
ಕಲಬುರಗಿ:ಜ.25: ಕ್ರಿಕೆಟ್ ದಲ್ಲಿ ಕೇವಲ ಪುರುಷರಿಗೆ ಮಾತ್ರ ಹೆಚ್ಚಿನ ಮನ್ನಣೆ ನೀಡುವ ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸಂಘ ಮಹಿಳಾ ಟೀಮ್ ಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದು ಖುಷಿಯ ವಿಚಾರ ಎಂದು ಸಿಪಿಐ ನಟರಾಜ್ ಲಾಡೆ ಹೇಳಿದರು.
ಸಂವಿಧಾನ ದಿನಾಚರಣೆಯ ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ಸಂಘ ವಿವಿಯ ದೈಹಿಕ ಶಿಕ್ಷಣ ವಿಭಾಗದ ಹೊರಾoಗಣ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಂವಿಧಾನ ಪ್ರೀಮಿಯರ್ ಲೀಗ್-2026 ಪುರುಷ ಮತ್ತು ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟಾಸ್ ಮಾಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಬೆಳವಣಿಗೆಗೆ ಆಟಗಳು ಮತ್ತು ಕ್ರೀಡೆಗಳು ಅತ್ಯಗತ್ಯ. ವಿದ್ಯಾರ್ಥಿಗಳು ಅವುಗಳಿಂದ ಹೆಚ್ಚಿನದನ್ನು ಪಡೆಯುತ್ತಾರೆ, ಇದರಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯ ವರ್ಧಿಸುವುದು, ಶೈಕ್ಷಣಿಕ ಸಾಧನೆ ಹೆಚ್ಚಿಸುವುದು, ಸಾಮಾಜಿಕ ಕೌಶಲ್ಯ ಮತ್ತು ಸ್ವ-ಮೌಲ್ಯ ವರ್ಧಿಸುವುದು ಇತ್ಯಾದಿ ಸೇರಿವೆ ಎಂದರು.
ನಾಗನಹಳ್ಳಿ ಪೆÇಲೀಸ್ ತರಭೇತಿ ಕೇಂದ್ರದ ಪೆÇರೆನ್ಸಿಕ್ ಅಧಿಕಾರಿ ಡಾ. ದಿಲೀಪ್ ಕುಮಾರ್ ನವಲೆ ಮಾತನಾಡಿ ಸಂವಿಧಾನ ಪ್ರಿಮಿಯರ್ ಲೀಗ್ ಆಡಿಸುತ್ತಿರುವುದು ಹೆಮ್ಮೆಯ ವಿಷಯ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸೋಲು ಗೆಲುವು ಸಮನಾಗಿ ಸ್ವೀಕರಿಸಬೇಕು. ಇಂತಹ ಹಲವು ಕ್ರೀಡೆಗಳು ವಿವಿಯ ಆವರಣದಲ್ಲಿ ನಡೆಯಲಿ ಎಂದು ಹಾರೈಸಿದರು. ಈ ಕ್ರಿಕೆಟ್ ಪಂದ್ಯದಲ್ಲಿ ಆಟವಾಡಿದವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿ ಎಂದರು.
ಸಂಘದ ಗೌರವಾಧ್ಯಕ್ಷ ಡಾ. ಎಂ ಬಿ ಕಟ್ಟಿ, ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಅರುಣಕುಮಾರ ಬಿ. ಕುರನೆ, ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಅಶೋಕ ದೊಡ್ಮನಿ, ಡಾ. ಹಣಮಂತ ಮೇಲಕೇರಿ, ಸುನೀಲ ಜಾಬಾದಿ, ಸಂತೋಷ ಕಂಬಾರ, ಪ್ರಕಾಶ್ ಸಂಗಮ, ಡಾ. ಮಾಧುರಿ ಬಿರಾದಾರ, ಡಾ. ಶಿವಶರಣಪ್ಪ ಕೊಡ್ಲಿ, ಡಾ. ರೂಕ್ಸನಾ, ಡಾ. ಶಂಭುಲಿಂಗ ನಾಡಿಗೇರಿ, ಡಾ. ಆನಂದ ಮೇಟಿ ನಿರ್ಣಾಯಕರಾದ ಪುಟ್ಟರಾಜ ಮಡಿವಾಳ, ಅಜಯ ರಾಠೋಡ್, ಓಂಕಾರ ಮಡಿವಾಳ, ಗಣೇಶ ಮದರಿ, ಸಾವಿರಲಿಂಗ ಅತಿಥಿ ಉಪನ್ಯಾಸಕರಾದ ಡಾ.ಪರಶುರಾಮ ಪಿ, ಡಾ. ಶೇಖರ ಸಲಗರ, ಡಾ. ಶಿವಶರಣಪ್ಪ ಕೊಡ್ಲಿ, ಡಾ. ಶಿವಾನಂದ ಕಡಗಂಚಿ, ಡಾ. ಮಿಲಿಂದ ಕಾಂಬಳೆ, ಡಾ. ತಾತ್ಯಾರಾವ, ಡಾ. ಮoಜೂರ್ ಅಹ್ಮದ, ಡಾ. ಸಿದ್ಧಾರ್ಥ ಬಬಲಾದ, ಡಾ. ರಾಜಕುಮಾರ ಎಂ ದಣ್ಣೂರ, ಡಾ. ಕವಿತಾ ನಾಗಶೆಟ್ಟಿ, ಡಾ. ಚಿಂತನ ರಾಠೋಡ್, ಡಾ. ರಾಜೇಶ್ವರಿ, ಡಾ. ಮಹಾಲಿಂಗಪ್ಪ ಮಂಗಳೂರು, ಅಭಯಕುಮಾರ ಪೆÇೀತೆ, ಡಾ. ಸಂದೀಪ ಹೋಲ್ಕರ್, ಡಾ. ನಂದಿನಿ, ಡಾ. ವಿಜಯಕುಮಾರ ಬೀಳಗೆ, ಸೇರಿದಂತೆ ಇತರರು ಇದ್ದರು.
























