
ಬೆಂಗಳೂರು ಅ.೧೮ ಚಿತ್ತಾಪುರ ಭಾರತದಲ್ಲಿದೆಯೋ ಅಥವಾ ಖರ್ಗೆ ಕುಟುಂಬದ ರಿಪಬ್ಲಿಕ್ ಆಗಿದೆಯೋ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದ್ದಾರೆ.
ಚಿತ್ತಾಪುರದಲ್ಲಿ ನಾಳೆ ನಡೆಯಲಿರುವ ಆರ್ ಎಸ್‌ಎಸ್ ಪಥಸಂಚಲನಕ್ಕೆ ಪುರಸಭೆಯಿಂದ ಅನುಮತಿ ಪತ್ರ ಪಡೆಯಲಾಗಿದೆ.
ಬ್ಯಾನರ್, ಧ್ವಜ ಕಟ್ಟಲು ಪುರಸಭೆಗೆ ಜಾಹೀರಾತು ತೆರಿಗೆ ಕಟ್ಟಿ ರಸೀದಿ ಪಡೆಯಲಾಗಿದೆ ಇಷ್ಟಾದರೂ ರಾತ್ರೋ ರಾತ್ರಿ ಕೇಸರಿ ಬ್ಯಾನರ್, ಧ್ವಜಗಳನ್ನು ತೆರವುಗೊಳಿಸಿದ್ದೀರಲ್ಲ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ತಾವೇನು ಚಿತ್ತಾಪುರದ ನಿಜಾಮ ಅಂದುಕೊಂಡಿದ್ದೀರೋ ಅಥವಾ ರಜಾಕರ್ ಅಂದುಕೊಂಡಿದ್ದೀರೋ? ಎಂದು ಕಿಡಿ ಕಾರಿದ್ದಾರೆ.
ಆರ್ ಎಸ್‌ಎಸ್ ಬಗ್ಗೆ ವಿಷ ಕಾರಿದರೆ ನಕಲಿ ಗಾಂಧಿಗಳನ್ನು ಮೆಚ್ಚಿಸಿ ಏನೋ ಆಗಿಬಿಡಬಹುದು, ಚಿತ್ತಾಪುರ ರಿಪಬ್ಲಿಕ್ ಮಾಡಿಕೊಂಡುಬಿಡಬಹುದು ಎಂಬ ಕನಸು ಕಾಣಬೇಡಿ. ಈ “ತುರ್ತು ಪರಿಸ್ಥಿತಿ” ಆಟ ಜಾಸ್ತಿ ದಿನ ನಡೆಯೋದಿಲ್ಲ. ಎಂದು ಎಚ್ಚರಿಕೆ ನೀಡಿದ್ದಾರೆ.