
ಕಲಬುರಗಿ,ಅ.27-ಭಾರತದ ಪ್ರಜಾಪ್ರಭುತ್ವದ ಹಿರಿಮೆಯನ್ನು ಜನಜಾಗೃತಗೊಳಿಸಲು ಮತ್ತು ಪ್ರಬುದ್ಧ ಭಾರತದ ಸಂವಿಧಾನದ ಆಶಯಗಳನ್ನು ಸಾಕಾರೊಳಿಸಲು ನ.2 ರಂದು ಜೈಭೀಮ ಸೇನೆ ವತಿಯಿಂದ ಚಿತ್ತಾಪುರದಲ್ಲಿ ಪಥಸಂಚನಲ ನಡೆಸಲು ನಿರ್ಧರಿಸಿದ್ದು, ಇದಕ್ಕೆ ಅನುಮತಿ ನೀಡಬೇಕು, ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅವರ ಕುಟುಂಬದವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದವರನ್ನು ಕೂಡಲೇ ಬಂಧಿಸಬೇಕು ಮತ್ತು ಆರ್‍ಎಸ್‍ಎಸ್ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿ ಜೈಭೀಮ ಸೇನೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು.
ಸೇನೆ ರಾಜ್ಯ ಸಂಚಾಲಕ ಗುಂಡಪ್ಪ ಲಂಡನಕರ್, ಜಿಲ್ಲಾ ಅಧ್ಯಕ್ಷ ರಾಹುಲ್ ಎಸ್.ಉಪಾರೆ, ಸಿದ್ಧಾರ್ಥ ದಿಕಸಂಗಿಕರ್, ಅಮಿತ್‍ಕುಮಾರ ಎಂ.ಮಾಲೆ, ಅರಣಕುಮಾರ ವಿ., ರೇವಣ್ಣ ಬಾವಿಮನಿ, ದತ್ತು ಬಿ. ಬುಕ್ಕನ್, ನಿರಗುಣ ಬಳಿಚಕ್ರ, ನಾಗರಾಜ ಪಟ್ಟಣಕರ, ದರ್ಶನ ಮುಡ್ಡಿ, ಮಹ್ಮದ್ ಸದ್ದಾಂ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





























