
ಬೀದರ್: ಮಕ್ಕಳಲ್ಲಿ ಮಾನವೀಯ, ನೈತಿಕ ಮೌಲ್ಯಗಳನ್ನು ಬೆಳೆಸಬೇಕು ಎಂದು ಗುರು ನಾನಕ ಪಬ್ಲಿಕ್ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಪ್ರೇಸಿಡೆನ್ಸಿ ಗ್ರಲ್ಸ್ ಹೈಸ್ಕೂಲ್ ಹೈದ್ರಾಬಾದ್‌ನ ಪ್ರಾಂಶುಪಾಲೆ ಇಲ್ಲಿ ಸಲಹೆ ನೀಡಿದರು. ಅವರು ಮಕ್ಕಳ ಗ್ರಾಜುಯೇಷನ್ ಡೇ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಗ್ರಾಜುಯೇಷನ್ ಮುಗಿಸಿದ ವಿದ್ಯಾರ್ಥಿಗಳನ್ನು ನೋಡಿ ನನಗೆ ಬಹಳ ಖುಷಿ ತಂದಿದೆ. ನಾನು ಕೂಡಾ ಇದೇ ಶಾಲೆಯ ವಿದ್ಯಾರ್ಥಿ ಆದರೆ ನನ್ನ ಹೆಳೆ ನೆನಪುಗಳು ಮತ್ತೆ ಮರಳಿ ಬರುತ್ತಿವೆ ಎಂದು ವಿವರಿಸಿದರು.
ಗುರು ನಾನಕ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ನಾನು ನೋಡಿದ ಹಾಗೆ ದೇಶ-ವಿದೇಶದಲ್ಲಿ ಹೆಸರು ಮಾಡುತ್ತಿದ್ದಾರೆ. ಸತತ ೫೦ ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸುವರ್ಣಮಹೋತ್ಸವಕ್ಕೆ ನಾನು ತುಂಬ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದÀರು.
ಬೀದರಿನ ತೋಟಗಾರಿಕೆ ಇಲಾಖೆಯ ಅಧಿಕಾರಿ ಶ್ರೀಮತಿ ಸೇವಂತಿ ಆರ್ಯಾ ಕೂಡಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತ ಇಲ್ಲಿ ನನ್ನ ಮಗಳು ಗ್ರಾಜುಯೇಷನ್ ಡೇ ಪೂರ್ಣಗೊಳಿಸಿದ್ದಾಳೆ. ಇಲ್ಲಿನ ವಾತಾವರಣ, ಮಕ್ಕಳಲ್ಲಿ ಒಳ್ಳೆಯ ಅಭ್ಯಾಸಗಳು ಮತ್ತು ಒಳ್ಳೆಯ ಶಿಕ್ಷಕರಿದ್ದಾರೆ ಎಂದು ಬಣ್ಣಿಸಿದರು.
ಸಂಸ್ಥೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್ ಅವರು ಮಾತನಾಡಿ ನಿಮ್ಮ ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯಿರಿ. ಅವರಿಗೆ ಪ್ರೀತಿ, ಕಾಳಜಿ ಮತ್ತು ಗಮನ ಕೊಡಿ ಏಕೆಂದರೆ ಮಕ್ಕಳು ಉತ್ತಮ ವೀಕ್ಷಕರು. ಅವರು ತಮ್ಮ ಹೆತ್ತವರನ್ನು ಅನುಕರಿಸುತ್ತಾರೆ. ಅವರನ್ನು ಒಳ್ಳೆಯ ಮನುಷ್ಯರನ್ನಾಗಿ ಮಾಡಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಹವ್ಯಾಸ ತರಗತಿಗಳಿಗೆ ಸೇರಿಸಿ, ಅವರ ಜ್ಞಾನವನ್ನು ಹೆಚ್ಚಿಸಿ ಮತ್ತು ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಿ. ಮೊಬೈಲ್ ಮಕ್ಕಳ ಕಲಿಕೆ ಮೇಲೆ, ಸ್ವಭಾವದ ಮೇಲೆ ದುಷ್ಪÀರಿಣಾಮ ಬೀರುತ್ತಿದೆ ಎಂದು ಎಚ್ಚರಿಸಿದರು. ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಹಿರಿದಾಗಿದೆ. ಮಕ್ಕಳಿಗೆ ಮಾದರಿಯಾಗುವ ರೀತಿಯಲ್ಲಿ ಪಾಲಕರು ನಡೆದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ಪದವಿ ದಿನ ಸಮಾರಂಭದಲ್ಲಿ ಪಾಲಕರು, ಮಕ್ಕಳು ಪಾಲ್ಗೊಂಡು ಸಂಭ್ರಮ ಹೆಚ್ಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ಚಟುವಟಿಕೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಮೆಡಲ್ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಸರದಾರ ಪವೀತ್ ಸಿಂಗ್, ಶೈಕ್ಷಣಿಕ ಡೀನ್‌ರಾದ ಶ್ರೀಮತಿ ಜಸ್ಮಿನೀತ್ ಕೌರ್, ಸರ್ದಾರ ರಂಜಿತ್ ಸಿಂಗ್ ಆರೋರಾ, ಮುಖ್ಯ ಗುರುಗಳಾದ ಆರೀಫ್ ಹಾದಿ ಉಪ ಪ್ರಾಂಶುಪಾಲರಾದ ಅಮಜದ ಅಲಿ ಮತ್ತು ಸಿಬ್ಬಂದ ವರ್ಗದವರು ಉಪಸ್ಥಿತರಿದ್ದರು.


























