Home ಜಿಲ್ಲೆ ಅಕ್ರಮ ಗಣಿಗಾರಿಕೆ, ಮದ್ಯ ಮಾರಾಟ ಹಾಗೂ ಜೂಜಾಟಕ್ಕೆ ಕಡಿವಾಣ ಹಾಕಬೇಕು: ತೇಜರಾಜ ರಾಠೋಡ ಆಗ್ರಹ

ಅಕ್ರಮ ಗಣಿಗಾರಿಕೆ, ಮದ್ಯ ಮಾರಾಟ ಹಾಗೂ ಜೂಜಾಟಕ್ಕೆ ಕಡಿವಾಣ ಹಾಕಬೇಕು: ತೇಜರಾಜ ರಾಠೋಡ ಆಗ್ರಹ

ಯಾದಗಿರಿ:ಮಾ.೧೫: ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆ, ಅಕ್ರಮ ಮದ್ಯ ಮಾರಾಟ ಮತ್ತು ಜೂಜಾಟ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಬAಧಿತ ಇಲಾಖೆ ಅಧಿಕಾರಿಗಳು ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ತೇಜರಾಜ ರಾಠೋಡ ಆಗ್ರಹಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ಹಾಗೂ ಭೀಮಾ ನದಿ ವ್ಯಾಪ್ತಿಯ ಪ್ರದೇಶಗಳಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಟ್ರಾಕ್ಟರ್ ಹಾಗೂ ಟಿಪ್ಪರ್ ವಾಹನಗಳ ಮೂಲಕ ಮರಳನ್ನು ಸಾಗಣೆ ಮಾಡಿ ರಾತ್ರಿ ವೇಳೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದರಿಂದ ಸರ್ಕಾರಕ್ಕೆ ತೆರಿಗೆ ನಷ್ಟವಾಗುತ್ತಿರುವುದರ ಜೊತೆಗೆ ನದಿಗಳಲ್ಲಿ ಆಳವಾಗಿ ತೋಡುವುದರಿಂದ ಅಂತರ್ಜಲ ಮಟ್ಟ ಕುಸಿಯುವ ಆತಂಕವೂ ಎದುರಾಗಿದೆ ಎಂದು ಹೇಳಿದರು.

ಯಾದಗಿರಿ ತಾಲೂಕಿನ ವರ್ಕನಳ್ಳಿ ಗ್ರಾಮದ ಸೀಮೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಬ್ಲಾಸ್ಟಿಂಗ್‌ನಿAದ ಸುತ್ತಮುತ್ತಲಿನ ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಬೆಳೆಗಳಿಗೆ ಹಾನಿಯಾಗುತ್ತಿದೆ ಎಂದು ಅವರು ದೂರಿದರು. ಜೊತೆಗೆ ಓವರ್‌ಲೋಡ್ ಹೊತ್ತ ಟಿಪ್ಪರ್ ವಾಹನಗಳ ಸಂಚಾರದಿAದ ರಸ್ತೆಗಳು ಹಾನಿಗೊಂಡಿದ್ದು ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎಂದು ಹೇಳಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಮಟ್ಕಾ, ಇಸಿಟ್ ಸೇರಿದಂತೆ ಜೂಜಾಟ ಚಟುವಟಿಕೆಗಳೂ ಹೆಚ್ಚಾಗುತ್ತಿದ್ದು ಯುವಕರು ಹಾಗೂ ಬಡವರು ದುಷ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಗಣಿಗಾರಿಕೆ ಇಲಾಖೆ, ಆರ್‌ಟಿಒ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಸಂಯುಕ್ತವಾಗಿ ಕ್ರಮ ಕೈಗೊಂಡು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ತೇಜರಾಜ ರಾಠೋಡ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶಹಾಪೂರ ತಾಲೂಕು ಅಧ್ಯಕ್ಷ ಸೋಪಣ್ಣ ಹಳಿಸಗರ, ಜಿಲ್ಲಾ ಕಾರ್ಯಾಧ್ಯಕ್ಷ ರವಿ ರಿಮಡ್ಡಿ, ಸುರಪುರ ತಾಲೂಕು ಅಧ್ಯಕ್ಷ ಗೋಪಾಲನಾಯಕ, ಸತ್ಯಂಪೇಟ ತಾಲೂಕು ಅಧ್ಯಕ್ಷ ದೇವುನಾಯಕ, ಸುರಪುರ ಸಹ ಕಾರ್ಯದರ್ಶಿ ಶಿವಮೂರ್ತಿ ದಿವಳಗುಡ್ಡ, ಜಿಲ್ಲಾ ಕಾರ್ಯದರ್ಶಿ ಹುಲಗಪ್ಪ, ಶಹಾಪೂರ ತಾಲೂಕು ಮಹಿಳಾ ಅಧ್ಯಕ್ಷೆ ರೇಣುಕಾ ಹೆಚ್. ತಳವಾರ, ತಾಲೂಕು ಕಾರ್ಯದರ್ಶಿ ಜ್ಯೋತಿ ಸುಗಂಧಿ, ಶಹಾಪೂರ ತಾಲೂಕು ಉಪಾಧ್ಯಕ್ಷೆ ಬಸಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಣಮಂತ ಪೂಜಾರಿ, ಜಗದೇವಿ ಹಳಿಸಗರ, ಗಂಗಮ್ಮ, ಮಂಜುಳಾ, ಭಾಗ್ಯಲಕ್ಷ್ಮೀ, ಅಲೀಂ ಜಮಾದಾರ ಹಾಗೂ ವೆಂಕಟೇಶ ಉಪಸ್ಥಿತರಿದ್ದರು.