
ಕಲಬುರಗಿ,ಮಾ.15-ನಗರ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಕಡಗಂಚಿಯ ಕಾರ್ಮೇಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಫಾದರ್ ಮ್ಯಾಕ್ಸಿಮ್ ರವರು ಮಾತನಾಡುತ್ತ, ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ನಿಮ್ಮ ಕೈಯಿಂದ ಅಪರಾಧವಾಗಿ ಆ ಅಪರಾಧಕ್ಕೆ ಶಿಕ್ಷೆಯನ್ನು ಅನುಭವಿಸಲು ಈ
ಕಾರಾಗೃಹದಲ್ಲಿ ದಾಖಲಾಗಿದ್ದೀರಿ. ಆದರೆ ಇದು ಅಂತ್ಯವಲ್ಲ ತಮ್ಮ ತಪ್ಪಿಗೆ ಪ್ರಾಯಚ್ಛಿತವಾಗಿ ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಈ ಸಂಸ್ಥೆಯಲ್ಲಿ ನೀಡುವ ಮನಃ ಪರಿವರ್ತನೆಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾರೆ ಅವುಗಳಲ್ಲಿ ತಾವೂ ಭಾಗವಹಿಸಿ ಮಾನಸಿಕವಾಗಿ,ದೈಹಿಕವಾಗಿ ಸದೃಢರಾಗಿ ಇಲ್ಲಿಂದ ಬಿಡುಗಡೆ ಹೊಂದಿ ನಿಮ್ಮ ಕುಟುಂಬದವರೋಡನೆ ಒಳ್ಳೆಯ ಜೀವನ ನಡೆಸಿ ಎಂದು ಹಾರೈಸಿದೆರು.
ಮಹಿಳಾ ಬಂದಿಗಳಿಗೆ ವಿವಿಧ ಆಟೋಟಗಳನ್ನ ಆಡಿಸಿ ಬಹುಮಾನಗಳನ್ನ ವಿತರಿಸಲಾಯಿತು ಹಾಗೂ ಮಹಿಳಾ ಬಂದಿಗಳಿಗೊಸ್ಕರವಾಗಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಕಾರ್ಮೇಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ ಕಡಗಂಚಿ ರವರು ಮಹಿಳಾ ಬಂದಿ ವಿಭಾಗಕ್ಕೆ ವಾಟರ್ ಕೂಲರ್ ದೇಣಿಗೆಯಾಗಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾರಾಗೃಹದ ಮುಖ್ಯ ಅಧೀಕ್ಷಕ ಕೆ. ಸುರೇಶ ಅವರು ಮಾತನಾಡುತ್ತ, ಮಹಿಳಾ ಬಂದಿಗಳಿಗೊಸ್ಕರವಾಗಿ ಕರಕುಶಲ, ಕೌಶಲ್ಯಾಧಾರಿತ ತರಬೇತಿಯನ್ನು, ಸತ್ಸಂಗ, ಪಾರಾಯಣ ಮತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸಿ ಅವುಗಳ ಮುಖಾಂತರ ಅವರ ಮನಃ ಪರಿವರ್ತನೆ ಹೊಂದಲು ಪ್ರಯತ್ನಿಸಲಾಗುತ್ತಿದೆ. ಮತ್ತು ತಾವುಗಳು ಇಲ್ಲಿ ಇರುವ ತನಕ ನಾವು ನೀಡುವ ಸದರಿ ಕಾರ್ಯಕ್ರಮಗಳನ್ನು ಭಾಗವಹಿಸಿ ಸ್ವಾವಲಂಬಿ ಬದುಕನ್ನ ಕಟ್ಟಿಕೊಳ್ಳಲು ಕರೆ ನೀಡಿದರು.
ಈ ಸಂಧರ್ಬದಲ್ಲಿ ಸಂಸ್ಥೆಯ ಅಧೀಕ್ಷಕರಾದ ರಾಕೇಶ ಕಾಂಬ್ಳೆ, ಸಹಾಯಕ ಅಧೀಕ್ಷಕರಾದ ಸುರೇಶ ಬಿ, ಚನ್ನಪ್ಪ ಯಟಗಾಲ್, ಕಾರ್ಮೇಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ ಕಾರ್ಯದರ್ಶಿ ಫಾದರ್ ವಿಲಿಯಂ ಮಿರಂಡಾ , ಬ್ರದರ್ ಫ್ಲೇಮಿಂಗ್, ಜೀಜಾ, ಅನಿತಾ, ಜೈಲರ್ಗಳಾದ ಸಾಗರ್ ಪಾಟೀಲ್, ಶ್ರೀಮಂತಗೌಡ ಪಾಟೀಲ್ ಉಪಸ್ಥಿತರಿದ್ದರು. ಈ ಸಂಸ್ಥೆಯ ಶಿಕ್ಷಕರಾದ ನಾಗರಾಜ ಮೂಲಗೆ ರವರು
ಸ್ವಾಗತ ಕಾರ್ಯಕ್ರಮ ನಡೆಸಿಕೊಟ್ಟರು ಹಾಗೂ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಸಿಸ್ಟರ್ ಡೈನಾ ಮತ್ತು ಸಿಸ್ಟರ್ ವಸಂತಾ ನಡೆಸಿಕೊಟ್ಟರು ಈ ಸಂಧರ್ಭದಲ್ಲಿ ಸಿಬ್ಬಂದಿ ವರ್ಗದವರು ಹಾಜರಿದ್ದರು.



























