
ಮಾಲೂರು.ಆ೧೬:ಗೊಲ್ಲ ಯಾದವ ಸಮುದಾಯವು ಎಲ್ಲಾ ಸಮುದಾಯಗಳ ಪ್ರೀತಿ ವಿಶ್ವಾಸಗಳಿಸಿದೆ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ , ರಾಜಕೀಯವಾಗಿ ಮುಂಚೂಣಿಗೆ ಬರಲು ಹೆಚ್ಚಿನ ಅವಕಾಶಗಳ ಅಗತ್ಯವಿದೆ ಎಂದು ಯಾದವ ಗೊಲ್ಲ ಸಂಘದ ತಾಲೂಕು ಅಧ್ಯಕ್ಷ ಎ ವೈ ಗೋವಿಂದಪ್ಪ ಹೇಳಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಗೋಲ್ಲಯಾದವ ಸಂಘದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿ ನಂತರ ಶ್ರೀ ಕೃಷ್ಣ ಮೂರ್ತಿ ಹೊತ್ತ ಮುತ್ತಿನ ಪಲ್ಲಕ್ಕಿಯ ಮೆರವಣಿಗೆಗೆ ತಹಶೀಲ್ದಾರ್ ಎಂ.ವಿ.ರೂಪ ಅವರು ಚಾಲನೆ ನೀಡಿದರು.
ರಾಜ್ಯದಲ್ಲಿ ಗೊಲ್ಲ ಯಾದವ ಸಮುದಾಯವು ಕಡಿಮೆ ಜನಸಂಖ್ಯೆ ಇದ್ದರೂ ಎಲ್ಲಾ ರಂಗಗಳಲ್ಲಿ ಮಂಚೂಣಿಗೆ ಬರಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಸಮುದಾಯಗಳ ಪ್ರೀತಿ ವಿಶ್ವಾಸ ಪಡೆದು ಸಮುದಾಯವು ಶೈಕ್ಷಣಿಕ, ರಾಜಕೀಯ, ಸಾಮಾಜಿಕವಾಗಿ ಅಭಿವೃದ್ಧಿ ಶಾಸಕ ಕೆ.ವೈ.ನಂಜೇಗೌಡರ ಬಳಿ ಚರ್ಚೆ ನಡೆಸಿ ಮನವಿ ಮಾಡಲಾಗುವುದು, ಈಗಾಗಲೇ ಸರಕಾರದಿಂದ ಸಿ.ಎ.ನಿವೇಶನ ನೀಡಿದ್ದು, ನಿವೇಶನದಲ್ಲಿ ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿ ನಿಲಯ, ಸಮುದಾಯ ಭವನ ನಿರ್ಮಾಣ ಮಾಡಲು ಎಲ್ಲರ ಸಹಕಾರ ಕೋರಿದ್ದು, ಮತ್ತೆ ದಾನಿಗಳು ಜನಪ್ರತಿನಿಧಿಗಳಿಂದ ಸಹಕಾರ ಪಡೆಯಲು ಮುಂದಾಗುವುದಾಗಿ ಹೇಳಿದರು.
ಇಸ್ಕಾನ್ ಮಾದರಿಯ ಶ್ರೀಕೃಷ್ಣ ಮಂದಿರ ನಿರ್ಮಿಸಲು ತಾಲೂಕು ಆಡಳಿತಕ್ಕೆ ಭೂಮಿಯನ್ನು ಕೇಳಲಾಗಿದ್ದು ಶಾಸಕರು ಸಭೆಗೆ ಅನ್ಯ ಕಾರ್ಯದ ನಿಮಿತ್ತ ಗೈರು ಹಾಜರಾಗಿರುವ ಕಾರಣ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಿ ಜಮೀನಿನ ಬಗ್ಗೆ ಚರ್ಚಿಸಲಾಗುವುದು ಎಂದರು
ತಾ.ಪಂ.ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ ತಾಲೂಕಿನಲ್ಲಿ ಯಾದವ ಸಮುದಾಯದವರು ಕಡಿಮೆ ಸಂಖ್ಯೆಯಲ್ಲೂ ಇದ್ದರೂ ಸಹ ಶ್ರಮಜೀವಿಗಳಾಗಿದ್ದಾರೆ. ಎಲ್ಲಾ ವರ್ಗದವರೊಂದಿಗೆ ಹೊಂದಿಕೊಂಡು ಸಹಬಾಳ್ವೆಯ ಜೀವನವನ್ನು ನಡೆಸುತ್ತಿದ್ದಾರೆ. ಶ್ರೀ ಕೃಷ್ಣ ಪರಮಾತ್ಮ ಯಾದವ ಸಮುದಾಯದಲ್ಲಿ ಹುಟ್ಟಿದವರೆಂದರೆ ನಮ್ಮ ಸಮುದಾಯಕ್ಕೆ ಅದರದೇ ಆದ ಗೌರವ ಸಿಕ್ಕಿದೆ ಪ್ರತಿ ವರ್ಷ ತಾಲೂಕು ಆಡಳಿತದ ವತಿಯಿಂದ ಆಚರಿಸುವ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಯಾದವ ಸಂಘ ಹಾಗೂ ಸಮುದಾಯದವರು ಹೆಚ್ಚಿನ ಸಹಕಾರ ನೀಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಯನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ. ವಿ.ರೂಪ, ಮಾತನಾಡಿ ಮಹನೀಯರು ಕೇವಲ ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತರಲ್ಲ, ಒಂದು ಧರ್ಮದ ಏಳಿಗೆಗಾಗಿ ದುಡಿದವರಲ್ಲ ಅವರು ಎಲ್ಲಾ ಜಾತಿ ಧರ್ಮಗಳ ಸಮಾಜದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಅರ್ಪಿಸಿ ಕೊಂಡಿದ್ದಾರೆ. ನಾವು ಅವರನ್ನು ಕೇವಲ ಒಂದು ಸಮುದಾಯದ ವರ್ಗಕ್ಕೆ ಮೀಸಲಿಡಬಾರದು. ಎಲ್ಲಾ ಸಮುದಾಯದವರನ್ನು ಒಟ್ಟುಗೂಡಿಸಿಕೊಂಡು ಇಂತಹ ಕಾರ್ಯಕ್ರಮಗಳ ಮಾಡುವುದರಿಂದ ಎಲ್ಲರನ್ನು ಸಮಾನತೆ ಮತ್ತು ಒಗ್ಗಟ್ಟು ಸರ್ವ ಧರ್ಮ ಪಾಲನೆ ಮಾಡಿದಂತಾಗುತ್ತದೆ.
ದ್ವಾಪರಯುಗದಲ್ಲಿ ನಡೆದ ಧರ್ಮ ಮತ್ತು ಅಧರ್ಮಗಳ ನಡುವೆ ನಡೆದ ಯುದ್ಧದಲ್ಲಿ ಧರ್ಮಕ್ಕೆ ಜಯ ಸಿಕ್ಕಿತು, ಧರ್ಮಕ್ಕೆ ಜಯಸಿಗುವುದು ಸ್ವಲ್ಪ ತಡವಾಗಬಹುದು ಅಧರ್ಮ ಮೋಸದಿಂದ ಬೇಗ ಜಯ ಘೋಷಿಸಿಕೊಳ್ಳಬಹುದು ಆದು ಮೊಸದ ಜಯ ಎಂಬುದು ಹರಿಯುವ ಬೇಕೆ ವಿನಹ ದೃಢಿಗೆಡಬಾರದು ಶ್ರೀಕೃಷ್ಣಪರ ಮಾತ್ಮ, ಪಾಂಡುವರಿಗೂ ಕಷ್ಟ ತಪ್ಪಿಲ್ಲ ಕಷ್ಟ ಮತ್ತು ಸದ್ಯದ ಪ್ರತಿಫಲವೆ ಗೆಲುವು ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟ ಶ್ರೀಕೃಷ್ಣ ಪರ ಮಾತ್ಮ ಎಲ್ಲಾ ಜಾತಿಗಳ ಆದರ್ಶ ದೇವರು ಅದರಂತೆ ಯಾರು ಏನು ಆಗುತ್ತಾರೆ ಅಂತಹೇಳಲು ಸಾಧ್ಯವಿಲ್ಲ, ಜಾತಿ ಯಾವುದಾದರೇನು ಅವರ ಪ್ರತಿಭೆ ಕೌಶಲ್ಯ ಮುಖ್ಯ, ಒಬ್ಬ ಸೋತು ಹೋಗಿ ಕಾಣುತಿಲ್ಲ ಆಡಿಗಿ ಕೊಂಡಿದ್ದಾನೆ ಅನ್ನಬಾರದು ಅವನು ಕಾಣುತಿಲ್ಲ ಅಂದರೆ ಬಲಿಷ್ಠನಾಗಿ ಬೆಳೆದು ಬರುತ್ತಾನೆ ಅಂತ ಅರ್ಥ ಎಂದು ಹೇಳಿದರು.
ತಾ.ಪಂ.ಇಒ ವಿ.ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಾಪುರ ಕೃಷ್ಣಪ್ಪ, ನಗರಸಭೆ ಸದಸ್ಯೆ ಪದ್ಮಾವತಿ ವೆಂಟಸ್ವಾಮಿ, ಯೂನಿಯನ್ ಮಾಜಿ ಉಪಾಧ್ಯಕ್ಷ ಎಸ್.ವಿ.ಗೋರ್ವಧನ್ ರೆಡ್ಡಿ, ಸಮುದಾಯದ ಮುಖಂಡರಾದ ಭಾವನಹಳ್ಳಿ ಮುರುಳಿ ಲಕ್ಷ್ಮೀನಾರಾಯಣ್ ಮಂಜಪ್ಪ, ಸಂಜೀವಪ್ಪ, ನವೀನ್, ಚಂದ್ರಶೇಖರ್, ಚಂದ್ರಶೇಖರ್ ಬಾಬು, ಮಾದನಹಟ್ಟಿ ರವಿಕುಮಾರ್, ಲಲಿತಮ್ಮ, ಮಾದನಹಟ್ಟಿ ಎಂ.ಆರ್.ಹರೀಶ್, ಗೋಪಾಲಕೃಷ್ಣ ವೆಂಕಟಾ ಚಲಪತಿ ಹೆಡಗಿನಬೆಲೆ ಚನ್ನಕೃಷ್ಣ, ಇರಬನಹಳ್ಳಿ ಆನಂದ್, ಮನೋಹರ್ ಯಾದವ್ ಪ್ರಸನ್ನ ಯಾದವ್, ಸಂಪತ್ ಯಾದವ್, ನಾಗೇಶ್, ಲೋಹಿತ್ ಮಧುಯಾದವ್, ಶಿರಸ್ತೇದಾರ್ ಹರಿಪ್ರಸಾದ್ ಇನ್ನಿತರರು ಹಾಜರಿದ್ದರು.