Home ಜಿಲ್ಲೆ ಕಲಬುರಗಿ ಕಜಾಪ ದಶಮಾನೋತ್ಸವ, ಪ್ರಶಸ್ತಿ ಪ್ರದಾನ 5ರಂದು

ಕಜಾಪ ದಶಮಾನೋತ್ಸವ, ಪ್ರಶಸ್ತಿ ಪ್ರದಾನ 5ರಂದು

ಕಲಬುರಗಿ:ಫೆ.2: ಕನ್ನಡ ಜಾನಪದ ಪರಿಷತ್‍ನ ಸಂಸ್ಥಾಪನೆಯ ದಶಮಾನೋತ್ಸವ, ಜಾನಪದ ಸಾಹಿತಿಗಳಿಗೆ ಪ್ರಶಸ್ತಿ ಪ್ರದಾನ, ಕಲಾ ಪ್ರದರ್ಶನ ಹಾಗೂ ಕಜಾಪ ಉತ್ತರ ವಲಯದ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ ಇದೇ ದಿ.5ರಂದು ಏರ್ಪಡಿಸಲಾಗಿದೆ ಎಂದು ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪಾಟೀಲ್ ಜಂಟಿಯಾಗಿ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಪತ್ರಿಕಾ ಪ್ರಕಟಣೆಯ ಮೂಲಕ ವಿವಿರ ನೀಡಿದ ಅರವು, ಕನ್ನಡ ಸುವರ್ಣ ಭವನದಲ್ಲಿ ದಿ.5ರಗುರುವಾರ ಬೆ.10.30ಗಂಟೆಗೆ ಜರುಗಲಿರುವ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪೂಜ್ಯ ಮಾತೋಶ್ರೀ ಡಾ.ದಾಕ್ಷಾಯಣಿ ಎಸ್.ಅಪ್ಪ, ಶ್ರೀನಿವಾಸ ಸರಡಗಿಯ ಶ್ರೀ ಮಹಾಲಕ್ಷ್ಮೀ ಪೀಠದ ಪೂಜ್ಯ ಡಾ.ಅಪ್ಪಾರಾವ ದೇವಿಮುತ್ಯಾ ಮಹಾರಾಜರು ದಿವ್ಯ ಸಾನಿಧ್ಯ ವಹಿಸಲಿದ್ದು, ಶಾಸಕರಾದ ಅಲ್ಲಮಪ್ರಭು ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಜಾಪ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಉದ್ಘಾಟಿಸಲಿದ್ದು, ಗುವಿವಿ ಕುಲಸಚಿವರಾದ ಡಾ.ರಮೇಶ್ ಲಂಡನಕರ್ ದಶಮಾನೋತ್ಸವ ಲೋಗೊ ಬಿಡುಗಡೆಗೊಳಿಸುವುರು. ಕಜಾಪ ಜಿಲ್ಲಾಧ್ಯಕ್ಷರಾದ ಎಂ.ಬಿ.ನಿಂಗಪ್ಪ ಅಧ್ಯಕ್ಷತೆ ವಹಿಸಲಿದ್ದು, ಜಾನಪದ ತಜ್ಞರಾದ ಡಾ.ಹನುಮಂತರಾವ ಬಿ.ದೊಡ್ಡಮನಿ ಉಪನ್ಯಾಸ ನೀಡಲಿದ್ದಾರೆ. ಗುವಿವಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಚ್.ಟಿ.ಪೋತೆ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸುರೇಶ ಸಜ್ಜನ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪ ನಿರ್ದೇಶಕರಾದ ಜಗದೇಶ್ವರಿ ನಾಶಿ, ಕಲ್ಯಾಣ ಕರ್ನಾಟಕ ಹೋರಾಟ ಸಮೀತಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಲಕ್ಷ್ಮಣ ದಸ್ತಿ, ಕಸಾಪ ಜಿಲ್ಲಾಧ್ಯಕ್ಷರಾದ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ, ಯಾದಗಿರಿ ಕಜಾಪ ಜಿಲ್ಲಾಧ್ಯಕ್ಷರಾದ ಶರಣಪ್ಪ ತೋರಣಕಲ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಜಾನಪದ ಸಾಹಿತಿಗಳಾದ ಎ.ಕೆ.ರಾಮೇಶ್ವರ, ಡಾ.ಸ್ವಾಮಿರಾವ ಕುಲಕರ್ಣಿ, ಡಾ.ಶ್ರೀಶೈಲ್ ನಾಗರಾಳ, ಡಾ.ಚಿ.ಸಿ.ನಿಂಗಣ್ಣ, ಪ್ರೊ.ಶೋಭಾದೇವಿ ಚಕ್ಕಿ, ಡಾ.ಶರಣಪ್ಪ ಮಾಳಗೆ, ಎಸ್.ಪಿ.ಸುಳ್ಳದ, ಜಾನಪದ ಕಲಾ ಪೋಷಕರಾದ ಮಕ್ಸೂದ್ ಅಫಜಲ್ ಜಾಹಗಿರದಾರ್, ಪ.ಮಾನು ಸಾಗರ ಅವರಿಗೆ ದಶಮಾನೋತ್ಸವ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಗುವುದು. ವಿವಿಧ ಕ್ಷೇತ್ರದ ಸಾಧಕರಾದ ಚಂದ್ರಕಾಂತ ಗದಗಿ(ಶಿಕ್ಷಣ), ಬಸವರಾಜ ಕೋನೆಕ್(ಪುಸ್ತಕ ಪ್ರಕಾಶನ), ಡಾ.ಚನ್ನವೀರ ಪಾಟೀಲ್(ಆರೋಗ್ಯ), ಡಾ.ಡಿ.ಜಿ.ಸಾಗರ(ಸಾಮಾಜಿಕ), ಸುಭಾಷಚಂದ್ರ ನಾಯಕವಾಡ(ಶಿಕ್ಷಣ) ಮತ್ತು ವಿಜಯದಶರಥ ಸಂಗನ್(ಎಂಜಿನಿಯರಿಂಗ್) ಅವರಿಗೆ ದಶಮಾನೋತ್ಸವ ಗೌರವ ಸಮ್ಮಾನ ಜರುಗಲಿದೆ.
ಜಾನಪದ ಕಲಾವಿದರಾದ ದೇವಿಂದ್ರಪ್ಪ ಎಂ.ಸಜ್ಜನ, ವೀರಪ್ಪ ಮಾದನ ಹಿಪ್ಪರಗಿ, ದಶರಥ ಆಲಗೂಡ ಗೀಗಿ ಪದ, ಛತ್ರಬಾಯಿ ಬಮ್ಮನಾಯಕ ಮತ್ತು ಸಂಗಡಿಗರಿಂದ ಜೋಗುಳಪದ, ಚಂದ್ರಕಲಾ ಬಂಡೆ ಮತ್ತು ಸಂಗಡಿಗರಿಂದ ಶೋಭಾನಪದ, ಲವಕುಶ, ಶಾಂತಾಬಾಯಿ, ಮಹಾದೇವಿ, ಲಕ್ಷ್ಮೀಬಾಯಿ, ನೀಲಮ್ಮ ಭಜನೆ, ಮಲ್ಲಮ್ಮ, ಮಹಾದೇವಿ ತಳವಾರ, ಶಾಂತಾಬಾಯಿ ಬಡಿಗೇರ ಜೋಕುಮಾರ ಗೀತೆಗಳು, ಸಿದ್ದಣ್ಣ ಗುಡ್ಡಾ ಮತ್ತು ಸಂಗಡಿಗರಿಂದ ಬೈಲಾಟ್, ಭೀಮರಾವ ದೊಡ್ಡಮನಿ, ಮಲ್ಲಿಕಾರ್ಜುನ ಜಾನೆ, ಶಿವಮೂರ್ತಿ, ರಾಜಕುಮಾರ ಹೆಬ್ಬಾಳ ಅವರಿಂದ ಜಾನಪದ ಗೀತ ಗಾಯನ ಸೇರಿದಂತೆ ವಿವಿಧ ಕಲಾ ಪ್ರದರ್ಶನ ಜರುಗಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಜಾಪ ಉತ್ತರ ವಲಯದ ಅಧ್ಯಕ್ಷ ಪ್ರಭವ ಕೆ.ಪಟ್ಟಣಕರ್, ಕಾರ್ಯದರ್ಶಿ ಮಲ್ಲಿಕಾರ್ಜುನ ತಳವಾರ ಇದ್ದರು.