
ಕಲಬುರಗಿ,ಮಾ.25-ಅನುಚಂದ್ರ ದೃಶ್ಯಕಲಾ ಹಾಗೂ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಯುವ ಕಲಾವಿದರಿಗೆ ಮಾ.24 ರಿಂದ 30ರವರೆಗೆ ಆಯೋಜಿಸಿರುವ 3ನೇ ಎಚ್ಚಿಂಗ್ ಕಾರ್ಯಗಾರವನ್ನು ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ ಜಿಲ್ಲಾ ಅಧ್ಯಕ್ಷ ಶಾಂತಮಲ್ಲ ಶಿವಭೋ ಉದ್ಘಾಟಿಸಿ ಮಾತನಾತನಾಡಿದರು.
ದೃಶ್ಯ ಕಲೆಗಳಲ್ಲಿ ಹಲವಾರು ಕಲೆಗಳುಂಟು ಅದರಲ್ಲಿ ಎಚ್ಚಿಂಗ್ ಮುದ್ರಣ ಕಲೆ ಕೂಡ ಒಂದು ಮೊದಲಿಗೆ 16ನೇ ಶತಮಾನದಲ್ಲಿ ರಾಜ್ಯ ಮಹಾರಾಜರ ಹಾಗೂ ಸೈನಿಕರ ಕವಚಗಳ ಮೇಲೆ ಆಮ್ಲಗಳಿಂದ ಮುಂದ್ರಿತಗೊಂಡವು ತಾಮ್ರ. ಹಿತ್ತಾಳೆ. ಕಂಚು. ಕಟ್ಟಿಗೆ. ಹೀಗೆ ಹಲವಾರು ಮಾಧ್ಯಮಗಳಲ್ಲಿ ಎಚ್ಚಿಂಗ್ ಮುದ್ರಣ ಕಲೆ ಪುರಾತನ ಕಾಲದಿಂದಲೂ ಕಾಣಬಹುದು ಈ ಕಾರ್ಯಗಾರ ವಿಶೇಷತೆಯಿಂದ ಕೂಡಿದೆ. ಕಲಾಕೃತಿಗಳು ಕಷ್ಟಪಟ್ಟು ಮಾಡುವದಕ್ಕಿಂತ ಇಷ್ಟಪಟ್ಟು ಮಾಡಿದ ಕಲಾಕೃತಿ ಪರಿಪೂರ್ಣವಾಗಿರುತ್ತದೆ ಮತ್ತು ನಾವು ರಚಿಸುವ ಕಲಾಕೃತಿ ನಮಗೆ ಖುಷಿ ಕೊಟ್ಟರೆ ಇಡೀ ಜಗತ್ತಿಗೆ ಖುಷಿ ಕೊಡುತ್ತದೆ ಎಂದರು.
ಕಲೆ ರಚನೆಯಲ್ಲಿ ಕಳಪೆ ಪ್ರದರ್ಶನಕ್ಕೆ ಅವಕಾಶವಿಲ್ಲ. ಯಾವುದೇ ಕಲಾಕೃತಿ ರಚನೆಯಲ್ಲಿ ನೂರಕ್ಕೆ ನೂರರಷ್ಟು ಶ್ರಮಿಸಿದಾಗ ಒಂದು ಉತ್ತಮ ಕಲಾಕೃತಿ ಹೊರಗೆ ಬರಲು ಸಾಧ್ಯ ಎಂದು ಶಿಬಿರಾರ್ಥಿಗಳಿಗೆ ಉತ್ತೇಜನೇ ನೀಡಿದರು.
ಸಂಸ್ಥೆಯ ಸಂಸ್ಥಾಪಕ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಂದ್ರಹಾಸ್ ಜಾಲಿಹಾಳ ಅವರು ಈ ಕಾರ್ಯಗಾರದ ಉದ್ದೇಶ ಕಲಿಕಾರ್ಥಿಗಳಿಗೆ ಕಲಿಕೆಗೆ ಒಂದು ಸೂಕ್ತ ಅವಕಾಶ ನೀಡಿ ಉತ್ತಮ ಕಲಾಕೃತಿ ಹೊರ ತರುವ ಆಸೆ ಹೊಂದಿದೆ. ನಮ್ಮ ಸಂಸ್ಥೆಯ ಇದು ಮೂರನೇ ಎಚ್ಚಿಂಗ್ ಕಾರ್ಯವಾಗಿದ್ದು. ಇದರ ಸದುಪಯೋಗವನ್ನು ಎಲ್ಲಾ ಕಲಿಕಾರ್ಥಿಗಳನ್ನು ಉತ್ತಮ ರೀತಿಯಲ್ಲಿ ಪಡೆದುಕೊಳ್ಳುತ್ತಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದು ನುಡಿದರು ಹಾಗೂ ಕಾರ್ಯಗಾರದ ನಂತರ ಕಲಿಕಾರ್ಥಿಗಳ ಕಲಾಕೃತಿಗಳು ಪ್ರದರ್ಶನ ಕೂಡ ಮಾಡಲಾಗುತ್ತದೆ ಎಂದು ತಿಳಿಸಿದರು.
ಡಾ ಪರಶುರಾಮ ನಿರೂಪಿಸಿದರು. ಮಲ್ಲಿಕಾರ್ಜುನ್ ಕೊರಳ್ಳಿ ವಂದಿಸಿದರು ಹಾಗೂ ಹಲವಾರು ಕಲಾವಿದರು ಉಪಸ್ಥಿತರಿದ್ದರು.
ಕಾರ್ಯಗಾರದಲ್ಲಿ ಭಾಗವಹಿಸಿದ ಯುವ ಕಲಾವಿದರಾದ ಕಾವ್ಯ ಗದ್ದಿ. ಪ್ರಿಯದರ್ಶಿನಿ ಸಿಂದೆ ಅಬಂಗ. ಸಾರಾ ಫಾತಿಮಾ. ವಿಜಯಲಕ್ಷ್ಮಿ. ಸೋನಾ ವಿ. ಅರುಣ ಅಶೋಕ್ ಗಾಣಗಿ. ನಿಖಿಲ್ ವಾಗ್ಮರೆ. ಮಹೇಶ್ ಬಿ. ನಿಂಗನಗೌಡ ಎಂ ಪಾಟೀಲ್. ಸಂದೀಪ್ ಜಾದವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




























