Home ಜಿಲ್ಲೆ ಕಲಬುರಗಿ ಅಫಜಲಪುರ ಬಳಿ ಅಮಾನವೀಯ ಘಟನೆಪತ್ನಿಕೊಂದು ಮೈಮೇಲೆ ಕಾರು ಹತ್ತಿಸಿಕೊಂಡು ಹೋದ ಪತಿ

ಅಫಜಲಪುರ ಬಳಿ ಅಮಾನವೀಯ ಘಟನೆಪತ್ನಿಕೊಂದು ಮೈಮೇಲೆ ಕಾರು ಹತ್ತಿಸಿಕೊಂಡು ಹೋದ ಪತಿ

ಕಲಬುರಗಿ,ಮಾ.26-ಹರಿತವಾದ ಆಯುಧದಿಂದ ಪತ್ನಿಯ ಕತ್ತು ಕತ್ತರಿಸಿ ಆಕೆಯ ಮೈಮೇಲೆ ಕಾರು ಹತ್ತಿಸಿಕೊಂಡು ಹೋಗಿರುವ ಅಮಾನವೀಯ ಘಟನೆ ಅಫಜಲಪುರ ತಾಲ್ಲೂಕಿನ ಬಳೂರ್ಗಿ ಹತ್ತಿರ ನಡೆದಿದೆ.
ಮಹಾರಾಷ್ಟ್ರದ ಬಾರಾಮತಿಯ ಸಹೆಲಿ (26) ಎಂಬ ಮಹಿಳೆಯನ್ನು ಆಕೆಯ ಪತಿ ಅಕ್ಷಯ ಎಂಬಾತನೆ ಅಮಾನುಷವಾಗಿ ಕೊಲೆ ಮಾಡಿ ಮೈಮೇಲೆ ಮೇಲೆ ಕಾರು ಹತ್ತಿಸಿಕೊಂಡು ಹೋಗಿದ್ದಾನೆ ಎಂದು ತಿಳಿದುಬಂದಿದೆ.
ಸಹೆಲಿ ಪತಿ ಅಕ್ಷಯ ಜೊತೆಗೆ ಮಹಾರಾಷ್ಟ್ರ ಬಾರಾಮತಿಯಿಂದ ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರಕ್ಕೆ ಕಾರಿನಲ್ಲಿ ಹೊರಟಿದ್ದರು. ಮಾರ್ಗ ಮಧ್ಯೆದಲ್ಲಿ ಬರುವ ಅಫಜಲಪುರ ತಾಲ್ಲೂಕಿನ ಬಳೂರ್ಗಿ ಗ್ರಾಮದ ಹೊರವಲಯದ ಮುಖ್ಯ ರಸ್ತೆಯ ಬಳಿ ಅಕ್ಷಯ ಕಾರನ್ನು ನಿಲ್ಲಿಸಿ ಹರಿತವಾದ ಆಯುಧದಿಂದ ಪತ್ನಿಯ ಕತ್ತು ಕತ್ತರಿಸಿ ಮೈಮೇಲೆ ಕಾರು ಹತ್ತಿಸಿಕೊಂಡು ಹೋಗಿದ್ದಾನೆ ಎಂದು ತಿಳಿದುಬಂದಿದೆ. ನಡು ರಸ್ತೆಯಲ್ಲಿಯೇ ಮಹಿಳೆಯ ಕೊಲೆ ನಡೆಯುತ್ತಿದ್ದರೂ ರಸ್ತೆಯ ಮೇಲೆ ಓಡಾಡುತ್ತಿದ್ದ ವಾಹನ ಸವಾರರು ನೋಡುತ್ತ ನಿಂತು ಅಮಾನವೀಯತೆ ತೋರಿದರು ಎನ್ನಲಾಗಿದೆ. ಈ ಭೀಬತ್ಸ ಮತ್ತು ಭಯಾನಕ ದೃಶ್ಯವನ್ನು ಕೆಲವರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ಸುದ್ದಿ ತಿಳಿದು ಎಸ್‍ಪಿ ಅಡ್ಡೂರು ಶ್ರೀನಿವಾಸಲು, ಅಫಜಲಪುರ ಸಿಪಿಐ, ಪಿಎಸ್‍ಐ ಮತ್ತು ಸಿಬ್ಬಂದಿ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.