Home ಜಿಲ್ಲೆ ವಿದ್ಯಾರ್ಥಿಗಳಿಗೆ ಹೊಸ ಆವಿಷ್ಕಾರ ತಿಳಿಸುವುದು ಬಹು ಮುಖ್ಯ:ಇನಾಮದಾರ

ವಿದ್ಯಾರ್ಥಿಗಳಿಗೆ ಹೊಸ ಆವಿಷ್ಕಾರ ತಿಳಿಸುವುದು ಬಹು ಮುಖ್ಯ:ಇನಾಮದಾರ

ಸಂಜೆವಾಣಿ ವಾರ್ತೆ,
ವಿಜಯಪುರ, ಏ. ೭:ವಿದ್ಯಾರ್ಥಿಗಳಿಗೆ ಹೊಸ ತಂತ್ರಜ್ಞಾನಗಳ ಅವಿಷ್ಕಾರಗಳ ಬಗ್ಗೆ ತಿಳಿಸುವುದು ಬಹು ಮುಖ್ಯವಾಗಿರುತ್ತದೆ. “ಕಾಂಪಿಟೇಷನಲ್ ಬಯಾಲಜಿ ಮತ್ತು ಮಾಲಿಕ್ಯುಲರ್ ಬಯಾಲಜಿ ಟೆಕ್ನಿಕ್ಸ್” ಈ ತಂತ್ರಜ್ಞಾನಗಳು ಕೃಷಿ ಸಂಶೋಧನೆ, ವೈದ್ಯಕಿಯ ಸಂಶೋಧನೆಯಲ್ಲಿ ಬಹು ಮುಖ್ಯವಾಗಿರುತ್ತದೆ ಎಂದು ಬಿ.ಎಲ್.ಡಿ.ಇ, ವಿಶ್ವವಿದ್ಯಾಲಯದ, ಕುಲಪತಿ ಪ್ರೊ.ಅರುಣ ಇನಾಮದಾರ ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ, ಜೈವಿಕ ಮಾಹಿತಿ ಅಧ್ಯಯನ ಹಾಗೂ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಸಹಯೋಗದಲ್ಲಿ ವಿಷನ್ ಗ್ರೂಪ್ ಆಪ್ ವಿಜ್ಞಾನ ಮತ್ತು ತಂತ್ರಜ್ಞಾ ದಾರ್ಶನಿಕ ಇವರ ಪ್ರಾಯೋಜತ್ವ ಅಡಿಯಲ್ಲಿ ೫ ದಿನಗಳ “ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೊಗ್ರಾಮ್ ಇನ್ ಕಾಂಪಿಟೇಷನಲ್ ಬಯಾಲಜಿ ಮತ್ತು ಮಾಲಿಕ್ಯುಲರ್ ಬಯಾಲಜಿ ಟೆಕ್ನಿಕ್ಸ್” ಎಂಬ ವಿಷಯದ ಮೇಲೆ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು ಶಿಬಿರಾರ್ಥಿಗಳಿಗೆ ಎಫ್‌ಡಿಪಿ ಕಾರ್ಯಕ್ರಮದ ಅನುಕೂಲತೆಗಳು ಮತ್ತು ವುಗಳನ್ನು ಹೇಗೆ ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಇವತ್ತಿನ ಎಐ ತಂತ್ರಜ್ಞಾನದ ಯುಗದಲ್ಲಿ ಶಿಕ್ಷಕರು ವಿವಿಧ ರೀತಿಯಲ್ಲಿ ವಿಷಯಗಳನ್ನು ವಿಶ್ಲೇಷಣೆ ಮಾಡಿ ವಿದ್ಯಾರ್ಥಿಗಳಿಗೆ ತಿಳಿಸಲು ಪ್ರಯತ್ನಿಸಬೇಕು. ಶಿಕ್ಷಕರು ದಿನನಿತ್ಯ ಹೊಸತನವನ್ನು ಕಲಿಯಲು ಪ್ರಯತ್ನಿಸಬೇಕು ಹಾಗೂ ವೃತ್ತಿಪರತೆಯನ್ನು ಮರೆಯಬಾರದು ಎಂದು ಸಲಹೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ವಿಜಯಾ ಬಿ. ಕೋರಿಶೆಟ್ಟಿ ಅವರು ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರು ಹೊಸ ಅವಿಷ್ಕಾರಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಅವಶ್ಯವಾಗಿರುತ್ತದೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಂಶೋಧನೆಯಲ್ಲಿ ತೊಡಗಿಸಿಕೋಳ್ಳಲು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಯೋಜಕ ಡಾ.ಬಾಬು ಆರ್. ಎಲ್. ಸ್ವಾಗತಿದರು, ಡಾ.ಜಾಯ್ ಹೊಸಕೇರಿ ವಂದಿಸಿದರು. ವಿದ್ಯಾರ್ಥಿನಿ ಸೂರ್ಯವಂಶಿ ನಿರೂಪಿಸಿದರು. ಹಾಗೂ ವಿವಿ ಪ್ರಾಧ್ಯಾಪಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.