
ಜೇವರ್ಗಿ : ಡಾ.ಬಿ.ಆರ್, ಅಂಬೇಡ್ಕರ್, ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರ ವಿರೂಪಗೊಳಿಸಿ ಅಪಮಾನ ಮಾಡಿದ ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿ ಶನಿವಾರ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಕೋಲಿ ಸಮಾಜದ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಅಂಬಿಗರ ಚೌಡಯ್ಯ ಸಮಯದಾಯ ಭವನದಿಂದ ನೂರಾರು ಜನ ಘೋಷಣೆ ಕೂಗುತ್ತಾ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಟೈರ್ ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಲಾಯಿತು.
‘ನಿಜಶರಣ ಅಂಬಿಗರ ಚೌಡಯ್ಯನವರ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ದೇಶದ ಮಹಾನ್ ನಾಯಕರಿಬ್ಬರ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಕೋಲಿ ಸಮಾಜದ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು
‘ಸಮಾಜದಲ್ಲಿ ಅಶಾಂತಿ, ಗಲಭೆ ಉಂಟುಮಾಡಲು ಪ್ರಯತ್ನಿಸುವ ಸಮಾಜಘಾತುಕ ಶಕ್ತಿಗಳನ್ನು ೨೪ ಗಂಟೆಗಳಲ್ಲಿ ಬಂಧಿಸಿ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕಿಡಿಗೇಡಿಗಳ ಬಂಧಿಸುವಲ್ಲಿ ವಿಳಂಬ ???? ಅನುಸರಿಸಿದರೆ ತಾಲ್ಲೂಕಿನಾದ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು’ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ನಂತರ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ
ಕೋಲಿ ಸಮಾಜದ ಮುಖಂಡರಾದ ಭೀಮರಾಯ ಜನಿವಾರ, ಮಲ್ಲೇಶಿಗೌಡ ರೇವನೂರು, ಭಾಗೇಶ ಹೋತಿನಮಡು, ನಾಗರಾಜ ವಿ.ಟಿ, ಗಿರೀಶ್ ತುಂಬಗಿ, ದೇವೇಂದ್ರ ಚಿಗರಳ್ಳಿ, ಸಂತೋಷ್ ತಳವಾರ, ಗುರು ತಳವಾರ, ಮರೆಪ್ಪ ಕೋಳಕೂರ, ಭೀಮರಾಯ ತಳವಾರ, ಬಸವರಾಜ್ ಜಂಬೇರಾಳ, ಹಣಮಂತರಾಯ ಪಾಟೀಲ, ರಾಚಣ್ಣ ತಳವಾರ, ಸಿದ್ದಣ್ಣಗೌಡ ಮಾವನೂರ, ಕಾಂತಪ್ಪ ಚನ್ನೂರು, ರಾಜು ತಳವಾರ ಹಾಗೂ ಸಮಾಜದ ಯುವ ಮುಖಂಡರು ಭಾಗವಹಿಸಿದ್ದರು.