
ಬೆಂಗಳೂರು ಏ೧:ವಾಣಿಜ್ಯ ಬಳಕೆಯ ಸಿಲಿಂಡರ್ ದರ ಏರಿಕೆಗೆ ಕಿಡಿ ಕಾರಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಏಪ್ರಿಲ್ ೧ ರಿಂದ ಮೋದಿ ಸರ್ಕಾರ ಮತ್ತು ಬಿಜೆಪಿಯಿಂದ “ಜನರ ಜೇಬಿಗೆ ಕತ್ತರಿ ಹಾಕುವ ಹೊಸ ಅಧ್ಯಾಯ ಆರಂಭವಾಗಿದೆ ಇದೇನಾ ಆ “ಅಚ್ಚೇ ದಿನ್” ಎಂದು ಪ್ರಶ್ನಿಸಿದ್ದಾರೆ
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು
ಇಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ೨೦೦ ಹೆಚ್ಚಿಸಲಾಗಿದೆ ಇದರೊಂದಿಗೆ ಪ್ರತಿ ಸಿಲಿಂಡರ್ ಬೆಲೆ ೨,೦೦೦ ಗಡಿಯನ್ನು ದಾಟಿದೆ!
ಇಂದು ಬೆಳಿಗ್ಗೆಯಿಂದ ಟೋಲ್ ಸುಂಕ ಏರಿಕೆಯಾಗಿದೆ. ಕರ್ನಾಟಕವೊಂದರಲ್ಲೇ ೨೦೨೬-೨೭ರಲ್ಲಿ ?೫,೦೦೦ ಕೋಟಿ ಮತ್ತು ಇಡೀ ದೇಶಾದ್ಯಂತ ೮೦,೦೦೦ ಕೋಟಿ ಟೋಲ್ ಸಂಗ್ರಹವಾಗಲಿದೆ!
ಈ ವರ್ಷ ರೂಪಾಯಿ ಮೌಲ್ಯವು ೧೦% ಕುಸಿದಿದೆ -೮೫ ರಿಂದ ?೯೫ ಕ್ಕೆ ಇಳಿಯುವ ಮೂಲಕ ಏಷ್ಯಾದಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಕರೆನ್ಸಿಯಾಗಿದೆ! ಎಂದು ಟೀಕಿಸಿದ್ದಾರೆ
ನಯಾರಾ ಎನರ್ಜಿ ಮಾರ್ಚ್ ೨೬ ರಂದು ಪೆಟ್ರೋಲ್ ಬೆಲೆಯನ್ನು ?೫.೩೦ ಮತ್ತು ಡೀಸೆಲ್ ಬೆಲೆಯನ್ನು ೩ ರಷ್ಟು ಹೆಚ್ಚಿಸಿದೆ.
ನಿನ್ನೆ, ಮಾರ್ಚ್ ೩೧ ರಂದು, ಮತ್ತೊಂದು ಖಾಸಗಿ ತೈಲ ಕಂಪನಿಯಾದ ಶೆಲ್ ಪೆಟ್ರೋಲ್ ಬೆಲೆಯನ್ನು ೧೧೨ ಕ್ಕ್ಕೆ ಮತ್ತು ಡೀಸೆಲ್ ಬೆಲೆಯನ್ನು ೯೮ ಕ್ಕೆ ಏರಿಸಿದೆ.
ಸಾಮಾನ್ಯ ಜನರ ಬೆನ್ನುಮೂಳೆ ಮುರಿಯಲು ಮೋದಿ ಸರ್ಕಾರವು ಈಗ ಪೆಟ್ರೋಲ್, ಡೀಸೆಲ್ ಮತ್ತು ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಹೆಚ್ಚಿಸಲು ಏಪ್ರಿಲ್ ೯ ಅಥವಾ ೨೩ ಕ್ಕಾಗಿ ಕಾಯುತ್ತಿದೆ. ಎಂದು ಹರಿಹಾಯಿದಿದ್ದಾರೆ
ಕೈಗಾರಿಕೆಗಳು ಮುಚ್ಚುತ್ತಿವೆ, ರಫ್ತು ಪ್ರಮಾಣ ಭಾರಿ ಪ್ರಮಾಣದಲ್ಲಿ ಕುಸಿದಿದೆ ಮತ್ತು ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ; ಇದರಿಂದಾಗಿ ಕಾರ್ಮಿಕರು ಮತ್ತು ಕೆಲಸಗಾರರು ಅನಿವಾರ್ಯವಾಗಿ ತಮ್ಮ ಹಳ್ಳಿಗಳಿಗೆ ಮರಳುತ್ತಿದ್ದಾರೆ.ಇವೇನಾ ಆ “ಅಚ್ಚೇ ದಿನ್” ಎಂದು ಅವರು ವ್ಯಂಗ್ಯವಾಡಿದ್ದಾರೆ































