ಪಕ್ಷ ಸಂಘಟನೆಗೆ ಶ್ರಮಿಸಿದರೆ ಪದಾಧಿಕಾರಿಗಳಿಗೆ ಅಧಿಕಾರ

ಕೆಆರ್ ಪುರ, ಮೇ. ೨೭- ಪಕ್ಷ ಸಂಘಟನೆಗೆ ಶ್ರಮಿಸುವ ಪದಾಧಿಕಾರಿಗಳಿಗೆ ಮಾತ್ರ ಅಧಿಕಾರ ದೊರೆಯಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್ ಬಾಬು ಅವರು ತಿಳಿಸಿದರು.

ಕ್ಷೇತ್ರ ದೇವಸಂದ್ರದ ತಮ್ಮ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರ ಸಭೆಯಲ್ಲಿ ಅವರು ಮಾತನಾಡಿದರು.

ಪಕ್ಷದ ವಿವಿಧ ಭಾಗಗಳಲ್ಲಿ ಪೊಸ್ಟ್ ಗಳನ್ನು ತಗೊಂಡು ಪಕ್ಷಕ್ಕೆ ಹಾನಿಯುಂಟು ಮಾಡುವವರನ್ನು ದೂರವಿಡಿ ಪಕ್ಷಕ್ಕಾಗಿ ದುಡಿಯುತ್ತಿರುವವರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇನೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಸೆಕೆಂಡ್ ಲೀಡರ್ ಗಳನ್ನು ಹುಟ್ಟುಹಾಕಬೇಕಿದೆ. ಬ್ಲಾಕ್ ಅಧ್ಯಕ್ಷರಿಗೆ ಜಿಲ್ಲಾ ಮಟ್ಟಕ್ಕೆ ತೆಗೆದುಕೊಳ್ಳಲಾಗುತ್ತದೆ. ಕಾಂಗ್ರೆಸದ ಪಕ್ಷ ಸಮುದ್ರ ಮಾದರಿ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ ಎಂದು ಹೇಳಿದರು.

ಸದಸ್ಯತ್ವ ಹೆಚ್ಚಾಗಿ ಮಾಡಿ ಮಹಿಳಾ ಸಂಘಟನೆ ಹೆಚ್ಚಾಗಿ ಆಗಬೇಕು, ಹೊಸಬರನ್ನು ಕರೆ ತರುವ ಕೆಲಸ ಮಾಡಿ ಎಂದು ಹೇಳಿದರು.

ನೂತನ ಜಿಲ್ಲಾಧ್ಯಕ್ಷೆ ಶಿಲ್ಪಕಶ್ಯಾಪ್ ಅವರು ಮಾತನಾಡಿ, ಸೌಮ್ಯಾ ರೆಡ್ಡಿ ಅವರ ನಾಯಕತ್ವದಲ್ಲಿ ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರನ್ಜು ಸಂಘಟಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಕಳೆದ ೧೧ ವರ್ಷದಿಂದ ಸಂಘಟನೆ ಮಾಡುತ್ತಿದ್ದು ಪಕ್ಷ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವವರು ಮಾತ್ರ ಮುಂದೆ ಬನ್ನಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಕೋದಂಡರಾಮ, ಗ್ಯಾರೆಂಟಿ ಯೋಜನೆ ಕ್ಷೇತ್ರಾಧ್ಯಕ್ಷ ಜಯರಾಂ, ಮುಖಂಡರಾದ ಅಮಾನುಲ್ಲಾ, ಸಾಕಮ್ಮ,ಸುಜಾತಾ ಹಂಸರಾಜ್ ಮತ್ತಿತರರಿದ್ದರು.