Home ಜಿಲ್ಲೆ ಬೆಂಗಳೂರು ಮಾನವನ ಶ್ರೇಷ್ಠತೆಯ ವ್ಯಸನಕ್ಕೆ ಮದ್ದು ಅರೆದವರು ಕೈವಾರ ತಾತಯ್ಯ

ಮಾನವನ ಶ್ರೇಷ್ಠತೆಯ ವ್ಯಸನಕ್ಕೆ ಮದ್ದು ಅರೆದವರು ಕೈವಾರ ತಾತಯ್ಯ

ಕೋಲಾರ,ಮಾ,೪- ಮನುಷ್ಯನ ಶ್ರೇಷ್ಠತೆ ವ್ಯಸನಕ್ಕೆ ತಮ್ಮ ಅನುಭಾವದ ಮೂಲಕ ಮದ್ದು ಅರೆದವರು ಸದ್ಗುರು ಕೈವಾರ ತಾತಾಯ್ಯನವರು, ಅಧ್ಯಾತ್ಮ ಅಂದರೆ ಚರ್ಮ ಶುದ್ದಿ ಅಲ್ಲ. ಅಂತರಂಗದ ಬಹಿರಂಗ ಶುದ್ದಿ ಎಂದು ಬದುಕಿನಲ್ಲಿ ತೋರಿಸಿ ಕೊಟ್ಟರು ಎಂದು ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅಭಿಪ್ರಾಯಪಟ್ಟರು.


ನಗರದ ಟಿ.ಚೆನ್ನಯ್ಯ ರಂಗ ಮಂದಿರದಲ್ಲಿ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ೩೦೦ ನೇ ಜಯಂತಿ ಆಂಗವಾಗಿ ತಾತಯ್ಯನವರ ಸ್ಥಬ್ದ ಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿ ಕಠಿಣವಾದ ಅಧ್ಯಾತ್ಮಿಕತೆಯ ಸಾರಾಂಶವನ್ನು ಸರಳವಾದ ಜನ ಸಾಮಾನ್ಯರ ಭಾಷೆಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಿದ ಸಂತ ಶ್ರೇಷ್ಟರು ತಾತಯ್ಯನವರು ಎಂದರು.


ತಮ್ಮ ಅನುಭಾವವನ್ನೆ ತತ್ವಪದಗಳನ್ನಾಗಿ ರಚಿಸಿ ಹಾಡುವ ಮೂಲಕ ಸಮಾಜಕ್ಕೆ ಅಧ್ಯಾತ್ಮದ ದಾರಿಯನ್ನು ತೋರಿಸಿದ ಸಂತರ ಪರಂಪರೆಯನ್ನು ಸೂಫಿಗಳ ಮುಂದುವರೆಸಿದರು ಎಂದು ಬಣ್ಣಿಸಿದ ಅವರು ತಾತಯ್ಯನವರು ಬರೆದ ಕಾಲಜ್ಞಾನ ಕೇವಲ ಭವಿಷ್ಯವಾಣಿಯಲ್ಲ. ಅದು ಅಧ್ಯಾತ್ಮಕತೆ ಸಾರಾಂಶ ಮತ್ತು ಸಮಾಜದ ಅಂಕುಡೊಂಕು ತಿದ್ದುವ ಮಾರ್ಗದರ್ಶನ ದಾರಿ ದೀಪವಾಗಿದೆ ಎಂದರು.


ಸಂಜೆ ಚೆನ್ನಯ್ಯ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜೆ.ಡಿ.ಎಸ್. ಮುಖಂಡ ಸಿ.ಎಂ.ಆರ್. ಶ್ರೀನಾಥ್ ಮಾತನಾಡಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ತಾತಯ್ಯನವರ ಸಂಶೋಧನೆ ಮತ್ತು ಅಧ್ಯಯನ ಕೇಂದ್ರ ಸ್ಥಾಪನೆ, ಬಲಿಜ ಜನಾಂಗಕ್ಕೆ ೨ಎ ಮೀಸಲಾತಿ ಉದ್ಯೋಗಕ್ಕೂ ವಿಸ್ತರಿಸ ಬೇಕು. ಬಲಿಜ ಅಭಿವೃದ್ದಿ ನಿಗಮ ಸಮಿತಿ ರಚನೆ, ಕೈವಾರವನ್ನು ಧಾರ್ಮಿಕ ಪ್ರವಾಸಿ ಕೇಂದ್ರವನ್ನಾಗಿಸ ಬೇಕೆಂಬ ಬೇಡಿಕೆಗೆ ತಮ್ಮ ಬೆಂಬಲ ಇದೆ ಎಂದು ಘೋಷಿಸಿದರು.


ಬಲಿಜ ಜನಾಂಗದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಆರ್.ಟಿ.ಸಿ. ಪ್ರಸಾದ್ ಮಾತನಾಡಿ ಶಿಕ್ಷಣಕ್ಕೆ ಸೀಮಿತ ಅಗಿರುವ ೨ಎ ಮೀಸಲಾತಿಯನ್ನು ಉದ್ಯೋಗ ಮತ್ತು ರಾಜಕೀಯಕ್ಕೂ ವಿಸ್ತರಿಸದಿದ್ದರೆ ಮುಂದಿನ ವರ್ಷದ ತಾತಾಯ್ಯನವರ ಜಯಂತಿಯನ್ನು ಬಹಿಷ್ಕರಿಸಿ ಪ್ರತಿಭಟಿಸಲಿದೆ ಎಂದು ಎಚ್ಚರಿಕೆ ನೀಡಿದರು.


ಇದೇ ಸಂದರ್ಭದಲ್ಲಿ ಸಮುದಾಯದ ೭೬ ಮಂದಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪ್ರತಿಭೆಗಳನ್ನು ಪುರಸ್ಕರಿಸಲಾಯಿತು.


ಸಂಸದ ಮಲ್ಲೇಶ್ ಬಾಬು. ಶಾಸಕ ಕೊತ್ತೂರು ಮಂಜುನಾಥ್ ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್, ಡಿ.ಐ.ಜಿ. ದೇವರಾಜ್, ಬಲಿಜ ಸಮುದಾಯದ ಮುಖಂಡರಾದ ಚಿಟ್ಟಿ ರಘು,. ರವೀಂದ್ರಕುಮಾರ್ ಕೆ.ವಿ.ಸುರೇಶ್ ಕುಮಾರ್. ಪುಸ್ಠಿ ನಾರಾಯಣಸ್ವಾಮಿ , ನಿವೃತ್ತ ಡಿ.ವೈ.ಎಸ್.ಪಿ ವೆಂಕಟಸ್ವಾಮಿ, ಫಾರೆಸ್ಟ್ ಶ್ರೀಧರ್, ಜನಾರ್ಧನ್, ಕೃಷ್ಣಯ್ಯ ಶೆಟ್ಟಿ, ಆಶೋಕ್ ಯುವ ಮುಖಂಡ ರಾಜೇಶ್, ರೌತ್ ಶಂಕರಪ್ಪ, ಸುಧಾಕರ್ ಸಾಮಾ ಅನಿಲ್ ಬಾಬು. ಜಿಲ್ಲಾ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯ ಲಕ್ಷ್ಮಿ, ನಾಗಭೊಷಣ್, ಸುಗಟೂರು ನಾಗರಾಜ್ ಮುಂತಾದವರು ಇದ್ದರು.