ಆರ್ಥಿಕ ಮುಗ್ಗಟ್ಟು ಇಂದಿರಾ ಕ್ಯಾಂಟೀನ್ ಬಂದ್

ಬೆಂಗಳೂರು,ಫೆ..೨೦- ಮಹೇಶ್. ಸಿ. ಸಿಎಂ ಕನಸಿನ ಕೂಸಿಗೆ ಅನುದಾನ ಇಲ್ಲದೆ ಇಂದಿರಾ ಕ್ಯಾಂಟೀನ್ ಕಿಚನ್ ಬಂದ್.


ಬಡವರಿಗೆ ದೀನದಲಿತರಿಗೆ ಕೂಲಿ ಕಾರ್ಮಿಕರಿಗೆ ಕಡಿಮೆ ವೆಚ್ಚದಲ್ಲಿ ಬೆಳಿಗ್ಗೆ ತಿಂಡಿ.ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಊಟ ಸಿಗಲಿ ಅಂತ ಸಿಎಂ ಸಿದ್ದರಾಮಯ್ಯ ನವರು ನಗರದ ಪ್ರತಿಯೊಂದು ವಾರ್ಡ್ ನಲ್ಲಿ ಇಂದಿರಾ ಕ್ಯಾಂಟೀನ್ ಓಪನ್ ಆರಂಭಿಸಿದರು..ಅದರೆ ಕ್ಯಾಂಟೀನ್ ಗಳಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಹಾಗೂ ಅಹಾರ ಪೂರೈಕೆ ಇಲ್ಲದೆ.ನಗರದ ಬಹುತೇಕ ಕ್ಯಾಂಟೀನ್ ಗಳು ಬಂದ್ ಆಗಿವೆ ಮೊದಲ ಬಾರಿಗೆ ಸಿದ್ದರಾಮಯ್ಯ ಸಿಎಂ ಆದಾಗ ನಗರಪಾಲಿಕೆ ವ್ಯಾಪ್ತಿಯಲ್ಲಿ ೧೭೫ ಸ್ಥಿರ ಹಾಗೂ ೨೭ ಮೊಬೈಲ್ ಕ್ಯಾಂಟೀನ್ ಗಳನ್ನು ಓಪನ್ ಮಾಡಿ. ಕ್ಯಾಂಟಿನ್ ಗಳಿಗೆ ಅಹಾರ ಪೂರೈಸಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ಕಿಚನ್ ಒಪನ್ ಮಾಡಿದರು..ಅದರೆ ಈಗ ಅನುದಾನ ಇಲ್ಲದೆ ೧೬ ಇಂದಿರಾ ಕ್ಯಾಂಟೀನ್ ಕಿಚನ್ ಗಳು ಬಂದ್ ಅಗಿವೆ.


೧೭೫ ಸ್ಥಿರ ಕ್ಯಾಂಟೀನ್ ಗಳಲ್ಲಿ ೧೬೯ ಕ್ಯಾಂಟೀನ್ ಗಳು ಓಪನ್ ಅಗಿದರೆ ೬ ಕ್ಯಾಂಟೀನ್ ಗಳು ಬಂದ್ ಅಗಿವೇ.ಉಳಿದಂತೆ ೨೪ ಮೊಬೈಲ್ ಕ್ಯಾಂಟೀನ್ ಗಳಲ್ಲಿ ಕೇವಲ ೧ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು.ಉಳಿದ ೨೩ ಮೊಬೈಲ್ ಕ್ಯಾಂಟೀನ್ ಗಳು ಬಂದ್ ಅಗಿವೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ರೀತಿಯಲ್ಲಿ ಕ್ಯಾಂಟೀನ್ ಗಳು ಪತನದ ದಾರಿ ಹಿಡಿದಿದೆ..


ಹೊಸ ೫೦ ಕ್ಯಾಂಟೀನ್ ಓಪನ್ ಮಾಡೋದಕ್ಕೆ ಸಿಎಂ ಕಳೆದ ವರ್ಷ ಜಿಬಿಎಗೆ ಸೂಚನೆ ಕೊಟ್ಟಿದರು.ಅದರೆ ಇದುವರೆಗೆ ಓಪನ್ ಅಗಿಲ್ಲ..ಎರಡು ಮೂರು ಬಾರಿ ಟೆಂಡರ್ ಕರೆದರು ಯಾರು ಬರುತ್ತಿಲ್ಲ .ಇನ್ನೂ ಕ್ಯಾಂಟೀನ್ ಊಟದ ಗುಣಮಟ್ಟ .ನಿರ್ವಹಣೆ ಅಂತು ಹೇಳೋದೆ ಬೇಡ..ಕಳೆದ ತಿಂಗಳು ಪಶ್ಚಿಮ ವಲಯ ನಗರಪಾಲಿಕೆ ಅಯುಕ್ತರೆ ಊಟ.

ತಿಂಡಿ ಸರಿ ಇಲ್ಲ ಎಂದು ಖುದ್ದಾಗಿ ಅವರೇ ಹೇಳಿದ್ದಾರೆ..ಇದನ್ನೆಲ್ಲ ಮನಗಂಡ ಜಿಬಿಎ ಅಯುಕ್ತರು ೫ ನಗರಪಾಲಿಕೆ ಅಯುಕ್ತರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಕ್ಯಾಂಟೀನ್ ಕಿಚನ್ ಗಳನ್ನು ಮತ್ತೆ ರೀ ಒಪನ್ ಮಾಡಿ ಅಹಾರದ ಗುಣಮಟ್ಟ.ನಿರ್ವಹಣೆ ಸರಿಯಾದ ರೀತಿಯಲ್ಲಿ ಮಾಡುವಂತೆ ಸೂಚನೆ ನೀಡಿ. ಒಂದು ವೇಳೆ ಕ್ಯಾಂಟೀನ್ ನಿರ್ವಹಣೆಗೆ ಅದಾಯ ಕಡಿಮೆ ಅದರೆ ಕೆ.ಎಂ.ಎಫ್ ಅಥವಾ ಬಮೂಲ್ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಲು ಚಿಂತನೆ ನಡೆಸಿದ್ದರೆ..ಈ ಬಾರಿ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟಿನ್ ಗೆ ಎಷ್ಟು ಅನುದಾನ ನೀಡುತ್ತೆ ಅನ್ನೋದರ ಮೇಲೆ ಇಂದಿರಾ ಕ್ಯಾಂಟೀನ್ ಭವಿಷ್ಯ ನಿಂತಿದೆ.