Home ಜಿಲ್ಲೆ ಕಲಬುರಗಿ ಸಿಯುಕೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಸಿಯುಕೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಕಲಬುರಗಿ,ಮಾ.14: ಎಲ್ಲರನ್ನೂ ಒಳಗೊಂಡ ಮತ್ತು ಸಮಾನ ಸಮಾಜವನ್ನು ನಿರ್ಮಿಸಲು ಮಹಿಳಾ ಸಬಲೀಕರಣ ಅತ್ಯಗತ್ಯ ಎಂದು ಬೆಂಗಳೂರಿನ ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತೆ ಡಾ. ಮಮತಾ ಬಿ.ಆರ್. ಹೇಳಿದರು. ಅವರು ಸಿಯುಕೆಯಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು. ಲಿಂಗ ಸಮಾನತೆಗಾಗಿ ನಾವೆಲ್ಲರೂ ಸಾಮೂಹಿಕ ಪ್ರಯತ್ನಗಳನ್ನು ಮಾಡಬೇಕು ಮತ್ತು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಬೇಕು. ದುರ್ಬಲರಿಗೆ ಬೆಂಬಲ ನೀಡುವ ದೂರದೃಷ್ಟಿ ಹೊಂದಿರುವ ಜನರ ಅವಶ್ಯಕತೆಯಿದೆಎಂದು ಅವರು ಹೇಳಿದರು.
ಸಿಯುಕೆ ಕುಲಪತಿಗಳುಪೆÇ್ರ.ಬಟ್ಟು ಸತ್ಯನಾರಾಯಣ ಅವರು ಮಾತನಾಡಿ ಸಮಾಜದ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಮಹಿಳೆಯರು ಗಣನೀಯ ಕೊಡುಗೆ ನೀಡಿದ್ದಾರೆ. ರಾಷ್ಟ್ರ ನಿರ್ಮಾಣ ಮತ್ತು ಕುಟುಂಬಗಳ ಒಳಗೆ ಮಹಿಳೆಯರು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಿದ್ದಾರೆ. ಅವರು ಸಮಾಜದಲ್ಲಿ ನಾಯಕತ್ವ ಮತ್ತು ವೃತ್ತಿಪರ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಸಿಯುಕೆಯ ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್ ಅವರು ಮಾತನಾಡಿ, ಒಟ್ಟು ಜನಸಂಖ್ಯೆಯ ಶೇ. 49 ರಷ್ಟಿರುವ ಮಹಿಳೆಯರು ಭಾರತದ ಸಂಪತ್ತು. ಅವರು ಸಂತಾನೋತ್ಪತ್ತಿ, ಆರೈಕೆ ಆರ್ಥಿಕತೆ ಮತ್ತು ಉತ್ಪಾದಕ ಆರ್ಥಿಕತೆಯಂತಹ ಬಹು ಪಾತ್ರಗಳನ್ನು ನಿರ್ವಹಿಸುತ್ತಾರೆ. ಸಂತಾನೋತ್ಪತ್ತಿ ಪಾತ್ರ ಮಹಿಳೆಯರು ಮಕ್ಕಳಿಗೆ ಜನ್ಮ ನೀಡುವುದರಿಂದ ಮತ್ತು ಎಚ್ಚರಿಕೆಯಿಂದ ಕಾಳಜಿ ವಹಿಸುವುದರಿಂದ ಹೆಚ್ಚು ಶ್ಲಾಘನೀಯ. ಮಹಿಳೆಯು ಮನೆಯ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಮತ್ತು ಎಲ್ಲರಿಗೂ ಆಹಾರವನ್ನು ತಯಾರಿಸಬೇಕು ಮತ್ತು ಆಶ್ರಯ ನೀಡಬೇಕು, ಇದಕ್ಕಾಗಿ ಆಕೆಗೆ ಸಂಬಳ ನೀಡಲಾಗುವುದಿಲ್ಲ ಮತ್ತು ಜಿಡಿಪಿಯಲ್ಲಿ ಪರಿಗಣಿಸುವುದಿಲ್ಲ. ಕೃಷಿ, ಕೈಗಾರಿಕೆ, ಸ್ಟಾರ್ಟ್ ಅಪ್‍ಗಳು, ವ್ಯಾಪಾರ, ಸಾರಿಗೆ ಮತ್ತು ವಾಣಿಜ್ಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‍ನಂತಹ ಅನೇಕ ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದು, ರಾಷ್ಟ್ರ ನಿರ್ಮಾಣ ಚಟುವಟಿಕೆಗಳಿಗೆ ಗಣನೀಯ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕಿ ಡಾ. ಶ್ಯಾಮಲಾ ಆರ್ ಸ್ವಾಗತಿಸಿದರು. ಡಾ. ಶೈಲಜಾ ಎಸ್. ಕೊನೆಕ್ ವಂದಿಸಿದರು. ಡಾ. ಪವಿತ್ರಾ ಆಲೂರ್, ಸಹ-ಸಂಯೋಜಕರಾದ ಡಾ. ರೂಪಾ ರಾಣಿ ಸೋನೋವಾಲ್, ವಿವಿಧ ವಿಭಾಗಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.