀಸಲಿರುವ ಕೆಕೆಆರ್‍ಡಿಬಿ ನಿಧಿಯನ್ನು ಕೆಪಿಎಸ್ ಮಾಗ್ನೆಟ್ ಶಾಲೆಗಳ ಹೆಸರಲ್ಲಿ ಈ ಭಾಗದ ಸರಕಾರಿ ಶಾಲೆಗಳನ್ನು ಮುಚ್ಚಲು ಬಳಸುತ್ತಿರುವುದನ್ನು ಹಾಗೂ ಸರಕಾರಿ ಶಾಲೆಗಳನ್ನು ಮುಚ್ಚಿ ಬಡಜನರ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಸರಕಾರದ ನಡೆಯನ್ನು ಖಂಡಿಸಿ ಕಲ್ಯಾಣ ಕರ್ನಾಟಕ ವಲಯ ಮಟ್ಟದ ಸಮಾವೇಶವು ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳ ನೇತೃತ್ವದಲ್ಲಿ ನಗರದ ಡಾ.ಎಸ್.ಎಂ ಪಂಡಿತ್ ರಂಗಮಂದಿರದಲ್ಲಿ ಇಂದು ಜರುಗಿತು.
ಸಮಾವೇಶದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಲ್ಲಮ ಪ್ರಭು ಬೆಟ್ಟದೂರು ರವರು ಮಾತನಾಡುತ್ತ, ಕೋಳಿ ಕೂಗುವ ಕಡೆಯಲೆಲ್ಲಾ ಸರ್ಕಾರಿ ಶಾಲೆಗಳಿರಬೇಕು. ಈ ಕೆಪಿಎಸ್ ಮ್ಯಾಗ್ನೆಟ್ ಇದಕ್ಕೆ ತದ್ವಿರುದ್ಧವಾಗಿದೆ. ಕೊಪ್ಪಳ ಜಿಲ್ಲೆಯ 300 ಮಕ್ಕಳು ಓದುವ ಹಿರೇಬಗನಾಳ್ ಶಾಲೆ ಮುಚ್ಚಿ ಹಿತ್ನಾಳು ಶಾಲೆಗೆ ವಿಲೀನ ಮಾಡುವುದು ಸರಿಯಿಲ್ಲ. ಆ ಮಕ್ಕಳನ್ನು ದೂರದ ಊರಿಗೆ ಕಳುಹಿಸಲು ಬಸ್ ವ್ಯವಸ್ಥೆ ಏನು? ಆ ಬಸ್ಸಿಗೆ ಹಣ ನೀಡುವರು ಯಾರು? ಈ ಅವ್ಯವಸ್ಥೆಯನ್ನು ಜನರ ಮೇಲೆ ಹೇರುತ್ತಿರುವ ಜನ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಶಿಕ್ಷಣ ಕೇಂದ್ರೀಕರಣವು ಪ್ರಜತಾಂತ್ರಿಕ ಶಿಕ್ಷಣಕ್ಕೆ ವಿರೋಧವಾಗಿದೆ. ಅದಕ್ಕಾಗಿ ನಿರಂತರ ಹೋರಾಟ ಅವಶ್ಯಕ” ಎಂದು ಕರೆ ನೀಡಿದರು.
ಸಮಾವೇಶದ ಮುಖ್ಯ ಭಾಷಣಕಾರರಾದ ಎಐಡಿಎಸ್‍ಓ ರಾಜ್ಯ ಅಧ್ಯಕ್ಷರಾದ ಅಶ್ವಿನಿ ಕೆ. ಎಸ್ ಅವರು ಮಾತನಾಡುತ್ತ ಕಲ್ಯಾಣ ಕರ್ನಾಟಕ ಭಾಗದ ಜನರ ಅಭಿವೃದ್ಧಿಗಾಗಿ ಮೀಸಲಿರುವ ಕೆಕೆಆರ್ ಡಿಬಿ ನಿಧಿಯನ್ನು ನಮ್ಮ ಭಾಗದ ಸರಕಾರಿ ಶಾಲೆಗಳನ್ನು ಮುಚ್ಚಲು ಬಳಸುತ್ತಿರುವುದು ಕರ್ನಾಟಕ ರಾಜ್ಯ ಸರ್ಕಾರ ಈ ಭಾಗದ ಜನರಿಗೆ ಎಸಗುತ್ತಿರುವ ದೊಡ್ಡ ದ್ರೋಹವಾಗಿದೆ. ಪ್ರತಿಯೊಂದು ಮಗುವಿಗೂ ಉಚಿತವಾಗಿ ಶಿಕ್ಷಣ ಸಿಗಬೇಕು ಎಂಬ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಈಶ್ವರ ಚಂದ್ರ ವಿದ್ಯಾಸಾಗರ್, ಪಂಡಿತ್ ತಾರಾನಾಥ್, ಕುದ್ಮುಲ್ ರಂಗರಾವ್ ರಂತಹ ಮಹಾನ್ ವ್ಯಕ್ತಿಗಳ ಆಶಯಗಳನ್ನು ಗಾಳಿಗೆ ತೂರಿ ತರುತ್ತಿರುವ ಈ ಅನ್ಯಾಯದ ವಿರುದ್ಧ, ಬಡ ಮಕ್ಕಳನ್ನು ಶಾಶ್ವತವಾಗಿ ಶಿಕ್ಷಣದಿಂದ ದೂರ ಇಡುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ವಿರುದ್ಧ ಇಡೀ ರಾಜ್ಯದಾದ್ಯಂತ ಬಲಿಷ್ಠ ಹೋರಾಟಗಳು ನಡೆಯಿತ್ತಿದ್ದು, ಈ ಹೋರಾಟವನ್ನು ಇನ್ನಷ್ಟು ತೀವ್ರವಾಗಿ ಮುನ್ನೆಡೆಸುವ ಸಂಕಲ್ಪವನ್ನು ತೊಡುತ್ತಾ ರಾಜ್ಯದ ಜನತೆ ಏಪ್ರಿಲ್ 8 ರಂದು ರಾಜ್ಯ ಮಟ್ಟದ ಸಮಾವೇಶಕ್ಕೆ ಮುನ್ನಡೆಯಬೇಕು ಎಂದು ಕರೆ ಕೊಟ್ಟರು.
ರಾಜ್ಯ ರೈತ ಸಂಘದ ಕರ್ನಾಟಕ ರಾಜ್ಯ ಗೌರವಧ್ಯಕ್ಷರಾದ ಚಾಮರಸ ಮಾಲಿ ಪಾಟೀಲ್ ರವರು, ಹೈದ್ರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರದ ಸಂಸ್ಥಾಪಕರಾದ ರಾಘವೇಂದ್ರ ಕುಷ್ಟಗಿ ರವರು, ವಿದ್ಯಾನಿಧಿ ಪದವಿ ಪೂರ್ವ ಕಾಲೇಜು, ರಾಯಚೂರು ನ ಪ್ರಾಂಶುಪಾಲರಾದ ಡಾ. ಚಂದ್ರ ಗಿರೀಶ್ ರವರು, ಂIಏಏಒS ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ, ಎಐಎಂಎಸ್‍ಎಸ್ ರಾಜ್ಯ ಅಧ್ಯಕ್ಷರಾದ ಎಂ. ಎನ್ ಮಂಜುಳಾ, ಎಐಡಿವೈಓ ರಾಜ್ಯ ಅಧ್ಯಕ್ಷ ರಾದ ಶರಣಪ್ಪ ಉದ್ಬಾಳ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ವಿ. ಜಿ. ದೇಸಾಯಿಯವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಎಐಡಿಎಸ್‍ಓ ರಾಜ್ಯ ಖಜಾಂಚಿ ಸುಭಾಷ್ ಬಿ. ಜೆ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾವೇಶದ ಅಧ್ಯಕ್ಷತೆಯನ್ನು ಎಐಡಿಎಸ್‍ಓ ರಾಜ್ಯ ಉಪಾಧ್ಯಕ್ಷರಾದ ಅಭಯಾ ದಿವಾಕರ್ ರವರು ವಹಿಸಿದ್ದರು.
ಸಮಾವೇಶದಲ್ಲಿ ನಾಡಿನ ಅನೇಕ ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು, ಜನಪರ ಸಂಘಟನೆಗಳ ಮುಖಂಡರು ಸೇರಿದಂತೆ ಕಲ್ಯಾಣ ಕರ್ನಾಟಕದ ಬೀದರ್, ಕಲಬುರ್ಗಿ,ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ವಿಜಯನಗರ ಜಿಲ್ಲೆಗಳ ಹಳ್ಳಿ – ಹಳ್ಳಿಗಳಿಂದ ಬಂದ ನೂರಾರು ಪೆÇೀಷಕರು, ವಿದ್ಯಾರ್ಥಿಗಳು ನಮ್ಮ ಶಾಲೆ – ನಮ್ಮ ಹಕ್ಕು, ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ ಎಂಬ ಹೋರಾಟದ ಘೋಷಣೆ ಮೊಳಗಿಸಿದರ ಮೂಲಕ ಪಾಲ್ಗೊಂಡಿದ್ದರು.



























