ಭಾರತ-ಅಮೆರಿಕ ವ್ಯಾಪಾರ ಒಪ್ಪಂದ

ಮೋದಿ ಅತ್ಯಂತ ಸುಂದರ ವ್ಯಕ್ತಿ

ಸಿಯೋಲ್,ಅ.೨೯- ರಷ್ಯಾದಿಂದ ಭಾರತ ತೈಲ ಖರೀದಿ ಮಾಡುತ್ತಿದೆ ಎನ್ನುವ ಕಾರಣ ನೀಡಿ ಭಾರತದ ಉತ್ಪನ್ನಗಳ ಮೇಲೆ ಶೇಕಾ ೫೦ ರಷ್ಟು ಸುಂಕ ವಿಧಿಸಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅಪಾರ ಗೌರವಿದೆ ಹಾಡಿ ಹೊಗಳಿದ್ದು ಶೀಘ್ರದಲ್ಲಿಯೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.


ಭಾರತದ ಉತ್ಪನ್ನಗಳ ಮೇಲೆ ಶೇಕಡಾ ೨೫ ರಷ್ಟು ಜೊತೆಗೆ ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದಕ್ಕೆ ಹೆಚ್ಚುವರಿ ಶೇಕಡ ೨೫ ರಷ್ಟು ಸೇರಿದಂತೆ ಶೇಕಡ ೫೦ ರಷ್ಟು ತೆರಿಗೆ ವಿಧಿಸಿರುವ ಅಮೆರಿಕಾ ಅಧ್ಯಕ್ಷರು, ಶೀಘ್ರದಲ್ಲಿ ಅಮೆರಿಕ- ಭಾರತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿವೆ ಎನ್ನುವ ಸುಳಿವು ನೀಡಿದ್ದಾರೆ.


ದಕ್ಷಿಣ ಕೊರಿಯಾದ ಜಿಯೊಂಗ್ಜುನಲ್ಲಿ ನಡೆದ ಎಪಿಇಸಿ ಸಿಇಓಗಳ ಭೋಜನಕೂಟದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ “ಅತ್ಯಂತ ಸುಂದರ ವ್ಯಕ್ತಿ” ಭಾರತ ಮತ್ತು ಅಮೆರಿಕ ಶೀಘ್ರದಲ್ಲೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿವೆ ಎಂದು ಹೇಳಿದ್ದಾರೆ.


ವಿಶ್ವದ ಎರಡು ದೊಡ್ಡ ಆರ್ಥಿಕತೆ ದೇಶಗಳ ನಡುವಿನ ವ್ಯಾಪಾರ ಒಪ್ಪಂದ ಕೇವಲ ಸಮಯದ ಪ್ರಶ್ನೆಯಾಗಿದೆ. ಒಪ್ಪಂದದ ಕುರಿತಾದ ಮಾತುಕತೆಗಳು ತಿಂಗಳುಗಳಿಂದ ಎಳೆದಾಡುತ್ತಿವೆ, ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮತ್ತು ಭಾರತ ರಷ್ಯಾದಿಂದ ತೈಲ ಖರೀದಿಸುವುದರ ಕುರಿತ ಸುಂಕಗಳ ಕುರಿತಾದ ಗದ್ದಲಗಳು ಇದಕ್ಕೆ ಅಡ್ಡಿಯಾಗಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


ಭಾರತದ ಪ್ರಧಾನಿಯಷ್ಟೇ ಪಾಕಿಸ್ತಾನದ ಪ್ರಧಾನಿ ಒಬ್ಬ ಉತ್ತಮ ವ್ಯಕ್ತಿ. ಅವರಲ್ಲಿ ಫೀಲ್ಡ್ ಮಾರ್ಷಲ್ ಇದ್ದಾರೆ. ಅವರು ಫೀಲ್ಡ್ ಮಾರ್ಷಲ್ ಏಕೆ ಎಂದು ನಿಮಗೆ ತಿಳಿದಿದೆಯೇ.ಅವರು ಒಬ್ಬ ಉತ್ತಮ ಹೋರಾಟಗಾರ. ಮತ್ತು ಆದ್ದರಿಂದ ನನಗೆ ಅವರೆಲ್ಲರ ಬಗ್ಗೆ ತಿಳಿದಿದೆ ಎಂದು ಹೇಳಿದ್ದಾರೆ.
ಯುದ್ದ ನಿಲ್ಲಿಸಿದ್ದು ನಾನೇ: ಪುನರುಚ್ಚಾರ


ಭಾರತ-ಪಾಕಿಸ್ತಾನ ನಡುವೆ ನಡೆದೆ ಕದನ ವಿರಾಮಕ್ಕೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದೇನೆ ಎನ್ನುವ ಹೇಳಿಕೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದ ಅವರು ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿವೆ ಎಂದು ತಿಳಿಸಿದ್ದಾರೆ.


ಭಾರತ- ಪಾಕಿಸ್ತಾನ ಎರಡು ಪರಮಾಣು ರಾಷ್ಟ್ರಗಳು ಎರಡೂ ದೇಶಗಳು ಹೋರಾಟ ಮಾಡಲು ಮುಂದಾಗಿದ್ದವು,ಅದನ್ನು ತಡೆಯುವ ಮೂಲಕ ಮುಂದಾಗುವ ಅನಾಹುತ ತಪ್ಪಿಸಲಾಗಿದೆ ಎಂದು ಹೇಳಿದ್ದಾರೆ.


ಉಭಯ ದೇಶಗಳು ಸಂಘರ್ಷದಲ್ಲಿರುವಾಗ ಅಮೆರಿಕ ಯಾವುದೇ ವ್ಯಾಪಾರ ಒಪ್ಪಂದಗಳೊಂದಿಗೆ ಮುಂದುವರಿಯುವುದಿಲ್ಲ ಎಂದು ಅವರು ಇಬ್ಬರೂ ನಾಯಕರಿಗೆ ಹೇಳಲಾಗಿತ್ತು ಎಂದು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ಮಾಡಿ ನೀವು ಪಾಕಿಸ್ತಾನದೊಂದಿಗೆ ಹೋರಾಡುತ್ತಿರುವಾಗ ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಅದೇ ರೀತಿ ಪಾಕಿಸ್ತಾನಕ್ಕೆ ಕರೆ ಮಾಡಿ ಅದೇ ವಿಷಯವನ್ನು ಹೇಳಿದ್ದ ಎಂದು ತಿಳಿಸಿದ್ದಾರೆ.


ಈ ವರ್ಷ ಮೇ ತಿಂಗಳಲ್ಲಿ ನಡೆದ ಸಂಘರ್ಷದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುವುದಾಗಿ ಅಮೇರಿಕಾ ಅಧ್ಯಕ್ಷ ಟ್ರಂಪ್ ಈ ಹಿಂದೆ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು, ಆದರೆ ಇದನ್ನು ಭಾರತ ಹಲವು ಭಾರಿ ತಿರಸ್ಕರಿಸಿದೆ.

  • ಭಾರತದ ಉತ್ಪನ್ನಗಳ ಮೇಲೆ ಅಮೆರಿಕಾದಿಂದ ಸುಂಕಾಸ್ತ್ರ
  • ಶೀಘ್ರವೇ ಭಾರತದೊಂದಿಗೆ ವ್ಯಾಪಾರ ಒಪ್ಪಂದ
  • ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು
  • ಭಾರತ- ಅಮೆರಿಕಾ ನಡುವೆ ವ್ಯಾಪಾರ ಒಪ್ಪಂದಿಂದ ಸಮಸ್ಯೆ ಬಗೆ ಹರಿಸಲು ಒತ್ತು
  • ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅತಿಯಾದ ಪ್ರೀತಿ, ಕಾಳಜಿ