ಜೂಡೊ ಸ್ಪರ್ಧೆ:ಎಸ್.ಆರ್.ಎನ್ ಮೆಹೆತಾ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಕಲಬುರಗಿ,ಅ.10: ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ ಜಿಲ್ಲಾ ಮಟ್ಟದಜೂಡೊ ಸ್ಪರ್ಧೆಯಲ್ಲಿ ಭಾಗವಹಿಸಿ ನಗರದಎಸ್. ಆರ್. ಎನ್ ಮೆಹೆತಾ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆಯುವುದರ ಮೂಲಕ ರಾಜ್ಯಮಟ್ಟಕ್ಕೆಆಯ್ಕೆಯಾಗಿದ್ದಾರೆ.
14 ವರ್ಷದೊಳಗಿನ ಬಾಲಕಿಯರ ಸ್ಪರ್ಧೆಯಲ್ಲಿಶ್ರಾವಣಿ- 27ಕೆ.ಜಿ ಪ್ರಥಮ ಸ್ಥಾನ,14 ವರ್ಷದೊಳಗಿನ ಬಾಲಕರ ಸ್ಪರ್ಧೆಯಲ್ಲಿರೇಯಾಂಶ – 30 ಕೆ. ಜಿ ಪ್ರಥಮ ಸ್ಥಾನ,ಸಾಯಿಪ್ರಸಾದ-40 ಕೆ.ಜಿಪ್ರಥಮ ಸ್ಥಾನ,ಕೃಷ್ಣಾ- 45ಕೆ.ಜಿ ಪ್ರಥಮ ಸ್ಥಾನ,ಓಂಕಾರ- 50ಕೆ.ಜಿ ಪ್ರಥಮ ಸ್ಥಾನ,ರಿಷಭ-50 ಕೆ.ಜಿ ಪ್ರಥಮ ಸ್ಥಾನ,17 ವರ್ಷದೊಳಗಿನ ಬಾಲಕರ ಸ್ಪರ್ಧೆಯಲ್ಲಿ ಪ್ರೇಮಬಿರಾದರ – 40ಕೆ.ಜಿ ಪ್ರಥಮ ಸ್ಥಾನ,ಪ್ರೇಮಕುಮಾರ ಶಂಕರ – 45 ಕೆ.ಜಿಪ್ರಥಮ ಸ್ಥಾನ,ಹೇಮಂತ – 73ಕೆ.ಜಿ ಪ್ರಥಮ ಸ್ಥಾನ ಮತ್ತು ವಿಷ್ಣು- 81 ಕೆ.ಜಿಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯ ಟ್ರಸ್ಟಿಗಳಾಗದ ಚಕೋರ ಮೆಹತಾ, ಪ್ರಾಚಾರ್ಯರಾದ ಪ್ರೀತಿಮೆಹತಾ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಬಸವರಾಜ ತಳಕೇರಿ, ಜೂಡೊತರಬೇತಿದಾರ ಅಶೋಕ ಮಲ್ಲೇಶಿ ಹಾಗೂ ಶಿಕ್ಷಕ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.