ಹಲ್ಲಿನ ಸಮಸ್ಯೆಯೇ

ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು ಕೇವಲಗಂಟಲ ಕೆರೆತಕ್ಕೆ ಮಾತ್ರವಲ್ಲ ಹಲ್ಲು ನೋವಿನ ಮೇಲೂ ಕೂಡ ಪರಿಣಾಮ ಬೀರುತ್ತದೆ. ಉಪ್ಪುನೀರು ನೈಸರ್ಗಿಕ ಸೋಂಕು ನಿವಾರಕದಂತೆ ಕಾರ್ಯ ನಿರ್ವಹಿಸುತ್ತದೆ. ಹಲ್ಲುಗಳಲ್ಲಿ ಏನಾದರೂ ಸಿಲುಕಿಕೊಂಡಿದ್ದರೆ ಅಥವಾ ನೋವು ಇದ್ದರೆ ಅಥವಾ ವಸಡುಗಳಲ್ಲಿ ಊತವಿದ್ದರೆ ೧ ಗ್ಲಾಸ್ ನೀರಿನಲ್ಲಿ ಅರ್ಧ ಟೀ ಸ್ಪೂನ್ ಉಪ್ಪನ್ನು ಬೆರೆಸಿ ಬಾಯಿ ಮುಕ್ಕಳಿಸಿ.

ಒಂದು ವೇಳೆ ನೀವು ಯಾವುದಾದರೊಂದು ಡೆಂಟಲ್ ಟ್ರೇಟ್ ಮೆಂಟ್ ಗೆ ಒಳಗಾಗಿದ್ದರೆ, ವೈದ್ಯರು ನೋವು ಹಾಗೂ ಬಾವಿನಿಂದ ಬಚಾವಾಗಲು ಐಸ್ ನಿಂದ ಕಾವು ಕೊಡಲು ಸೂಚಿಸುತ್ತಾರೆ. ಕೂಲಿಂಗ್ ಪ್ಯಾಡ್ ಅಥವಾ ಐಸ್ ಪ್ಯಾಕ್ ಅಥವಾ ಟವೆಲ್ ನಲ್ಲಿ ಐಸ್ ಸುತ್ತಿ ಈ ಕೆಲಸ ಮಾಡಬಹುದು.

ಒಂದು ವೇಳೆ ನಿಮ್ಮವಸಡುಗಳು ತುಂಬಾಸೆನ್ಸಿಟಿವ್ ಆಗಿದ್ದು,ವಸಡುಗಳು ನೋಯುತ್ತಿದ್ದರೆ ಪುದಿನಾ ಎಣ್ಣೆ ಅಥವಾಪೆಪೆರ್ಮೆಂಟ್ ಟೀ ಬ್ಯಾಗ್ ತುಂಬಾ ಪರಿಣಾಮಕಾರಿಯಾಗಿದೆ. ಪೆಪರ್ಮಿಂಟ್ ಎಣ್ಣೆಯ ಕೆಲ ಹನಿಗಳನ್ನು ನೀರಿನಲ್ಲಿ ಹಾಕಿ ಆ ನೀರಿನಿಂದ ಬಾಯಿ ಮುಕ್ಕಳಿಸಿ. ಹಲ್ಲು ನೋವು ನಿವಾರಣೆಯಲ್ಲಿ ಬೆಳ್ಳುಳ್ಳಿ ಕೂಡ ಒಂದು ಉಪಯುಕ್ತ ಪದಾರ್ಥವಾಗಿದೆ.ಬೆಳ್ಳುಳ್ಳಿಯ ಪೇಸ್ಟ್ ತಯಾರಿಸಿ ಅದನ್ನುನೋಯುತ್ತಿರುವ ಹಲ್ಲು ಅಥವಾ ವಸಡಿನ ಮೇಲೆ ಹಚ್ಚಿ. ಬೆಳ್ಳುಳ್ಳಿಯ ಕುಡಿಯನ್ನು ಸಹ ನೀವು ಕಚ್ಚಬಹುದು.

ಹಲ್ಲು ನೋವು ನಿವಾರಣೆಯಲ್ಲಿ ಲವಂಗದ ಎಣ್ಣೆ ಕೂಡ ಮಹತ್ವದ ಪಾತ್ರವಹಿಸುತ್ತದೆ.ಲವಂಗ ಎಣ್ಣೆಯ ಕೆಲ ಹನಿಗಳನ್ನು ಹತ್ತಿಗೆ ಹಾಕಿ ಅದನ್ನು ಹಲ್ಲಿನ ನಡುವೆ ಇಡಿ. ವಸಡುಗಳಲ್ಲಿ ಒಂದು ವೇಳೆ ನೋವು ಇದ್ದರೆ ಲವಂಗದ ಎಣ್ಣೆ ತುಂಬಾ ಪರಿಣಾಮಕಾರಿಯಾಗಿದೆ.