
ಬೆಂಗಳೂರು,ಮಾ.೨೩- ಒಳಮೀಸಲಾತಿ ರೋಸ್ಟರ್ ಹಂಚಿಕೆಯಲ್ಲಿ ಭೋವಿ,ಲಂಬಾಣಿ, ಕೊರಚ, ಕೊರಮ, ಅಲೆಮಾರಿ ಮತ್ತು ೧೦೧ ಅತಿಸೂಕ್ಷ್ಮ ಜನಾಂಗಕ್ಕೆ ಬಾರಿ ಅನ್ಯಾಯವಾಗಲಿದೆ ಎಂದು ಓಡ್ ಕಮ್ಯೂನಿಟಿ ಕೌನ್ಸಿಲ್ ಆಪ್ ಇಂಡಿಯಾ ಇಂಟರ್ ನ್ಯಾಷನಲ್ ನ ಕಾರ್ಯಾಧ್ಯಕ್ಷರಾದ ರವಿಪೂಜಾರ್ ಅವರು ಅಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರುನಗರ ಮತ್ತು ಗ್ರಾಮಾಂತರ ಬೆಂಗಳೂರು ದಕ್ಷಿಣ ಜಿಲ್ಲೆಯ ಭೋವಿ ಜನಾಂಗದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ಒಳ ಮೀಸಲಾತಿ ರೋಸ್ಟರ್ ಹಂಚಿಕೆಯಲ್ಲಿ ವಿವಿಧ ಇಲಾಖೆ, ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿಯಲ್ಲಿ ಪ್ರ ವರ್ಗ ಎ ಜನಾಂಗದವರು ನೇಮಕವಾಗಿದ್ದು. ಪರಿಶಿಷ್ಟ ಜಾತಿಯ ಪ್ರವರ್ಗ ಬಿ, ಮತ್ತು ಪ್ರವರ್ಗ ಸಿ ಜನಾಂಗಕ್ಕೆ ಬಾರಿ ಅನ್ಯಾಯವಾಗಿದ್ದು. ಇದರ ವಿರುದ್ದ ಮಾರ್ಚ್ ೨೪ ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು. ಭೋವಿ ,ಬಂಜಾರ,ಕೊರಚ,ಕೊರಮ, ಅತಿಸೂಕ್ಷ್ಮ ಅಲೆಮಾರಿ ಜನಾಂಗದವರು ಭಾಗವಹಿಸಿ ಹಳೇ ಮೀಸಲಾತಿ ಮಾರ್ಗದಲ್ಲಿ ನೇಮಕಾತಿ ಮಾಡಬೇಕು.ರೋಸ್ಟರ್ ಪದ್ದತಿ ರದ್ದು ಮಾಡಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಒ ಸಿ ಸಿ ಐ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಹಿಟಾಚ್ಚಿ ಮಂಜುನಾಥ.ಆರ್ ರವರು ಮಾತನಾಡಿ ನಾಗಮೋಹನ್ ದಾಸ್ ರವರ ವರದಿ ತಳ ಸಮುದಾಯಗಳಿಗೆ ಮರಣ ಶಾಸನವಾಗಿದೆ.
೫/೫/೫ ಮತ್ತು ಅತಿಸೂಕ್ಷ್ಮ ಜಾತಿಯವರಿಗೆ, ಅಲೆಮಾರಿ ಜನಾಂಗಕ್ಕೂ ಸಮನಾಗಿ ಹಂಚಿಕೆಯಾಗಬೇಕು.ಇಲ್ಲದಿದ್ದರೆ ಪರಿಶಿಷ್ಟ ಜಾತಿಪ್ರವರ್ಗ ಸಿ ಗೆ ಮೋಸ ವಂಚನೆಯಾಗಲಿದ್ದು.ಪ್ರವರ್ಗ ಸಿ ಗುಂಪಿನ ಜನಾಂಗಕ್ಕೆ ವಿಷ ಹಾಕಿದಂತಾಗುತ್ತದೆ.ನಾವೆಲ್ಲರೂ ಒಗ್ಗೂಡಿ ನಮಗೆ ಸಿಗಬೇಕಾದ ಸೌಲಭ್ಯ ಪಡೆಯಲೇ ಬೇಕಾಗಿದೆ ಎಂದು ಕರೆ ನೀಡಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಯಶಂಕರ್.ಭೋವಿ ಅಭಿವೃಧ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ,ಚಿಕ್ಕಬಳ್ಳಾಪುರ ಜಿ,ಪಂ ಮಾಜಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ ಮಾತನಾಡಿದರು.






























