ಗ್ರಾಮ ಪಂಚಾಯತಿ ವ್ಯಾಪ್ತಿಯೊಳಗಿರುವ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವೆ ; ಲಕ್ಷ್ಮೀ ಭಜಂತ್ರಿ

ಅಫಜಲಪುರ ;ಅ.10: ತಾಲೂಕಿನ ಕಟ್ಟ, ಕಡೆಯ ಗ್ರಾಮ ಪಂಚಾಯತಿ ಹಸರಗುಂಡಗಿ ಒಳಪಡುವ ಎಲ್ಲಾ ಗ್ರಾಮಗಳಲ್ಲಿ ಮೂಲ ಸೌಕರ್ಯ ಮತ್ತು ರಸ್ತೆಗಳ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವೆ ಎಂದು ಅಭಿವೃದ್ಧಿ ಅಧಿಕಾರಿ ಲಕ್ಷ್ಮೀ ಭಜಂತ್ರಿ ಹೇಳಿದರು.

ಹಸರಗುಂಡಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿರಸಾವಳಗಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಗ್ರಾಮದಲ್ಲಿ ಸಾರ್ವಜನಿಕರು ಓಡಾಡುವ ರಸ್ತೆ ಸಮಸ್ಯೆಯನ್ನು ಗ್ರಾಮಸ್ಥರಿಗೆ ಮನವೊಲಿಸುವ
ಮೂಲಕ ಸಮಸ್ಯೆ ಬಗೆಹರಿಸಲಾಯಿತು. ನಂತರ, ಗ್ರಾಮದಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದು, ಆದಷ್ಟು ಬೇಗ ಸಾರ್ವಜನಿಕರು ಓಡಾಡುವ ರಸ್ತೆಗಳು ತಾತ್ಕಾಲಿಕವಾಗಿ ಮುರುಮ ರಸ್ತೆ ನಿರ್ಮಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಅದ್ಯಕ್ಷ ಪತಿಯವರಾದ ಸುಭಾಷ್ ದುಖಾನದಾರ, ಕಿರಸಾವಳಗಿ ಗ್ರಾ.ಪಂ.ಸದಸ್ಯ ನರಸಪ್ಪ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.